ಚೆನ್ನೈ (ತಮಿಳುನಾಡು): ಕಿಂಗ್ ಜಾರ್ಜ್ III ರ ಲಂಡನ್ ವಸ್ತುಸಂಗ್ರಹದಲ್ಲಿದ್ದ 300 ವರ್ಷಗಳಷ್ಟು ಹಳೆಯ ನಾಪತ್ತೆಯಾದ ಪ್ರಾಚೀನ ತಮಿಳು ಬೈಬಲ್ ಅನ್ನು ತಮಿಳುನಾಡಿನ ಸಿಐಡಿಯ ಐಡಲ್ ವಿಂಗ್ ಪತ್ತೆಹಚ್ಚಿದೆ. ಹೊಸ ಒಡಂಬಡಿಕೆ ಪುಸ್ತಕವನ್ನು 1715 ರಲ್ಲಿ ಡ್ಯಾನಿಶ್ ಮಿಷನರಿ ಬಾರ್ತಲೋಮಿಯಸ್ ಜೀಗೆನ್‌ಬಾಲ್ಗ್ ಅನುವಾದಿಸಿದ್ದರು.
ಬಾರ್ತಲೋಮಿಯಸ್ 1706 ರಲ್ಲಿ ತಮಿಳುನಾಡಿನ ನಾಗಪಟ್ಟಿಣಂ ಜಿಲ್ಲೆಗೆ ಬಂದು ಮುದ್ರಣಾಲಯವನ್ನು ಸ್ಥಾಪಿಸಿದರು. ಅವರು ಭಾರತೀಯ ಧರ್ಮ ಮತ್ತು ಸಂಸ್ಕೃತಿಯ ಕುರಿತು ತಮಿಳು ಭಾಷೆಯ ಅಧ್ಯಯನಗಳನ್ನು ಇಲ್ಲಿ ಪ್ರಕಟಿಸಿದ್ದರು. ಈ ವೇಳೆ ಬೈಬಲ್ ಅನ್ನು ತಮಿಳಿಗೆ ಅನುವಾದಿಸಿ 1715 ರಲ್ಲಿ ಪ್ರಕಟಿಸಿದ್ದರು.
ತಂಜಾವೂರಿನ ಸರಸ್ವತಿ ಮಹಲ್ ಮ್ಯೂಸಿಯಂನಿಂದ 2005ರಲ್ಲಿ ವಿದೇಶಿಯರ ಗುಂಪೊಂದು ಈ ಪುರಾತನ ವಸ್ತುವನ್ನು ಕದ್ದಿದೆ ಎಂದು ಐಡಲ್ ವಿಂಗ್ ಗಮನಿಸಿದೆ. ಕಳ್ಳತನವಾಗಿದೆ ಎಂದು ಆರೋಪಿಸಿ ಅಕ್ಟೋಬರ್ 10, 2005 ರಂದು ತಂಜಾವೂರು ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪೊಲೀಸ್ ದೂರು ದಾಖಲಾಗಿತ್ತು. ಆದ್ರೆ ಆಗ ಇದನ್ನು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಒಂದು ದಶಕಕ್ಕೂ ಹೆಚ್ಚು ಸಮಯದ ನಂತರ, ಅಕ್ಟೋಬರ್ 17, 2017 ರಂದು, ಅಧಿಕಾರಿಗಳು ಇ.ರಾಜೇಂದ್ರನ್‌ನಿಂದ ದೂರನ್ನು ಸ್ವೀಕರಿಸಿದ್ದರು.
ಓದಿ: 'ಬಲವಂತವಾಗಿ ಬೈಬಲ್ ಓದಿಸುತ್ತಿದ್ದೇವೆ ಎಂಬುದು ಸುಳ್ಳು- ಬೇಕಾದರೆ ತನಿಖೆ ನಡೆಸಲಿ'
ಐಡಲ್ ವಿಂಗ್ ಡೈರೆಕ್ಟರ್ ಜನರಲ್ ಕೆ ಜಯಂತ್ ಮುರಳಿ ನೇತೃತ್ವದಲ್ಲಿ ಐಜಿ ಆರ್ ದಿನಕರನ್ ಮತ್ತು ಎಸ್ಪಿ ಬಿ ರವಿ ಅವರನ್ನೊಳಗೊಂಡ ತಂಡವು ತನಿಖೆ ತೀವ್ರಗೊಳಿಸಿತ್ತು. ತಂಡವು 2005 ರಲ್ಲಿ ಜೀಗೆನ್‌ಬಾಲ್ಗ್ ಸ್ಮರಣಾರ್ಥ ಸಮಾರಂಭದ ಸಂದರ್ಭದಲ್ಲಿ ಸಂದರ್ಶಕರ ನೋಂದಣಿಯನ್ನು ಪರಿಶೀಲಿಸಿದ್ದೇವೆ. ಇಲ್ಲಿ ಅವರು ಕಾರ್ಯಗಳಿಗೆ ಆಗಮಿಸಿದ ವಿದೇಶಿಯರ ಗುಂಪನ್ನು ಗಮನಿಸಿದ್ದೇವೆ ಎಂದು ಪೊಲೀಸರು ಹೇಳಿದರು.
