ETV Bharat / bharat

ಪಠಾಣ್​ ಚಿತ್ರಕ್ಕೆ ಯಾವುದೇ ಅಡಚಣೆ ಆಗುವುದಿಲ್ಲ : ಸಿಎಂ ಶರ್ಮಾ ಅಭಯ

ನಾನು ಅಮಿತಾಬ್ ಬಚ್ಚನ್, ಧರ್ಮೇಂದ್ರ ಮತ್ತು ಜೀತೇಂದ್ರ ಅವರ ಚಿತ್ರಗಳನ್ನು ನೋಡಿದ್ದೇನೆ - ರಾಜಕಾರಣಿಗಳ ಪೋಸ್ಟರ್‌ಗಳನ್ನು ಎಲ್ಲಾ ಸಮಯದಲ್ಲೂ ಕಿತ್ತುಹಾಕಲಾಗುತ್ತದೆ ಆದರೆ ಅದರ ಬಗ್ಗೆ ಯಾರು ಚರ್ಚೆ ಮಾಡುವುದಿಲ್ಲ.

still-dont-know-much-about-shah-rukh-khan-barely-watch-films-himanta
ಪಠಾಣ್​ ಚಿತ್ರಕ್ಕೆ ಯಾವುದೇ ಅಡಚಣೆ ಆಗುವುದಿಲ್ಲ : ಅಸ್ಸಾಂ ಮುಖ್ಯಮಂತ್ರಿ
author img

By

Published : Jan 23, 2023, 10:49 PM IST

ಗುವಾಹಟಿ (ಅಸ್ಸೋಂ): ಶಾರುಖ್ ಖಾನ್ ಯಾರು? ಅವರ ಬಗ್ಗೆ ಮತ್ತು ಅವರ ಚಿತ್ರ ಪಠಾಣ್ ಬಗ್ಗೆ ನನಗೆ ಏನೂ ತಿಳಿದಿಲ್ಲ ಎಂದು ಹೇಳಿಕೆ ನೀಡಿದ್ದ ಅಸ್ಸೋಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಸೋಮವಾರದಂದು "ಶಾರುಖ್ ಅವರು ನನಗೆ ಕರೆ ಮಾಡಿದ್ದರು'' ಎಂದು ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು "ನಾನು ಅಮಿತಾಬ್ ಬಚ್ಚನ್, ಧರ್ಮೇಂದ್ರ ಮತ್ತು ಜೀತೇಂದ್ರ ಅವರ ಚಿತ್ರಗಳನ್ನು ನೋಡಿದ್ದೇನೆ. ನನಗೆ ಇನ್ನೂ ಶಾರುಖ್ ಖಾನ್ ಬಗ್ಗೆ ಹೆಚ್ಚು ತಿಳಿದಿಲ್ಲ. 2001 ರಿಂದ ನಾನು ಆರರಿಂದ ಏಳಕ್ಕಿಂತ ಹೆಚ್ಚು ಚಿತ್ರಗಳನ್ನು ನೋಡಿಲ್ಲ" ಎಂದು ಹೇಳಿದರು.

ಶಾರುಖ್​ ಖಾನ್​ ಅವರೊಂದಿಗಿನ ಸಂಭಾಷಣೆಯ ಕುರಿತು ಮಾತನಾಡಿದ ಹಮಿಂತ್​ ಬಿಸ್ವಾ ಶರ್ಮಾ, ಶನಿವಾರ ಸಂಜೆ 7:40 ಕ್ಕೆ ''ನಾನು ಶಾರುಖ್ ಖಾನ್, ನಾನು ನಿಮ್ಮ ಜೊತೆ ಮಾತನಾಡಬೇಕು‘‘ ಎಂದು ನನಗೆ ಸಂದೇಶ ಬಂದಿತ್ತು. ಮೊಬೈಲ್​ನಲ್ಲಿ ಸಾಕಷ್ಟು ಸಂದೇಶಗಳು ಬಾಕಿ ಇದ್ದವು. ಅದನ್ನೆಲ್ಲಾ ಡಿಲಿಟ್​ ಮಾಡಿ, ಭಾನುವಾರ ಮುಂಜಾನೆ 2 ಗಂಟೆ ಸಮಯಕ್ಕೆ ''ನಾನು ಮಾತನಾಡಲು ಲಭ್ಯವಿದ್ದೇನೆ'' ಎಂದು ಮರು ಸಂದೇಶವನ್ನು ಕಳುಹಿಸಿದೆ. ನಂತರ ಅವರು ನನಗೆ ಕರೆ ಮಾಡಿ ನಮ್ಮ ಚಿತ್ರ ಶೀಘ್ರದಲ್ಲೇ ಬಿಡುಗಡೆಯಾಗುತ್ತಿದೆ, ಯಾವುದೇ ತೊಂದರೆ ಆಗುವುದಿಲ್ಲ ಎಂದು ನಾನು ಭಾವಿಸುತ್ತೇನೆ ಎಂದರು.

