ETV Bharat / bharat

ಹೆಚ್ಚು ಅಂಕದ ಆಮಿಷವೊಡ್ಡಿ ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯ ಆರೋಪ: ಪ್ರಾಧ್ಯಾಪಕ, ವಿದ್ಯಾರ್ಥಿ ವಿರುದ್ಧ ಕೇಸ್ - ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯ

ರಾಜಸ್ಥಾನ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಉತ್ತಮ ಅಂಕ ನೀಡುವ ಆಮಿಷವೊಡ್ಡಿ ಪ್ರಾಧ್ಯಾಪಕನೋರ್ವ ವಿದ್ಯಾರ್ಥಿನಿಯರನ್ನು ಲೈಂಗಿಕವಾಗಿ ಬಳಕೆ ಮಾಡಿಕೊಂಡ ಬಗ್ಗೆ ಪ್ರಕರಣ ದಾಖಲಾಗಿದೆ.

student-alleged-rtus-professor-of-making-physical-relationship-for-good-marks
ಉತ್ತಮ ಅಂಕದ ಆಮಿಷವೊಡ್ಡಿ ಲೈಂಗಿಕವಾಗಿ ವಿದ್ಯಾರ್ಥಿನಿಯರ ಬಳಕೆ: ಪ್ರಾಧ್ಯಾಪಕ, ವಿದ್ಯಾರ್ಥಿ ವಿರುದ್ಧ ಕೇಸ್
author img

By

Published : Dec 21, 2022, 8:55 PM IST

ಕೋಟಾ (ರಾಜಸ್ಥಾನ): ವಿಶ್ವವಿದ್ಯಾಲಯದ ಪ್ರಾಧ್ಯಾಪಕನೋರ್ವ ಉತ್ತಮ ಅಂಕ ನೀಡುವ ಆಮಿಷವೊಡ್ಡಿ ವಿದ್ಯಾರ್ಥಿನಿಯರನ್ನು ಲೈಂಗಿಕವಾಗಿ ಬಳಕೆ ಮಾಡಿಕೊಳ್ಳುತ್ತಿದ್ದ ಆರೋಪ ಪ್ರಕರಣ ರಾಜಸ್ಥಾನದಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಆರೋಪಿ ಪ್ರಾಧ್ಯಾಪಕ ಮತ್ತು ಓರ್ವ ವಿದ್ಯಾರ್ಥಿ ವಿರುದ್ಧ ವಿದ್ಯಾರ್ಥಿನಿಯೊಬ್ಬಳು ಪೊಲೀಸ್​ ಕೇಸ್​ ದಾಖಲಿಸಿದ್ದಾಳೆ.

ವಿದ್ಯಾರ್ಥಿನಿಯ ದೂರಿನ ಮೇರೆಗೆ ರಾಜಸ್ಥಾನ ತಾಂತ್ರಿಕ ವಿಶ್ವವಿದ್ಯಾಲಯದ (ಆರ್‌ಟಿಯು) ಸಹ ಪ್ರಾಧ್ಯಾಪಕ ಗಿರೀಶ್ ಕುಮಾರ್ ಪರ್ಮಾರ್ ಮತ್ತು ಇದಕ್ಕೆ ಸಹಕಾರ ನೀಡುತ್ತಿದ್ದ ವಿದ್ಯಾರ್ಥಿ ವಿರುದ್ಧ ಕೋಟಾದ ದಾದಾಬಾದಿ ಪೊಲೀಸರು ಮಂಗಳವಾರ ರಾತ್ರಿ ಎಫ್​ಐಆರ್​​ ದಾಖಲಿಸಿದ್ದಾರೆ.

'ನಾನು ಪರೀಕ್ಷೆಯಲ್ಲಿ ಅನುತ್ತೀರ್ಣವಾಗಿದ್ದೆ. ಉತ್ತಮ ಅಂಕ ಪಡೆಯುಬೇಕಾದರೆ ಪ್ರಾಧ್ಯಾಪಕ ಪರ್ಮಾರ್‌ ಬಳಿಗೆ ಹೋಗುವಂತೆ ವಿದ್ಯಾರ್ಥಿ ಮನವೊಲಿಸಿದ್ದ. ಈ ವೇಳೆ ಪ್ರಾಧ್ಯಾಪಕ ನನ್ನ ಮೇಲೆ ಬಲತ್ಕಾರಕ್ಕೆ ಪ್ರಯತ್ನಿಸಿದ್ದರು. ಅಲ್ಲದೇ, ಪರ್ಮರ್ ತನ್ನೊಂದಿಗೆ ದೈಹಿಕ ಸಂಬಂಧ ಹೊಂದಲು ಅನೇಕ ವಿದ್ಯಾರ್ಥಿನಿಯರನ್ನು ಪ್ರಲೋಭಿಸುತ್ತಿದ್ದ. ಇದಕ್ಕೆ ಪ್ರತಿಯಾಗಿ ಉತ್ತಮ ಅಂಕಗಳನ್ನು ನೀಡುತ್ತಿದ್ದ' ಎಂದು ವಿದ್ಯಾರ್ಥಿನಿ ತನ್ನ ದೂರಿನಲ್ಲಿ ವಿವರಿಸಿದ್ದಾಳೆ.

ಈ ಬಗ್ಗೆ ದಾದಾಬಾದಿ ಪೊಲೀಸ್ ಠಾಣೆಯ ಎಸ್‌ಎಚ್‌ಒ ರಾಜೇಶ್ ಕುಮಾರ್ ಪಾಠಕ್ ಮಾತನಾಡಿ, ವಿದ್ಯಾರ್ಥಿನಿ ನೀಡಿರುವ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನೂ ಆರಂಭಿಸಲಾಗಿದೆ. ಈ ಸಂಬಂಧ ವಿದ್ಯಾರ್ಥಿಗಳ ವಿಚಾರಣೆ ಸಹ ಆರಂಭಿಸಲಾಗಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ವಿಜಯಪುರದಲ್ಲಿ ಗೋಳಗುಮ್ಮಟ ಸ್ಮಾರಕ ನೋಡಲು ಬಂದಿದ್ದ ಯುವತಿ ಆತ್ಮಹತ್ಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.