ETV Bharat / bharat

ಮಾಜಿ ಸಿಎಂ ಚಂದ್ರಬಾಬು ನಾಯ್ಡು ಬಂಧನ ವಿರೋಧಿಸಿ ಆಂಧ್ರಪ್ರದೇಶ ಬಂದ್​; ಬಂಧಿಸಿದ್ದು ತಪ್ಪೆಂದ ಮಮತಾ ಬ್ಯಾನರ್ಜಿ - TDP statewide bandh

ಆಂಧ್ರಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರ ಬಂಧನ ವಿರೋಧಿಸಿ ಟಿಡಿಪಿ ರಾಜ್ಯಾದ್ಯಂತ ಬಂದ್​ ನಡೆಸಿದೆ. ಇತ್ತ ಎಸಿಬಿ ಕೋರ್ಟ್​ನಲ್ಲಿ ಗೃಹಬಂಧನ ಕೋರಿದ ಅರ್ಜಿ ವಿಚಾರಣೆ ನಡೆಯಿತು.

ಆಂಧ್ರಪ್ರದೇಶ ಬಂದ್
ಆಂಧ್ರಪ್ರದೇಶ ಬಂದ್
author img

By ETV Bharat Karnataka Team

Published : Sep 11, 2023, 6:39 PM IST

Updated : Sep 11, 2023, 9:56 PM IST

ಹೈದರಾಬಾದ್​: ಕೌಶಲ್ಯಾಭಿವೃದ್ಧಿ ಹಗರಣದಲ್ಲಿ 14 ದಿನ ನ್ಯಾಯಾಂಗ ಬಂಧನಕ್ಕೆ ಗುರಿಯಾಗಿರುವ ತೆಲುಗು ದೇಶಂ ಪಕ್ಷದ(ಟಿಡಿಪಿ) ಅಧ್ಯಕ್ಷ ಚಂದ್ರಬಾಬು ನಾಯ್ಡು ಅವರ ಬಂಧನವನ್ನು ವಿರೋಧಿಸಿ ಕಾರ್ಯಕರ್ತರು ಆಂಧ್ರಪ್ರದೇಶ ರಾಜ್ಯಾದ್ಯಂತ ಬಂದ್‌ ನಡೆಸುತ್ತಿದ್ದಾರೆ. ಇದರಿಂದಾಗಿ ರಾಜ್ಯದ ಹಲವೆಡೆ ಬಸ್‌ಗಳು ರಸ್ತೆಗಿಳಿಯಲಿಲ್ಲ. ಅಂಗಡಿ ಮುಗ್ಗಟ್ಟುಗಳು ಸ್ವಯಂಪ್ರೇರಿತವಾಗಿ ಮುಚ್ಚಲಾಗಿವೆ.

ಆಂಧ್ರಪ್ರದೇಶ ಮಾಜಿ ಸಿಎಂ ನಾಯ್ಡು ಅವರನ್ನು ಬಂಧನಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಟಿಡಿಪಿ ಬಂದ್​ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯದ ಜನರು ಬಂದ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಪಕ್ಷದ ಮುಖಂಡರು, ಕಾರ್ಯಕರ್ತರು ಎಲ್ಲೆಂದರಲ್ಲಿ ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಆರ್‌ಟಿಸಿ ಬಸ್‌ ನಿಲ್ದಾಣ ಹಾಗೂ ಹಲವೆಡೆ ಮುಷ್ಕರ ನಡೆದಿದೆ. ರಾಜ್ಯದ ಹಲವೆಡೆ ಬಸ್‌ಗಳು ರಸ್ತೆಗಿಳಿದಿಲ್ಲ.

ಇದರ ಜೊತೆಗೆ ಹಲವೆಡೆ ಮಾರುಕಟ್ಟೆಗಳು ಮತ್ತು ಶಾಲೆಗಳನ್ನು ಸ್ವಯಂಪ್ರೇರಿತವಾಗಿ ಮುಚ್ಚಲಾಗಿದೆ. ಹಲವು ಪ್ರದೇಶಗಳಲ್ಲಿ ಉದ್ವಿಗ್ನ ಪರಿಸ್ಥಿತಿ ಕೂಡ ಇದೆ. ಪ್ರತಿಭಟನೆ ನಡೆಸುತ್ತಿದ್ದವರನ್ನು ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ. ರಾಜ್ಯಾದ್ಯಂತ ಪ್ರಮುಖ ನಾಯಕರನ್ನು ಪೊಲೀಸರು ಗೃಹಬಂಧನದಲ್ಲಿ ಇರಿಸಿದ್ದಾರೆ. ಇದು ಟಿಡಿಪಿ ಮುಖಂಡರು ಹಾಗೂ ಕಾರ್ಯಕರ್ತರ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ.

