ETV Bharat / bharat

'ಶಾಲಾ ಆವರಣದಲ್ಲಿ RSS ಕಾರ್ಯಕ್ರಮ ನಿಲ್ಲಿಸಿ'.. ತಮಿಳುನಾಡಿನಲ್ಲಿ ರಾಜಕೀಯ ಪಕ್ಷಗಳ ಆಂದೋಲನ

author img

By

Published : Jan 1, 2022, 9:56 PM IST

ತಮಿಳುನಾಡಿನ ಶಾಲೆವೊಂದರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ(RSS) ಕಾರ್ಯಕ್ರಮ ಆಯೋಜನೆ ಮಾಡಿದ್ದು, ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.

Stop RSS Program in school campus
Stop RSS Program in school campus

ಚೆನ್ನೈ(ತಮಿಳುನಾಡು): ಕೊಯಮತ್ತೂರಿನ ಶಾಲಾ ಆವರಣದಲ್ಲಿ ನಡೆಯುತ್ತಿರುವ ಆರ್​​ಎಸ್​ಎಸ್​ ಕಾರ್ಯಕ್ರಮ ನಿಲ್ಲಿಸುವಂತೆ ತಮಿಳುನಾಡಿನ ವಿವಿಧ ರಾಜಕೀಯ ಪಕ್ಷಗಳು ಇದೀಗ ಆಂದೋಲನ ಶುರು ಮಾಡಿವೆ.

ಕೊಯಮತ್ತೂರಿನ ವಿಲಂಕುರಿಚಿಯಲ್ಲಿರುವ ಶಾಲೆವೊಂದರಲ್ಲಿ ಆರ್​​ಎಸ್​ಎಸ್​​ ಕಳೆದ 8 ದಿನಗಳಿಂದ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.

ಆರ್​ಎಸ್​ಎಸ್​ ಕಾರ್ಯಕ್ರಮ ನಿಲ್ಲಿಸುವಂತೆ ಆಂದೋಲನ

ರಾಜಕೀಯ ಪಕ್ಷಗಳಾದ ನಾಮ್​ ತಮಿಳರ್​ ಕಚ್ಚಿ, ತಂತೈ ಪೆರಿಯಾರ್​​ ದ್ರಾವಿಡರ್​ ಕಳಗಂ, ವಿದುತಲೈ ಸಿರುತೈಕಲ್​ ಕಚ್ಚಿ, ಮಕ್ಕಳ್​ ಅತಿಕಾರಂ ಇದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ. ಜೊತೆಗೆ ಆರ್​​ಎಸ್​ಎಸ್​, ಬಿಜೆಪಿ ಮತ್ತು ಇತರೆ ಪಕ್ಷಗಳ ನಡುವೆ ಮಾತಿನ ಚಕಮಕಿ ಸಹ ನಡೆದಿದೆ.

ಇದನ್ನೂ ಓದಿರಿ: ಸೀಕ್ರೆಟ್​​ ಆಗಿ ಹಸೆಮಣೆ ಏರಿದ ಉರಿ ಚಿತ್ರದ ನಟ.. ಫೋಟೋ ವೈರಲ್​​!

ಪ್ರಕರಣಕ್ಕೆ ಸಂಬಂಧಿಸಿದಂತೆ ಪೀಲಮೇಡು ಪೊಲೀಸ್ ಠಾಣೆಯಲ್ಲಿ RSS ಜಿಲ್ಲಾ ಕಾರ್ಯದರ್ಶಿ ಮುರುಬಾಗ್​​, ಬಿಜೆಪಿಯ ಕಾಳಿದಾಸ್ ಸೇರಿದಂತೆ ಅನೇಕರ ವಿರುದ್ಧ ಸರ್ಕಾರಿ ನೌಕರರ ಕೆಲಸಕ್ಕೆ ಅಡ್ಡಿ ಸೇರಿದಂತೆ ವಿವಿಧ ಸೆಕ್ಷನ್​ಗಳ ಅಡಿ ಪ್ರಕರಣ ದಾಖಲಾಗಿದೆ. ಇದೊಂದು ಕಾನೂನು ಬಾಹಿರ ಸಭೆಯಾಗಿದೆ ಎಂಬ ಆರೋಪಗಳಿದ್ದು, ಇಲ್ಲಿಯವರೆಗೆ ಯಾರನ್ನೂ ಬಂಧಿಸಿರುವ ಬಗ್ಗೆ ಮಾಹಿತಿ ಹೊರಬಿದ್ದಿಲ್ಲ. ​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.