ETV Bharat / bharat

ಪ್ರಕರಣ ಭೇದಿಸಿದ ಬೀದಿ ನಾಯಿಗಳು.. ಸರ್ಕಲ್​ ಇನ್ಸ್​ಪೆಕ್ಟರ್​-ಸಬ್​ ಇನ್ಸ್​​ಪೆಕ್ಟರ್​ ಬಂಧನ

ಆಂಧ್ರಪ್ರದೇಶದಲ್ಲಿ ಬೀದಿ ನಾಯಿಗಳು ಕೊಲೆ ಪ್ರಕರಣವನ್ನು ಭೇದಿಸಿವೆ. ಇಬ್ಬರು ಭ್ರಷ್ಟ ಪೊಲೀಸ್ ಅಧಿಕಾರಿಗಳನ್ನು ಸೆರೆಹಿಡಿಯುವಲ್ಲಿ ಬೀದಿ ನಾಯಿಗಳು ಪೊಲೀಸ್​ ಇಲಾಖೆಗೆ ಸಹಾಯ ಮಾಡಿವೆ. ಯಾವರೀತಿ ಎಂಬುದನ್ನು ತಿಳಿಯೋಣಾ ಬನ್ನಿ..

CI and SI arrested for tampering with murder case  CI and SI arrested  corrupt police officers  manipulation of a murder case  Stray dogs solve a murder case  CI and SI arrested in Andhra Pradesh  ಪ್ರಕರಣ ಬೇಧಿಸಿದ ಬೀದಿ ನಾಯಿಗಳು  ಭ್ರಷ್ಟ ಪೊಲೀಸ್ ಅಧಿಕಾರಿಗಳನ್ನು ಸೆರೆ  ಬೀದಿ ನಾಯಿಗಳು ಪೊಲೀಸ್​ ಇಲಾಖೆಗೆ ಸಹಾಯ  ಸಾಫ್ಟ್​ವೇರ್​ ಉದ್ಯೋಗಿ ಕೊಲೆ ಪ್ರಕರಣ  ಉದ್ಯೋಗಿ ಗಾಡಿಕೊಯ್ಯ ಶ್ರೀನಿವಾಸ ರೆಡ್ಡಿ ಕೊಲೆ  ವಿವಾಹೇತರ ಸಂಬಂಧವೇ ಕೊಲೆಗೆ ಕಾರಣ
ಪ್ರಕರಣ ಬೇಧಿಸಿದ ಬೀದಿ ನಾಯಿಗಳು
author img

By

Published : Oct 15, 2022, 2:15 PM IST

ಅಮರಾವತಿ, ಆಂಧ್ರಪ್ರದೇಶ: ಕೊಲೆ ಪ್ರಕರಣವನ್ನು ತಿರುಚಲು ಭಾರಿ ಲಂಚ ಪಡೆದ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಭ್ರಷ್ಟಾಚಾರ ನಿಗ್ರಹ ಇಲಾಖೆ ಅಧಿಕಾರಿಗಳು ಶುಕ್ರವಾರ ಬಂಧಿಸಿದ್ದಾರೆ. ಪಮಿಡಿಮುಕ್ಕಲ ಸಿಐ ಮೇದಿಕೊಂಡ ಮುಕ್ತೇಶ್ವರ ರಾವ್ ಮತ್ತು ತೊಟ್ಲವಳ್ಳೂರು ಎಸ್‌ಐ ಯಾದಗಿರಿ ಅರ್ಜುನ್​ರನ್ನು ಬಂಧಿಸಿ ರಿಮಾಂಡ್‌ಗೆ ಒಪ್ಪಿಸಲಾಗಿದೆ. ಈ ಬಗ್ಗೆ ಡಿಜಿಪಿ ರಾಜೇಂದ್ರನಾಥ ರೆಡ್ಡಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಸಾಫ್ಟ್​ವೇರ್​ ಉದ್ಯೋಗಿ ಕೊಲೆ ಪ್ರಕರಣ : 2022ರ ಜುಲೈ 26ರಂದು ತೋಟವಳ್ಳೂರು ತಾಲೂಕಿನ ಅಲ್ಲಾವರಿಪಾಲೆಂನಲ್ಲಿ ಸಾಫ್ಟ್‌ವೇರ್ ಉದ್ಯೋಗಿ ಗಾಡಿಕೊಯ್ಯ ಶ್ರೀನಿವಾಸ ರೆಡ್ಡಿ ಕೊಲೆಯಾಗಿದ್ದರು. ಈ ಪ್ರಕರಣದ ತನಿಖೆಯಿಂದ ವಿವಾಹೇತರ ಸಂಬಂಧವೇ ಕೊಲೆಗೆ ಕಾರಣ ಎಂಬುದು ತಿಳಿದುಬಂದಿತ್ತು. ಇದರಲ್ಲಿ ಅಲ್ಲಾ ಶ್ರೀಕಾಂತ್​ ರೆಡ್ಡಿ ಮತ್ತು ಅವರ ಕುಟುಂಬ ಸದಸ್ಯರು ಭಾಗಿಯಾಗಿದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು.

