ಫರಿದಾಬಾದ್(ಹರಿಯಾಣ): 10 ನೇ ತರಗತಿಯ ವಿದ್ಯಾರ್ಥಿಯೋರ್ವ 10ನೇ ಮಹಡಿಯ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಫರಿದಾಬಾದ್ ನಲ್ಲಿ ನಡೆದಿದೆ. ಸಾಯುವ ಮುನ್ನ ಡೆತ್ ನೋಟ್ ಬರೆದಿರುವುದಾಗಿ ತಿಳಿದುಬಂದಿದೆ.
ಈ ಕುರಿತು ವಿದ್ಯಾರ್ಥಿಯ ತಾಯಿಯು ಮಗನ ಸಹಪಾಠಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಸುಬೇ ಸಿಂಗ್ ಹೇಳಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿಗೆ ಆತನ ಸಹಪಾಠಿಗಳು ಮಾನಸಿಕ ಕಿರುಕುಳ ನೀಡಿರುವುದಾಗಿ ಹೇಳಲಾಗ್ತಿದೆ. ಈ ಬಗ್ಗೆ ವಿದ್ಯಾರ್ಥಿಯು ಚಿಕಿತ್ಸೆಗೂ ಒಳಗಾಗಿದ್ದ. ಆತನ ತಾಯಿಯ ದೂರಿನ ಮೇರೆಗೆ ಶಾಲಾ ಮುಖ್ಯಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಜೊತೆಗೆ ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿಯ ತಾಯಿಯೂ ಅದೇ ಶಾಲೆಯಲ್ಲಿ ಕೆಲಸ ಮಾಡುತ್ತಿರುವುದಾಗಿ ಫರಿದಾಬಾದ್ ಠಾಣೆಯ ಅಧಿಕಾರಿ ಅರ್ಜುನ್ ಹೇಳಿದ್ದಾರೆ.
ಓದಿ :ಉಕ್ರೇನ್ನ ಚೆರ್ನೊಬಿಲ್ ಬಳಿ ವಿಕಿರಣ ಹೊರಸೂಸುವಿಕೆ ಹೆಚ್ಚಳ: ವರದಿ