ETV Bharat / bharat

ಮಣಿಪುರದಲ್ಲಿ ವಿದ್ಯಾರ್ಥಿಗಳ ಹತ್ಯೆ ಪ್ರಕರಣ: ಇಂಫಾಲ್​ಗೆ ತೆರಳಿದ ಸಿಬಿಐ ವಿಶೇಷ ನಿರ್ದೇಶಕರ ನೇತೃತ್ವದ ತಂಡ

ಮಣಿಪುರದಲ್ಲಿ ಇಬ್ಬರು ವಿದ್ಯಾರ್ಥಿಗಳ ಹತ್ಯೆಯ ತನಿಖೆಗಾಗಿ ಸಿಬಿಐ ವಿಶೇಷ ನಿರ್ದೇಶಕ ಅಜಯ್ ಭಟ್ನಾಗರ್ ಅವರು ಇತರ ಅಧಿಕಾರಿಗಳೊಂದಿಗೆ ವಿಶೇಷ ವಿಮಾನದಲ್ಲಿ ಬುಧವಾರ ಮಣಿಪುರಕ್ಕೆ ತಲುಪಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

CBI
ಸಿಬಿಐ
author img

By PTI

Published : Sep 27, 2023, 11:04 AM IST

ನವದೆಹಲಿ: ಜುಲೈ 6 ರಂದು ಮಣಿಪುರದಲ್ಲಿ ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳ 'ಅಪಹರಣ ಮತ್ತು ಕೊಲೆ' ಪ್ರಕರಣದ ತನಿಖೆಗಾಗಿ ಅಜಯ್ ಭಟ್ನಾಗರ್ ನೇತೃತ್ವದ ಕೇಂದ್ರೀಯ ತನಿಖಾ ದಳ (ಸಿಬಿಐ)ದ ಅಧಿಕಾರಿಗಳ ತಂಡ ವಿಶೇಷ ವಿಮಾನದ ಮೂಲಕ ಇಂದು ಇಂಫಾಲ್ ತಲುಪಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಮಣಿಪುರ ಸರ್ಕಾರ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿದ ಕೆಲವೇ ಗಂಟೆಗಳಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

  • In light of the distressing news that emerged yesterday regarding the tragic demise of the missing students, I want to assure the people of the State that both the state and central government are closely working together to nab the perpetrators.

    To further expedite this crucial…

    — N.Biren Singh (@NBirenSingh) September 26, 2023 " class="align-text-top noRightClick twitterSection" data=" ">

ಫೆಡರಲ್ ಏಜೆನ್ಸಿಯಲ್ಲಿ 2ನೇ ಶ್ರೇಣಿಯ ಅಧಿಕಾರಿಯಾಗಿರುವ ಭಟ್ನಾಗರ್ ನೇತೃತ್ವದ ಅಧಿಕಾರಿಗಳ ತಂಡ ಇಂಫಾಲ್‌ನಲ್ಲಿ ಮೊಕ್ಕಾಂ ಹೂಡಿರುವ ಜಂಟಿ ನಿರ್ದೇಶಕ ಘನಶ್ಯಾಮ್ ಉಪಾಧ್ಯಾಯ, ವಿಶೇಷ ಅಪರಾಧ, ವಿಚಾರಣೆ ಮತ್ತು ತಾಂತ್ರಿಕ ಕಣ್ಗಾವಲುಗಳಲ್ಲಿ ಪರಿಣತಿ ಹೊಂದಿರುವ ಅಧಿಕಾರಿಗಳನ್ನು ಒಳಗೊಂಡಿದೆ. ಅಲ್ಲದೇ ಇದು ಸಿಬಿಐನ ಗಣ್ಯ ಕೇಂದ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರನ್ನೂ ಹೊಂದಿರುತ್ತದೆ ಎಂದು ಮೂಲಗಳು ತಿಳಿಸಿವೆ.