ವಿಷಯ ಬೆಳಕಿಗೆ ಬಂದರೆ ತಮ್ಮ ಕುಟುಂಬಕ್ಕೆ ಅವಮಾನವಾಗುತ್ತದೆ ಎಂದುಕೊಂಡ ಶ್ರೀಕಾಂತ್​ ರೆಡ್ಡಿ ಆಡಳಿತ ಪಕ್ಷದ ಜೊನ್ನಾಲ ನರೇಂದ್ರರೆಡ್ಡಿಯತ್ತ ಮುಖ ಮಾಡಿದರು. ಸುಮಾರು ರೂ.1.50 ಕೋಟಿ ವೆಚ್ಚವಾಗಲಿದೆ ಎಂದು ಶ್ರೀಕಾಂತ್​ ರೆಡ್ಡಿಗೆ ಹೇಳಿ ಆರೋಪಿಯ ಕುಟುಂಬದ ಜತೆ ನರೇಂದ್ರ ರೆಡ್ಡಿ ಒಪ್ಪಂದ ಮಾಡಿಕೊಂಡಿದ್ದಾರೆ. ಇದಕ್ಕಾಗಿ ಸಿಐ ಮುಕ್ತೇಶ್ವರ ರಾವ್ ಮತ್ತು ಎಸ್‌ಐ ಅರ್ಜುನ್​ರನ್ನು ಸಂಪರ್ಕಿಸಲಾಗಿತ್ತು.

ನರೇಂದ್ರರೆಡ್ಡಿ ಎಸ್‌ಐಗೆ 1.60 ಲಕ್ಷ ರೂ., ಸಿಐಗೆ 12.50 ಲಕ್ಷ ರೂ. ಲಂಚ ನೀಡಿದ್ದರು. ಹೀಗಾಗಿ ಶ್ರೀನಿವಾಸ ರೆಡ್ಡಿ ಹತ್ಯೆ ಪ್ರಕರಣದಲ್ಲಿ ಅಲ್ಲಾ ಶ್ರೀಕಾಂತ್ ರೆಡ್ಡಿ ಮತ್ತು ಅವರ ಕುಟುಂಬ ಸದಸ್ಯರ ಹೆಸರುಗಳನ್ನು ಸೇರಿಸದಂತೆ ಸಿಐ ಕ್ರಮಕೈಗೊಂಡಿದ್ದನು. ತೊಟ್ಲವಳ್ಳೂರು ತಾಲೂಕಿನ ಭದ್ರರಾಜುಪಾಲೇನಿಯ ಆಡಳಿತ ಪಕ್ಷದ ನಾಯಕ ಪುಚ್ಚಕ್ಕಯ್ಯಲ ಶ್ರೀನಿವಾಸ ರೆಡ್ಡಿಗೆ ಈ ಡೀಲ್ ವಿಷಯ ತಿಳಿಯಿತು.

