ETV Bharat / bharat

ಎಂವಿ ಕೆಮ್ ಪ್ಲುಟೊ ನೌಕೆ ಮೇಲೆ ಡ್ರೋನ್ ದಾಳಿ ಮಾಡಿರುವ ಸಾಧ್ಯತೆ: ಭಾರತೀಯ ನೌಕಾಪಡೆ - ಡ್ರೋನ್ ದಾಳಿ

''ಅರಬ್ಬಿ ಸಮುದ್ರದಲ್ಲಿ ಇತ್ತೀಚೆಗೆ ಎಂವಿ ಕೆಮ್ ಪ್ಲುಟೊ ನೌಕೆ ಮೇಲೆ ಡ್ರೋನ್ ದಾಳಿಯ ಪ್ರಬಲ ಸಾಧ್ಯತೆಯಿದೆ'' ಎಂದು ಭಾರತೀಯ ನೌಕಾಪಡೆ ಹೇಳಿದೆ.

Indian Navy
ಅರಬ್ಬಿ ಸಮುದ್ರದಲ್ಲಿ ಎಂವಿ ಕೆಮ್ ಪ್ಲುಟೊ ಮೇಲೆ ಡ್ರೋನ್ ದಾಳಿಯ ಪ್ರಬಲ ಸಾಧ್ಯತೆ: ಭಾರತೀಯ ನೌಕಾಪಡೆ
author img

By ETV Bharat Karnataka Team

Published : Dec 27, 2023, 9:41 AM IST

ನವದೆಹಲಿ: ''ಅರಬ್ಬಿ ಸಮುದ್ರದಲ್ಲಿ ವ್ಯಾಪಾರಿ ನೌಕೆ ಎಂವಿ ಕೆಮ್ ಪ್ಲುಟೊ ಮೇಲೆ ಇತ್ತೀಚೆಗೆ ನಡೆದ ದಾಳಿಯ ಬಗ್ಗೆ ಭಾರತೀಯ ನೌಕಾಪಡೆಯ ಪ್ರಾಥಮಿಕ ವಿಶ್ಲೇಷಣೆ ಮಾಡಿದೆ. ಇದು ಡ್ರೋನ್ ದಾಳಿಯ ಬಲವಾದ ಸಾಧ್ಯತೆಯನ್ನು ಸೂಚಿಸಿದೆ'' ಎಂದು ಭಾರತೀಯ ನೌಕಾಪಡೆ ತಿಳಿಸಿದೆ.

ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್ ಹರಿ ಕುಮಾರ್ ಅವರು ಮಂಗಳವಾರ, ಭಾರತೀಯ ನೌಕಾಪಡೆಯ ಸ್ಫೋಟಕ ಆರ್ಡನೆನ್ಸ್ ಡಿಸ್ಪೋಸಲ್ ತಂಡವು ಕೈಗೊಂಡ ಆರಂಭಿಕ ವಿಶ್ಲೇಷಣೆ ಹಾಗೂ ಮುಂದಿನ ಕ್ರಮಗಳ ಕುರಿತು ಭಾರತೀಯ ನೌಕಾಪಡೆಯ ಹೇಳಿಕೆಯ ಪ್ರಕಾರ ಮಾಹಿತಿ ನೀಡಿದರು. ಆಂತರಿಕ ಮತ್ತು ದೃಶ್ಯ ಪರೀಕ್ಷೆಯ ಆಧಾರದ ಮೇಲೆ ತನಿಖೆ ನಡೆದಿದೆ. ಡ್ರೋನ್​ನಿಂದ ಎಂವಿ ಕೆಮ್ ಪ್ಲುಟೊ ಮೇಲೆ ಸ್ಫೋಟ ಮಾಡಲಾಗಿದೆ. ಇದರಿಂದ ನೌಕೆಯ ವಾಟರ್‌ಲೈನ್‌ನ ಮೇಲೆ ವ್ಯಾಪಕವಾದ ಹಾನಿ ಉಂಟಾಗಿದೆ. ಇತರ ತನಿಖಾ ಸಂಸ್ಥೆಗಳ ಸಮನ್ವಯದಲ್ಲಿ ಹೆಚ್ಚಿನ ವಿಧಿವಿಜ್ಞಾನ ವಿಶ್ಲೇಷಣೆಗಾಗಿ ಭಾರತೀಯ ನೌಕಾಪಡೆಯು ಸ್ಪೋಟಕಗಳ ಅವಶೇಷಗಳನ್ನು ಸಂಗ್ರಹಿಸಿದೆ ಎಂದು ತಿಳಿಸಿದೆ.

