ಜೈಪುರ (ರಾಜಸ್ಥಾನ): ಜೈಪುರದ ಶಾಹಪುರದ ಖೋರಲದ್ಖಾನಿ ಗ್ರಾಮದಲ್ಲಿ ಐದು ವರ್ಷದ ಬಾಲಕಿಯ ಮೇಲೆ ಬೀದಿ ನಾಯಿ ದಾಳಿ ಮಾಡಿ ತೀವ್ರವಾಗಿ ಗಾಯಗೊಳಿಸಿದೆ. ಬಾಲಕಿಗೆ ಶ್ವಾಸಕೋಶದ ಸಮಸ್ಯೆಯೂ ಇದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಎದೆಯ ಮೇಲೆ ಕಚ್ಚಿದ ಗುರುತುಗಳಾಗಿವೆ ಎಂದು ಜೆ ಕೆ ಲೋನ್ ಆಸ್ಪತ್ರೆಯ ಡಾ.ಮನೀಶ್ ಶರ್ಮಾ ತಿಳಿಸಿದರು.
ಬಾಲಕಿಯ ಆರೋಗ್ಯ ಸ್ಥಿತಿ ನೋಡಿಕೊಂಡು ಎದೆಗೆ ಟ್ಯೂಬ್ ಅಳವಡಿಸಲಾಗಿದೆ. ಚಿಕಿತ್ಸೆಯ ಬಳಿಕ ಆರೋಗ್ಯ ಸ್ಥಿರವಾಗಿದೆ. ಎಷ್ಟು ದಿನದಲ್ಲಿ ಚೇತರಿಸಿಕೊಳ್ಳುತ್ತಾಳೆ ಎಂದು ಹೇಳುವುದು ಕಷ್ಟ ಅವರು ಹೇಳಿದರು.
ಇದನ್ನೂ ಓದಿ: ಶ್ರದ್ಧಾ ಹತ್ಯೆ: ಅಫ್ತಾಬ್ನ ಧ್ವನಿ ಮಾದರಿ ದಾಖಲಿಸಿಕೊಂಡ ಸಿಎಫ್‌ಎಸ್‌ಎಲ್ ತಂಡ