ETV Bharat / bharat

ಉದಾರವಾದಿ ಪ್ರಜಾಪ್ರಭುತ್ವ ಬಲಪಡಿಸುವುದು ದೇಶದ ಬೆಳವಣಿಗೆಗೆ ಅಗತ್ಯ: ರಘುರಾಮ್ ರಾಜನ್ - ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್ ರಘುರಾಮ್ ರಾಜನ್

ಆರ್ಥಿಕ ಬೆಳವಣಿಗೆಯ ವಿಷಯದಲ್ಲಿ ದೇಶದ ಕಳಪೆ ಕಾರ್ಯಕ್ಷಮತೆಯು "ನಾವು ಸಾಗುತ್ತಿರುವ ಹಾದಿಯನ್ನು ಮರುಚಿಂತನೆ ಮಾಡುವ ಅಗತ್ಯವನ್ನು ಸೂಚಿಸುತ್ತದೆ" ಎಂದು ಆರ್‌ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಹೇಳಿದರು.

Raghuram Rajan
ರಘುರಾಮ್ ರಾಜನ್
author img

By

Published : Jul 31, 2022, 2:29 PM IST

ರಾಯ್‌ಪುರ(ಛತ್ತೀಸಘಡ್): ಉದಾರವಾದಿ ಪ್ರಜಾಪ್ರಭುತ್ವ ಮತ್ತು ಅದರ ಸಂಸ್ಥೆಗಳನ್ನು ಬಲಪಡಿಸುವುದರಲ್ಲಿ ಭಾರತದ ಭವಿಷ್ಯ ಅಡಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್ ರಘುರಾಮ್ ರಾಜನ್ ಶನಿವಾರ ಹೇಳಿದರು. ಆಲ್ ಇಂಡಿಯಾ ಪ್ರೊಫೆಷನಲ್ಸ್ ಕಾಂಗ್ರೆಸ್‌ನ 5ನೇ ಸಮಾವೇಶದಲ್ಲಿ 'ಭಾರತದ ಆರ್ಥಿಕಾಭಿವೃದ್ಧಿಗೆ ಉದಾರ ಪ್ರಜಾಪ್ರಭುತ್ವ ಏಕೆ ಬೇಕು?' ಎಂಬ ವಿಷಯದ ಕುರಿತು ಅವರು ಮಾತನಾಡಿದರು. ಅಲ್ಪಸಂಖ್ಯಾತರನ್ನು "ಎರಡನೇ ದರ್ಜೆಯ ಪ್ರಜೆ" ಗಳನ್ನಾಗಿ ಮಾಡುವ ಯಾವುದೇ ಪ್ರಯತ್ನವು ದೇಶವನ್ನು ವಿಭಜಿಸುತ್ತದೆ ಎಂದೂ ಇದೇ ಸಂದರ್ಭದಲ್ಲಿ ಕಳವಳ ವ್ಯಕ್ತಪಡಿಸಿದರು.

ಪ್ರಜಾಪ್ರಭುತ್ವವು ಭಾರತವನ್ನು ಹಿಮ್ಮೆಟ್ಟಿಸುತ್ತದೆ ಎಂಬ ಭಾವನೆ ಇಂದು ಕೆಲವು ವಲಯಗಳಲ್ಲಿದೆ. ಭಾರತವು ಬೆಳೆಯಲು ಕೆಲವು ನಿಯಂತ್ರಣಗಳು ಮತ್ತು ಸಮತೋಲನಗಳನ್ನು ಹೊಂದಿರುವ ಬಲಿಷ್ಠ, ಸರ್ವಾಧಿಕಾರಿ ನಾಯಕತ್ವದ ಅಗತ್ಯವಿದೆ ಮತ್ತು ನಾವು ಈ ದಿಕ್ಕಿನಲ್ಲಿ ಅಲೆಯುತ್ತಿರುವಂತೆ ತೋರುತ್ತಿದೆ. ಈ ವಾದವು ಸಂಪೂರ್ಣವಾಗಿ ತಪ್ಪಾಗಿದೆ ಎಂದು ನಾನು ನಂಬುತ್ತೇನೆ. ಇದು ಸರಕು ಮತ್ತು ಬಂಡವಾಳಕ್ಕೆ ಒತ್ತು ನೀಡುವ ಅಭಿವೃದ್ಧಿಯ ಹಳತಾದ ಮಾದರಿಯನ್ನು ಆಧರಿಸಿದೆ ರಾಜನ್‌ ಹೇಳಿದರು.

ಶ್ರೀಲಂಕಾ ಬಿಕ್ಕಟ್ಟು ಒಂದು ಪಾಠ: ಶ್ರೀಲಂಕಾದಲ್ಲಿ ನಡೆಯುತ್ತಿರುವ ಬಿಕ್ಕಟ್ಟನ್ನು ಉಲ್ಲೇಖಿಸಿದ ಅವರು, ದೇಶದ ರಾಜಕಾರಣಿಗಳು ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಉದ್ಯೋಗ ಬಿಕ್ಕಟ್ಟನ್ನು ಸೃಷ್ಟಿಸಲು ಪ್ರಯತ್ನಿಸಿದಾಗ ಏನಾಗುತ್ತದೆ ಎಂಬುದಕ್ಕೆ ಶ್ರೀಲಂಕಾ ಉದಾಹರಣೆ. ಇದರಿಂದ ಯಾವುದೇ ಒಳಿತಾಗುವುದಿಲ್ಲ ಎಂದರು.

ಇದನ್ನೂ ಓದಿ: ತ್ರಿವರ್ಣ ಧ್ವಜವನ್ನು ಸಾಮಾಜಿಕ ಮಾಧ್ಯಮಗಳ ಡಿಪಿಯಾಗಿ ಬಳಸಿ: ಪ್ರಧಾನಿ ಮೋದಿ ಕರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.