ಶ್ರೀನಿವಾಸ ರೆಡ್ಡಿ ನಾಪತ್ತೆಯಿಂದ ಮಹತ್ವದ ತಿರುವು: ತೊಟ್ಲವಳ್ಳೂರು ಪಂಚಾಯ್ತಿ ಪ್ರಕರಣಗಳಲ್ಲಿ ಪುಚ್ಚಕ್ಕಯ್ಯಲ ಶ್ರೀನಿವಾಸ ರೆಡ್ಡಿ ಹಾಗೂ ನರೇಂದ್ರರೆಡ್ಡಿ ನಡುವೆ ವೈಷಮ್ಯವಿದೆ. ಇದರೊಂದಿಗೆ ಶ್ರೀನಿವಾಸ ರೆಡ್ಡಿಯ ಅಡೆತಡೆಯನ್ನು ನಿವಾರಿಸಲು ನರೇಂದ್ರರೆಡ್ಡಿ ನಿರ್ಧರಿಸಿದ್ದಾರೆ. ಡೀಲ್ ಬಗ್ಗೆ ಮಾತನಾಡಲು ಕರೆಸಿ ಪ್ಲಾನ್ ಪ್ರಕಾರ ಹತ್ಯೆ ಮಾಡಲಾಗಿತ್ತು. ಆತ್ಕೂರು ಪೊಲೀಸ್ ಠಾಣಾ ವ್ಯಾಪ್ತಿಯ ಬಳ್ಳಿಪರ್ರು ಎಂಬಲ್ಲಿ ಶವವನ್ನು ಹೂಳಲಾಗಿತ್ತು. ಬಳಿಕ ಪುಚ್ಚಕ್ಕಯ್ಯಲ ಶ್ರೀನಿವಾಸ ರೆಡ್ಡಿ ನಾಪತ್ತೆಯಾಗಿದ್ದಾರೆ ಎಂದು ತೊಟ್ಲವಳ್ಳೂರು ಪೊಲೀಸ್ ಠಾಣೆಯಲ್ಲಿ ಸೆ.23ರಂದು ಪ್ರಕರಣ ದಾಖಲಾಗಿತ್ತು.

ಹೂತಿಟ್ಟ ಶವದತ್ತ ಬೀದಿ ನಾಯಿಗಳು ಗುಟುರು ಹಾಕುತ್ತಿದ್ದಾಗ ಕೈಗಳು ಹೊರಬಂದಿವೆ. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ ನಂತರ ಅತ್ಕೂರು ಪೊಲೀಸರು ಅಪರಿಚಿತ ಶವದ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದರು. ವಿಷಯ ತಿಳಿದ ನಂತರ ನರೇಂದ್ರ ರೆಡ್ಡಿಯನ್ನು ಶ್ರೀನಿವಾಸ್​ ರೆಡ್ಡಿ ಹತ್ಯೆ ಪ್ರಕರಣದಲ್ಲಿ ಸೆ.27ರಂದು ಬಂಧಿಸಲಾಗಿತ್ತು.

ತೊಟ್ಲವಳ್ಳೂರು ಕೊಲೆ ಪ್ರಕರಣದಲ್ಲಿ ಪೊಲೀಸರಿಗೆ ಲಂಚ ನೀಡಿರುವುದು ಈ ಪ್ರಕರಣದ ತನಿಖೆಯ ವೇಳೆ ಪೊಲೀಸರಿಗೆ ತಿಳಿಯಿತು. ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಶುಕ್ರವಾರ ಸಿಐ ಮುಕ್ತೇಶ್ವರ್ ರಾವ್ ಹಾಗೂ ಎಸ್ ಐ ಅರ್ಜುನ್ ಅವರನ್ನು ಬಂಧಿಸಲಾಗಿದ್ದು, ಮುಂದಿನ ಕ್ರಮವನ್ನು ಪೊಲೀಸರು ಅನುಸರಿಸಿದ್ದಾರೆ.

ಓದಿ: ರಾಜ್ಯದಲ್ಲಿ ಮರ್ಯಾದೆ ಹತ್ಯೆ: ಕಲಿಯುವ ವಯಸ್ಸಿನಲ್ಲಿ ಪ್ರೀತಿ, ಪ್ರೇಮ ಬಲೆಗೆ ಬಿದ್ದ ಹಕ್ಕಿಗಳು.. ಯುವಕ ಕೊಲೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.