ಜೈಲು ಬೇಡ, ಗೃಹ ಬಂಧನ ನೀಡಿ: ಚಂದ್ರಬಾಬು ನಾಯ್ಡು ಅವರನ್ನು ಜೈಲಿನ ಬದಲಿಗೆ ಗೃಹ ಬಂಧನಕ್ಕೆ ನೀಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ಇಂದು ಎಸಿಬಿ ಕೋರ್ಟ್​ನಲ್ಲಿ ನಡೆಯಿತು. ಸಿಐಡಿ ಪರವಾಗಿ ಸರ್ಕಾರಿ ವಕೀಲ ಎಎಜಿ ಪೊನ್ನವೋಲು ವಾದ ಮಂಡಿಸಿದರೆ, ಚಂದ್ರಬಾಬು ಅವರ ಪರವಾಗಿ ಸಿದ್ಧಾರ್ಥ ಲೂತ್ರಾ ವಾದಿಸಿದರು. ಗೃಹ ಬಂಧನಕ್ಕೆ ಅವಕಾಶ ನೀಡುವಂತೆ ಚಂದ್ರಬಾಬು ಪರ ವಕೀಲರು ಭಾನುವಾರ ಅರ್ಜಿ ಸಲ್ಲಿಸಿದ್ದರು.

ಚಂದ್ರಬಾಬು ನಾಯ್ಡು ಅವರು ಮನೆಯಲ್ಲಿರುವುದಕ್ಕಿಂತ ಜೈಲಿನಲ್ಲಿ ಸುರಕ್ಷಿತವಾಗಿರುತ್ತಾರೆ. ಅವರ ಆರೋಗ್ಯ ಚೆನ್ನಾಗಿದೆ. ಜೈಲಿನಲ್ಲಿ ಸಂಪೂರ್ಣ ಭದ್ರತೆ ಒದಗಿಸಲಾಗುತ್ತದೆ. ಜೈಲಿನ ಒಳಗೆ ಮತ್ತು ಹೊರಗೆ ಪೊಲೀಸ್ ಭದ್ರತೆ ಇದೆ. ದಿನದ 24 ಗಂಟೆಯೂ ಕರ್ತವ್ಯ ನಿರ್ವಹಿಸುತ್ತಾರೆ. ಅಗತ್ಯವಿದ್ದರೆ ವೈದ್ಯಕೀಯ ಸೌಲಭ್ಯವನ್ನೂ ಕಲ್ಪಿಸಲಾಗುವುದು ಎಂದು ಸರ್ಕಾರದ ಪರ ವಕೀಲರು ವಾದಿಸಿದರು.

ಆದರೆ, ಇದರ ವಿರುದ್ಧವಾಗಿ ಲೂತ್ರಾ ಅವರು ವಾದಿಸಿ, ಚಂದ್ರಬಾಬು ಅವರಿಗೆ ಜೈಲಿನಲ್ಲಿ ಅಪಾಯವಿದೆ. ಇಲ್ಲಿಯವರೆಗೆ ಅವರು ಎನ್​ಎಸ್​ಜಿ ಭದ್ರತೆಯಲ್ಲಿದ್ದರು. ಹೀಗಾಗಿ ಅವರನ್ನು ಗೃಹಬಂಧನಕ್ಕೆ ನೀಡಬೇಕು ಎಂದು ಈ ಹಿಂದಿನ ಸುಪ್ರೀಂ ಕೋರ್ಟ್‌ ತೀರ್ಪನ್ನು ಲೂತ್ರಾ ವಿವರಿಸಿದರು.

ಝಡ್ ಪ್ಲಸ್ ಭದ್ರತೆಯಲ್ಲಿರುವ ಮಾಜಿ ಮುಖ್ಯಮಂತ್ರಿಗೆ ಅಗತ್ಯವಿರುವ ಎಲ್ಲ ವಿಶೇಷ ಸೌಲಭ್ಯಗಳನ್ನು ಒದಗಿಸುವಂತೆ ರಾಜಮಹೇಂದ್ರವರಂ ಕೇಂದ್ರ ಕಾರಾಗೃಹದ ಅಧೀಕ್ಷಕರಿಗೆ ಎಸಿಬಿ ನ್ಯಾಯಾಲಯದ ವಿಶೇಷ ನ್ಯಾಯಾಧೀಶೆ ಹಿಮಬಿಂದು ಆದೇಶಿಸಿದರು.