ಜುಲೈನಲ್ಲಿ ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳಾದ ಫಿಜಾಮ್ ಹೆಮ್ಜಿತ್ (20) ಮತ್ತು ಹಿಜಾಮ್ ಲಿಂಥೋಯಿಂಗಂಬಿ (17) ಅವರ ಶವಗಳ ಫೋಟೋಗಳು ಸೋಮವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಎರಡು ಫೋಟೋಗಳಲ್ಲಿ ಒಂದರಲ್ಲಿ, ಈ ಇಬ್ಬರು ವಿದ್ಯಾರ್ಥಿಗಳು ಇಬ್ಬರು ಶಸ್ತ್ರಸಜ್ಜಿತ ವ್ಯಕ್ತಿಗಳೊಂದಿಗೆ ಕಾಣಿಸಿಕೊಂಡಿದ್ದಾರೆ. 2ನೇ ಫೋಟೋ ಇಬ್ಬರ ಶವಗಳದ್ದಾಗಿತ್ತು.

"ಈ ಇಬ್ಬರು ವಿದ್ಯಾರ್ಥಿಗಳು ಎಲ್ಲಿದ್ದಾರೆ ಎಂಬುದು ತಿಳಿದಿಲ್ಲ. ಅವರ ಮೊಬೈಲ್ ಫೋನ್‌ಗಳು ಸ್ವಿಚ್ ಆಫ್ ಆಗಿದೆ" ಎಂದು ಪೊಲೀಸರು ಈ ಹಿಂದೆ ತಿಳಿಸಿದ್ದರು. ಚುರಾಚಂದ್‌ಪುರ ಜಿಲ್ಲೆಯ ಚಳಿಗಾಲದ ಹೂವಿನ ಪ್ರವಾಸಿ ತಾಣದ ಬಳಿಯ ಲ್ಯಾಮ್‌ಡಾನ್‌ ಅವರ ಮೊಬೈಲ್​ ಫೋನ್ ಸಿಗ್ನಲ್ ಪತ್ತೆಯಾದ ಕೊನೆಯ ಸ್ಥಳ ಎಂದು ಪೊಲೀಸರು ತಿಳಿಸಿದ್ದಾರೆ. ​

"ನಾಪತ್ತೆಯಾದ ವಿದ್ಯಾರ್ಥಿಗಳ ದುರಂತ ಸಾವಿನ ಕುರಿತು ನಿನ್ನೆ ಬಂದ ಸುದ್ದಿ ದುಃಖಕರ. ದುಷ್ಕರ್ಮಿಗಳ ಪತ್ತೆಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡೂ ನಿಕಟವಾಗಿ ಕೆಲಸ ಮಾಡುತ್ತಿವೆ ಎಂದು ನಾನು ರಾಜ್ಯದ ಜನರಿಗೆ ಭರವಸೆ ನೀಡಲು ಬಯಸುತ್ತೇನೆ" ಎಂದು ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಈ ಪ್ರಕರಣದ ತನಿಖೆಗಾಗಿ ಸಿಬಿಐ ವಿಶೇಷ ನಿರ್ದೇಶಕರು ತಜ್ಞರ ತಂಡ ವಿಶೇಷ ವಿಮಾನದ ಮೂಲಕ ಇಂದು ಇಂಫಾಲ್ ತಲುಪಲಿದ್ದಾರೆ. ರಾಜ್ಯದಲ್ಲಿ ಸಿಬಿಐ ಅಧಿಕಾರಿಗಳ ಉಪಸ್ಥಿತಿ ಈ ವಿಷಯವನ್ನು ತ್ವರಿತವಾಗಿ ಪರಿಹರಿಸಲು ನಮ್ಮ ಅಧಿಕಾರಿಗಳ ಬದ್ಧತೆಯನ್ನು ಒತ್ತಿಹೇಳುತ್ತದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ನಾನು ನಿರಂತರವಾಗಿ ಸಂಪರ್ಕದಲ್ಲಿದ್ದೇನೆ ಎಂದು ಅವರು ತಿಳಿಸಿದರು.

ಮೃತ ವಿದ್ಯಾರ್ಥಿಗಳ ಫೋಟೋ ವೈರಲ್ ಆಗುತ್ತಿರುವ ಹಿನ್ನೆಲೆ ಯಾವುದೇ ಘಟನೆ ನಡೆಯದಂತೆ ತಡೆಯಲು ಭದ್ರತಾ ಸಿಬ್ಬಂದಿ ಅಲರ್ಟ್ ಆಗಿದ್ದಾರೆ. ಹೆಚ್ಚುವರಿ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಮಣಿಪುರ ಹಿಂಸಾಚಾರ: ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳು ಕೊಲೆಯಾದ ಸ್ಥಿತಿಯಲ್ಲಿ ಪತ್ತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.