‘‘ನಾನು ಅವರ ಚಿತ್ರದ ಹೆಸರನ್ನು ಕೇಳಿದೆ, ಅವರು 'ಪಠಾಣ್​' ಎಂದು ಹೇಳಿದರು. 'ಕೋಯಿ ಡಿಸ್ಟರ್ಬ್ ನಹೀ ಹೋಗಾ' (ಯಾವುದೇ ಅಡಚಣೆ ಆಗುವುದಿಲ್ಲ) ಎಂದು ನಾನು ಅವರಿಗೆ ಭರವಸೆ ನೀಡಿದ್ದೇನೆ ಎಂದು ಸಿಎಂ ಬಿಸ್ವಾ ಶರ್ಮಾ ಅವರು ಶಾರುಖ್​ ಖಾನ್​ ಜೊತೆಗಿನ ಸಂಭಾಷಣೆಯನ್ನು ವಿವರಿಸಿದರು. ಪಠಾಣ್​ ಚಲನಚಿತ್ರದ ವಿರುದ್ಧ ನಡೆಯುತ್ತಿರುವ ಬಹಿಷ್ಕಾರದ ಪ್ರತಿಭಟನೆಯ ಬಗ್ಗೆ ಮಾತನಾಡಿ, ''ಚಿತ್ರವನ್ನು ನೋಡುವ ಆಸೆ ಇರುವವರು ನೋಡುತ್ತಾರೆ. ಚಲನಚಿತ್ರದ ಬಗ್ಗೆ ಆಸಕ್ತಿ ಇಲ್ಲದವರು ಬಿಟ್ಟುಬಿಡಬಹುದು ಎಂದು ಹೇಳಿದರು.

''ಶಾರುಖ್ ಖಾನ್ ಯಾರು?'' ಎಂಬ ಹೇಳಿಕೆಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು'' ನಾನು ಅವರ ಬಗ್ಗೆ ಯಾಕೆ ತಿಳಿದುಕೊಳ್ಳಬೇಕು?, ಅವರು ಅಂತಹ ಮಾಹಾನ್​ ವ್ಯಕ್ತಿ ಎಂದು ನನಗೆ ತಿಳಿದಿರಲಿಲ್ಲ. ನಾನು ಹೆಚ್ಚು ಚಲನಚಿತ್ರಗಳನ್ನು ನೋಡುವುದಿಲ್ಲ, ಕೇವಲ ಹಳೆ ನಟರ ಬಗ್ಗೆ ಮಾತ್ರ ತಿಳಿದಿದೆ. ಕಾಲ ಕಾಲಕ್ಕೆ ಚಲನಚಿತ್ರ ನಟರ ಮೇಲಿನ ಆಕರ್ಷಣೆಗಳು ಬದಲಾಗುತ್ತವೆ ಎಂದು ಹೇಳಿದರು.

ಚಿತ್ರದ ಮೇಲೆ ನಿಷೇಧವನ್ನು ಕೋರಿ ಬಲಪಂಥೀಯರು 'ಪಠಾಣ್' ಪೋಸ್ಟರ್​ಗೆ ಬೆಂಕಿ ಹಚ್ಚಿ ಸಿನಿಮಾವನ್ನು ನಿಷೇಧಿಸಬೇಕು ಎಂಬ ಪ್ರತಿಭಟನೆ ಬಗ್ಗೆ ಮಾತನಾಡಿ, ಪೋಸ್ಟರ್‌ಗಳನ್ನು ಹರಿದು ಹಾಕುವುದು ಅಪರಾಧವಲ್ಲ, ಅದು ಯಾವ ಕಾನೂನಿನ ಅಡಿಯಲ್ಲಿ ಅಪರಾಧವಲ್ಲ. ರಾಜಕಾರಣಿಗಳ ಪೋಸ್ಟರ್‌ಗಳನ್ನು ಎಲ್ಲಾ ಸಮಯದಲ್ಲೂ ಕಿತ್ತುಹಾಕಲಾಗುತ್ತದೆ. ಆದರೆ ಅದರ ಬಗ್ಗೆ ಯಾರು ಚರ್ಚೆ ಮಾಡುವುದಿಲ್ಲ. ಜನರು ತಮ್ಮ ಮನಸ್ಥಿತಿಯನ್ನು ಬದಲಾಯಿಸುವ ಸಮಯ ಇದು" ಎಂದು ಎಂದು ಸಿಎಂ ಶರ್ಮಾ ಹೇಳಿದರು.

ನರೇಂಗಿ ಪ್ರದೇಶದಲ್ಲಿ ಬಜರಂಗದಳದ ಕಾರ್ಯಕರ್ತರು ಇತ್ತೀಚೆಗೆ ಚಿತ್ರಮಂದಿರಕ್ಕೆ ನುಗ್ಗಿ ‘ಪಠಾಣ್’ ಚಿತ್ರದ ಪೋಸ್ಟರ್‌ಗಳನ್ನು ಹರಿದು, ಸುಟ್ಟು ಹಾಕಿ ಚಿತ್ರದ ವಿರುದ್ಧ ಘೋಷಣೆಗಳನ್ನು ಕೂಗಿದ್ದರು. ಶಾರುಖ್​ ಖಾನ್, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ನಟನೆಯ ಪಠಾಣ್ ಚಿತ್ರ ಇದೇ ಜನವರಿ 25 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.

ಇದನ್ನೂ ಓದಿ: ಅಥಿಯಾ ಕೈಹಿಡಿದ ರಾಹುಲ್​: ಸಾಕ್ಷೀಕರಿಸಿದ ಸುನಿಲ್​ ಶೆಟ್ಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.