ಭಾರತೀಯ ಕೋಸ್ಟ್ ಗಾರ್ಡ್ ಹೇಳಿಕೆ: 20 ಭಾರತೀಯ ಮತ್ತು ಒಬ್ಬ ವಿಯೆಟ್ನಾಂ ಸಿಬ್ಬಂದಿ ಇದ್ದ ಎಂವಿ ಕೆಮ್ ಪ್ಲುಟೊ ನೌಕೆಯ ಮೇಲೆ ಶಂಕಿತ ಡ್ರೋನ್‌ನಿಂದ ಶನಿವಾರ ದಾಳಿ ನಡೆದಿದೆ ಎಂದು ಭಾರತೀಯ ಕೋಸ್ಟ್ ಗಾರ್ಡ್ (ಐಸಿಜಿ) ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ವ್ಯಾಪಾರಿ ಹಡಗು ಡಿಸೆಂಬರ್ 19 ರಂದು ಯುಎಇಯಿಂದ ತನ್ನ ಪ್ರಯಾಣವನ್ನು ಪ್ರಾರಂಭಿಸಿತ್ತು. ಡಿಸೆಂಬರ್ 25ರಂದು ಹೊಸ ಮಂಗಳೂರು ಬಂದರಿಗೆ ಬಂದಿತ್ತು. ಇನ್ನು ಮುಂಬೈನಲ್ಲಿರುವ ಇಂಡಿಯನ್ ಕೋಸ್ಟ್ ಗಾರ್ಡ್ ಮಾರಿಟೈಮ್ ಪಾರುಗಾಣಿಕಾ ಸಮನ್ವಯ ಕೇಂದ್ರವು ಶಂಕಿತ ಡ್ರೋನ್ ಸ್ಟ್ರೈಕ್ ಅಥವಾ ವೈಮಾನಿಕ ವೇದಿಕೆಯಿಂದ ದಾಳಿಗೊಳಗಾದ ಎಂವಿ ಕೆಮ್ ಪ್ಲುಟೊದಲ್ಲಿ ಸ್ಫೋಟದ ಬಗ್ಗೆ ಮಾಹಿತಿ ಪಡೆದುಕೊಂಡಿದೆ. ಯಾವುದೇ ಜೀವಹಾನಿಯಾಗಿಲ್ಲ ಎಂದು ಖಚಿತಪಡಿಸಿತು. ಜೊತೆಗೆ ಎಲ್ಲ ಸಹಾಯವನ್ನು ಒದಗಿಸುವ ಭರವಸೆ ನೀಡಲಾಗಿದೆ ಎಂದು ಹೇಳಿದೆ.

ದಾಳಿಯ ಪ್ರಕಾರ, ಸ್ವರೂಪದ ಪ್ರಾಥಮಿಕ ಮೌಲ್ಯಮಾಪನ: ಹಡಗಿನ ಬೆಂಕಿಯನ್ನು ಸಿಬ್ಬಂದಿ ನಂದಿಸಿದ್ದಾರೆ. ಹಡಗಿನ ಸುರಕ್ಷತೆಯನ್ನು ಹೆಚ್ಚಿಸಲು, ಎಂಆರ್​ಸಿಸಿ ಮುಂಬೈ ಇಂಟರ್​ನ್ಯಾಷನಲ್ ಸೇಫ್ಟಿ ನೆಟ್ (ISN) ಅನ್ನು ಸಕ್ರಿಯಗೊಳಿಸಿದೆ. ಸಹಾಯಕ್ಕಾಗಿ ಸುತ್ತಮುತ್ತಲಿನ ಇತರ ವ್ಯಾಪಾರಿ ಹಡಗುಗಳನ್ನು ತಕ್ಷಣವೇ ಕೆಮ್ ಪ್ಲುಟೊ ನೌಕೆಯತ್ತ ತಿರುಗಿಸಲಾಯಿತು. ಸೋಮವಾರ ಮಧ್ಯಾಹ್ನ ಈ ಹಡಗು ಮುಂಬೈ ತಲುಪಿತು. ಮುಂಬೈನ ಔಟರ್ ಆಂಕಾರೇಜ್​ನಲ್ಲಿ ಸುರಕ್ಷಿತವಾಗಿ ನಿಲ್ಲಿಸಲಾಯಿತು. ನೌಕೆಯ ಆಗಮನದ ನಂತರ, ಭಾರತೀಯ ನೌಕಾಪಡೆಯ ಸ್ಫೋಟಕ ಆರ್ಡನೆನ್ಸ್ ವಿಲೇವಾರಿ ತಂಡವು ದಾಳಿಯ ಪ್ರಕಾರ ಮತ್ತು ಸ್ವರೂಪದ ಪ್ರಾಥಮಿಕ ಮೌಲ್ಯಮಾಪನವನ್ನು ಮಾಡಲು ಹಡಗನ್ನು ಪರಿಶೀಲಿಸಿತು.

