ETV Bharat / bharat

ಲೈಫ್​ ಜಾಕೆಟ್‌ನಲ್ಲಿ 11 ಗಂಟೆ ಸಮುದ್ರದಲ್ಲೇ ಕಳೆದ ಸಿಬ್ಬಂದಿ: ನೌಕಾಪಡೆಗೆ ಮಂಡಿಯೂರಿ ಕೃತಜ್ಞತೆ - Mumbai

ಮುಂಬೈ ಸಮೀಪ ಅರಬ್ಬಿ ಸಮುದ್ರದಲ್ಲಿ P305 ಬೋಟ್ ದುರಂತದಲ್ಲಿ ರಕ್ಷಿಸಲ್ಪಟ್ಟವರು ಭಾರತೀಯ ನೌಕಾಪಡೆಗೆ ಕೃತಜ್ಞತೆ ಸಲ್ಲಿಸಿದ್ದು, ತಮ್ಮ ಭಯಾನಕ ಅನುಭವಗಳನ್ನು ಹಂಚಿಕೊಂಡಿದ್ದಾರೆ.

Stories Of Survival in barge P305 tragedy
ಬೋಟ್​ ದುರಂತ
author img

By

Published : May 20, 2021, 12:07 PM IST

Updated : May 20, 2021, 1:11 PM IST

ಮುಂಬೈ (ಮಹಾರಾಷ್ಟ್ರ): ತೌಕ್ತೆ ಚಂಡಮಾರುತದ ಅಬ್ಬರಕ್ಕೆ ಮುಳುಗಿದ್ದ P305 ಬೋಟ್​ನಲ್ಲಿದ್ದ 186 ಮಂದಿಯನ್ನು ಭಾರತೀಯ ನೌಕಾಪಡೆ ರಕ್ಷಿಸಿದ್ದು, ಅಪಾಯದಿಂದ ಪಾರಾಗಿ ಬದುಕುಳಿದ ಬಾರ್ಜ್​ ಸಿಬ್ಬಂದಿ ತಾವು ಎದುರಿಸಿದ ಕರಾಳ ಪರಿಸ್ಥಿತಿಯನ್ನು ವಿವರಿಸಿದ್ದಾರೆ.

"ಬೋಟ್​ ಮುಳುಗುತ್ತಿತ್ತು, ಉಪಾಯವಿಲ್ಲದೆ ಸಮುದ್ರಕ್ಕೆ ಹಾರಬೇಕಾಯಿತು. ಭೀಕರ ಸಮುದ್ರದ ಅಲೆಗಳ ನಡುವೆ ಲೈಫ್​ ಜಾಕೆಟ್​ ಹಾಕ್ಕೊಂಡು 11 ಗಂಟೆ ಕಳೆದಿರುವೆ. ಸಮುದ್ರದಲ್ಲಿ ತೇಲುತ್ತಿದ್ದ ನನ್ನನ್ನು ರಕ್ಷಿಸಿದ ನೌಕಾಪಡೆ ಸಿಬ್ಬಂದಿಗೆ ಧನ್ಯವಾದಗಳು" ಎಂದು ಅಮಿತ್ ಕುಮಾರ್ ಕುಶ್ವಾಹ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಬೋಟ್​ ದುರಂತದಲ್ಲಿ ಪಾರಾದವರ ಪ್ರತಿಕ್ರಿಯೆ

ಸಮುದ್ರದಿಂದ ರಕ್ಷಿಸುವ ಮೊದಲು ತೀವ್ರವಾಗಿ ಗಾಯಗೊಂಡಿದ್ದ ಮತ್ತೊಬ್ಬ ಬೋಟ್​ ಸಿಬ್ಬಂದಿ, " ನೌಕಾಪಡೆಗೆ ಇಲ್ಲದಿದ್ದರೆ ತನ್ನ ಸಹೋದ್ಯೋಗಿಗಳು ಯಾರೂ ಜೀವಂತವಾಗಿರುತ್ತಿರಲಿಲ್ಲ. ನೌಕಾಪಡೆಯ ಸಿಬ್ಬಂದಿ ಕಾರಣದಿಂದಾಗಿ ನಾನೂ ಜೀವಂತವಾಗಿದ್ದೇನೆ" ಎಂದು ಮಂಡಿಯೂರಿ ಕೃತಜ್ಞತೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಅರಬ್ಬಿ ಸಮುದ್ರದಲ್ಲಿ ಬಾರ್ಜ್​ ಮುಳುಗಡೆ: 37 ಶವಗಳು ಪತ್ತೆ, ಇನ್ನೂ 38 ಮಂದಿಗೆ ಮುಂದುವರೆದ ಶೋಧ

"ಬೋಟ್​ ಮುಳುಗುತ್ತಿದ್ದಾಗ ನೀರಿಗೆ ಹಾರಲು ಹೋಗಿ ನನ್ನ ಕಾಲಿಗೆ ಬಲವಾದ ಗಾಯವಾಯಿತು. ನೌಕಾಪಡೆಗೆ ಇಲ್ಲದಿದ್ದರೆ ನಾನು ಸಾಯುತ್ತಿದ್ದೆ" ಎಂದು ಬೋಟ್​ ದುರಂತದಲ್ಲಿ ಬದುಕುಳಿದ ವಿಕಾಸ್ ಕುಮಾರ್ ಹೇಳುತ್ತಾರೆ.

ಮೂರು ದಿನಗಳ ಹಿಂದೆ ತೌಕ್ತೆ ಚಂಡಮಾರುತದ ಆರ್ಭಟದಿಂದಾಗಿ ಮುಂಬೈ ತಟದ ಅರಬ್ಬಿ ಸಮುದ್ರದಲ್ಲಿ 410 ಜನರಿದ್ದ ಮಾನವ-ಸರಕು ಸಾಗಣೆಯ ಎರಡು ಬೋಟ್​ಗಳು ಕೊಚ್ಚಿ ಹೋಗಿತ್ತು. P305 ಬೋಟ್​ನಲ್ಲಿ 261ಜನರ ಪೈಕಿ 186 ಮಂದಿಯನ್ನು ರಕ್ಷಿಸಲಾಗಿದ್ದು, ಈವರೆಗೆ 37 ಜನರ ಮೃತದೇಹ ಸಿಕ್ಕಿದೆ. ಉಳಿದ 38 ಮಂದಿಗಾಗಿ ನೌಕಾಪಡೆ ರಕ್ಷಣಾ-ಶೋಧ ಕಾರ್ಯಾಚರಣೆ ಮುಂದುವರೆಸಿದೆ.

Last Updated : May 20, 2021, 1:11 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.