ಚಂದ್ರಬಾಬು ಬಂಧನದ ಬಗ್ಗೆ ಮಮತಾ: ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಬಂಧನವನ್ನು ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟೀಕಿಸಿದ್ದಾರೆ. ನಾಯ್ಡು ಅವರನ್ನು ಬಂಧಿಸಿದ್ದು ಸರಿಯಲ್ಲ. ಇದು ರಾಜಕೀಯ ದ್ವೇಷದಿಂದ ಕೂಡಿದೆ. ಇಂದು ನೀವು ಮಾಡಿದರೆ, ನಾಳೆ ಅಧಿಕಾರಕ್ಕೆ ಬರುವ ಬೇರೊಂದು ಪಕ್ಷ ಹೀಗೆ ಮಾಡುತ್ತದೆ. ದ್ವೇಷ ಒಳ್ಳೆಯದಲ್ಲ ಎಂದು ಕಿಡಿಕಾರಿದ್ದಾರೆ.

ಇದು ರಾಜಕೀಯ ಪಕ್ಷಪಾತವಾಗಿದೆ. ಅವರು ತಪ್ಪು ಮಾಡಿದ್ದರೆ, ತನಿಖೆ ನಡೆಸಿ ಶಿಕ್ಷೆಗೆ ಒಳಪಡಿಸಿ. ಅದು ಬಿಟ್ಟು ಬೇಕಂತಲೇ ಬಂಧನ ಮಾಡಿ ಕಿರುಕುಳ ನೀಡುವುದು ಉತ್ತಮ ರಾಜಕೀಯವಲ್ಲ. ಅಧಿಕಾರ ನಿಮ್ಮ ಕೈಯಲ್ಲಿದೆ ಎಂದು ಪಕ್ಷಪಾತದಿಂದ ವರ್ತಿಸುವುದು ಸರಿಯಲ್ಲ. ಮುಂದಿನ ದಿನಗಳಲ್ಲಿ ಅದು ತಿರುಗುಬಾಣವಾಗಲಿದೆ. ನಮ್ಮ ರಾಜ್ಯದಲ್ಲಿ ಎಷ್ಟೇ ಪಕ್ಷ ಭೇದವಿದ್ದರೂ ಕುತಂತ್ರ ನಡೆಸಿಲ್ಲ ಎಂದು ಅವರು ಉದಾಹರಣೆ ನೀಡಿ ಟೀಕಿಸಿದರು.

ಪುತ್ರ ಲೋಕೇಶ್​ ಕಿಡಿ : ಹಗರಣ ಆರೋಪದ ಮೇಲೆ ಚಂದ್ರಬಾಬು ನಾಯ್ಡು ಅವರನ್ನು ಬಂಧಿಸಿದ್ದಕ್ಕೆ ಪುತ್ರ, ಟಿಡಿಪಿ ಪಕ್ಷದ ನಾಯಕ ನಾರಾ ಲೋಕೇಶ್​ ಕಿಡಿಕಾರಿದ್ದಾರೆ. ನಾನು ಎಲ್ಲಿಯೂ ಹೋಗಿಲ್ಲ, ಬೇಕಾದರೆ ನನ್ನನ್ನೂ ಬಂಧಿಸಿ ಎಂದು ಸಿಎಂ ಜಗನಮೋಹನ್​ರೆಡ್ಡಿ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.

ಚಂದ್ರಬಾಬು ಅವರು ಪ್ರಪಂಚಕ್ಕೇ ತಿಳಿದಿ ವ್ಯಕ್ತಿ. ಅಂಥವರ ಮೇಲೆ ಹಗರಣ ಆರೋಪ ಹೊರಿಸಿ ಜೈಲಿಗೆ ಕಳುಹಿಸಿದ್ದು ಜಗನ್ ಸರ್ಕಾರದ ದೊಡ್ಡ ತಪ್ಪು. ರಾಷ್ಟ್ರ ರಾಜಕಾರಣದಲ್ಲಿ ಅಪರೂಪದ ಮನ್ನಣೆ ಪಡೆದ ವ್ಯಕ್ತಿ ಅವರು. ಚಂದ್ರಬಾಬು ಅವರು ಯಾವಾಗಲೂ ಉದ್ಯೋಗ, ಕೈಗಾರಿಕೆ ಮತ್ತು ಅಭಿವೃದ್ಧಿಯ ಬಗ್ಗೆ ಯೋಚಿಸುತ್ತಾರೆ. ಭ್ರಷ್ಟಾಚಾರ ಅವರ ರಕ್ತದಲ್ಲಿಲ್ಲ ಎಂದು ಟಿಡಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಲೋಕೇಶ್ ಹೇಳಿದ್ದಾರೆ.

ಇದನ್ನೂ ಓದಿ: Chandrababu Naidu: ಮಾಜಿ ಸಿಎಂ ಚಂದ್ರಬಾಬು ನಾಯ್ಡುಗೆ 14 ದಿನ ನ್ಯಾಯಾಂಗ ಬಂಧನ, ಆಂಧ್ರದಲ್ಲಿ ನಿಷೇಧಾಜ್ಞೆ ಜಾರಿ

Last Updated : Sep 11, 2023, 9:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.