ಭಾರತೀಯ ನೌಕಾಪಡೆಯ ಹೇಳಿಕೆಯ ಪ್ರಕಾರ, ನೌಕಾಪಡೆಯ ಸ್ಫೋಟಕ ಆರ್ಡನೆನ್ಸ್ ತಂಡದ ವಿಶ್ಲೇಷಣೆಯನ್ನು ಪೂರ್ಣಗೊಳಿಸಿದ ನಂತರ ವಿವಿಧ ಏಜೆನ್ಸಿಗಳ ಜಂಟಿ ತನಿಖೆಯನ್ನು ಪ್ರಾರಂಭಿಸಲಾಗಿದೆ. ಮುಂಬೈನಲ್ಲಿನ MV ಕೆಮ್ ಪ್ಲುಟೊವನ್ನು ಹೆಚ್ಚಿನ ಕಾರ್ಯಾಚರಣೆಗೆ ಅನುಮತಿಸಲಾಗಿದೆ. ಶಿಪ್ ಟು ಶಿಪ್ (STS) ಸರಕು ವರ್ಗಾವಣೆಯನ್ನು ಕೈಗೊಳ್ಳುವ ಮೊದಲು ವಿವಿಧ ತಪಾಸಣಾ ಅಧಿಕಾರಿಗಳಿಂದ ಕಡ್ಡಾಯ ತಪಾಸಣೆಗೆ ಒಳಗಾಗುವುದು ಅನಿವಾರ್ಯವಾಗಿದೆ.

ಭಾರತೀಯ ನೌಕಾಪಡೆಯು, ಅರಬ್ಬಿ ಸಮುದ್ರದಲ್ಲಿ ಇತ್ತೀಚಿನ ಘಟನೆಗಳ ಹಿನ್ನೆಲೆ, ಕೇಂದ್ರೀಕೃತ ಕಡಲ ಭದ್ರತಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ನೌಕಾಪಡೆಯು ಯುದ್ಧನೌಕೆಗಳನ್ನು ಗಣನೀಯವಾಗಿ ಹೆಚ್ಚಿಸಿದೆ. ಜಲ ಗಡಿಯನ್ನು ರಕ್ಷಿಸಲು ಮತ್ತು ಸಮುದ್ರ ಚಟುವಟಿಕೆಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ವಾಯು ಕಣ್ಗಾವಲನ್ನು ಹೆಚ್ಚಿಸಿದೆ ಎಂದು ಭಾರತೀಯ ನೌಕಾಪಡೆ ತಿಳಿಸಿದೆ.

ಭಾರತೀಯ ನೌಕಾಪಡೆ ಮಾಹಿತಿ: ಈ ಕಾರ್ಯಾಚರಣೆಗಳ ಪ್ರಾಥಮಿಕ ಉದ್ದೇಶವು ಅರಬ್ಬಿ ಸಮುದ್ರವನ್ನು ಸುರಕ್ಷಿತಗೊಳಿಸುವುದು ಮತ್ತು ಸಂಭಾವ್ಯ ಬೆದರಿಕೆಗಳಿಂದ ವ್ಯಾಪಾರಿ ಸಮುದ್ರ ಚಟುವಟಿಕೆಗಳನ್ನು ರಕ್ಷಿಸುವುದು. ಹೆಚ್ಚಿದ ನೌಕಾಪಡೆಯ ಉಪಸ್ಥಿತಿಯು ಪ್ರತಿಬಂಧಕವಾಗಿ ಕಾರ್ಯನಿರ್ವಹಿಸುತ್ತದೆ. ಸಮುದ್ರ ಪರಿಸರದ ಒಟ್ಟಾರೆ ಸುರಕ್ಷತೆ ಮತ್ತು ಸ್ಥಿರತೆಗೆ ಅನುಕೂಲವಾಗತ್ತದೆ ಎಂದು ನಿರೀಕ್ಷಿಸಲಾಗಿದೆ. ಭಾರತೀಯ ನೌಕಾಪಡೆಯು ಅರಬ್ಬಿ ಸಮುದ್ರದ ವಿವಿಧ ಪ್ರದೇಶಗಳಲ್ಲಿ INS ಮೊರ್ಮುಗೋ, INS ಕೊಚ್ಚಿ ಮತ್ತು INS ಕೋಲ್ಕತ್ತಾ ಸೇರಿದಂತೆ ಬಹು ಮಾರ್ಗದರ್ಶಿ ಕ್ಷಿಪಣಿ ವಿಧ್ವಂಸಕಗಳನ್ನು (ಆ್ಯಂಟಿ ಮಿಸೈಲ್​) ನಿಯೋಜಿಸಿದೆ ಎಂದು ಭಾರತೀಯ ನೌಕಾಪಡೆಯು ಸೋಮವಾರ ಅಧಿಕೃತ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಶಬರಿಮಲೆ: 39 ದಿನಗಳಲ್ಲಿ ₹204 ಕೋಟಿ ಆದಾಯ, 31 ಲಕ್ಷ ಭಕ್ತರಿಂದ ಅಯ್ಯಪ್ಪ ಸ್ವಾಮಿಯ ದರ್ಶನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.