ಹಲವಾರು ದಿನಗಳ ಕಾಲ ವಿದೇಶದಲ್ಲಿರುವ ವಿವಿಧ ವಸ್ತುಸಂಗ್ರಹಾಲಯಗಳ ಬಹು ವೆಬ್‌ಸೈಟ್‌ಗಳನ್ನು ಬ್ರೌಸ್ ಮಾಡುವ ಮೂಲಕ ಸಾವಿರಾರು ಮುದ್ರಿತ ಪುಸ್ತಕಗಳು, ಹಸ್ತಪ್ರತಿಗಳು ಮತ್ತು ಕರಪತ್ರಗಳನ್ನು ಒಳಗೊಂಡಿರುವ ಜಾರ್ಜ್ III ರ ಸಂಗ್ರಹದಿಂದ ಪತ್ತೆ ಹಚ್ಚಿದ್ದೇವೆ. ಅವುಗಳಲ್ಲಿ ಹೆಚ್ಚಿನವು ಅಪರೂಪವಾಗಿವೆ. ಈ ವೇಳೆ ರಾಜನ ಸಂಗ್ರಹದಲ್ಲಿದ್ದ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಪ್ರಾಚೀನ ಬೈಬಲ್ , 2005ರಲ್ಲಿ ಕದ್ದ ಬೈಬಲ್‌ನ ಚಿತ್ರದೊಂದಿಗೆ ತಾಳೆ ಮಾಡಲಾಗಿದ್ದು, ಅದು ತಮಿಳುನಾಡಿನಲ್ಲಿ ಕದ್ದ ಬೈಬಲ್ ಪ್ರತಿಯಾಗಿದೆ ಮತ್ತು ಇದರಿಂದ ದೃಡಪಟ್ಟಿದೆ ಎಂದು ಐಡಲ್ ವಿಂಗ್ ಹೇಳಿದೆ.
ಐಡಲ್ ವಿಂಗ್ ಬೈಬಲ್ ಅನ್ನು ಹಿಂಪಡೆಯಲು ಮತ್ತು ಯುನೆಸ್ಕೋ ಒಪ್ಪಂದದ ಅಡಿ ಅದನ್ನು ಸರಸ್ವತಿ ಮಹಲ್ ಗ್ರಂಥಾಲಯಕ್ಕೆ ಮರುಸ್ಥಾಪಿಸಲು ಆಶಿಸುತ್ತಿದೆ ಎಂದು ಜಯಂತ್ ಮುರಳಿ ಹೇಳಿದರು.
1719 ರಲ್ಲಿ ಜಿಗೆನ್‌ಬಾಲ್ಗ್‌ನ ಮರಣದ ನಂತರ ಶ್ವಾರ್ಟ್ಜ್ ಎಂಬ ಇನ್ನೊಬ್ಬ ಮಿಷನರಿ ಹೊಸ ಒಡಂಬಡಿಕೆಯನ್ನು ತಂಜಾವೂರಿನ ಆಡಳಿತಗಾರ ರಾಜಾ ಸೆರ್ಫೋಜಿಗೆ ಹಸ್ತಾಂತರಿಸಿದ್ದರು. ತಮಿಳುನಾಡು ಸರ್ಕಾರ ಸ್ಥಾಪನೆಯಾದ ನಂತರ ಈ ಪುಸ್ತಕವು ಸರಸ್ವತಿ ಮಹಲ್ ಗ್ರಂಥಾಲಯದಲ್ಲಿ ಕಾಣಿಸಿಕೊಂಡಿತ್ತು.