ಚೆನ್ನೈ, ತಮಿಳುನಾಡು: ದಿವಂಗತ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಅಪರಾಧಿಗಳಲ್ಲಿ ಒಬ್ಬರಾದ ಎ.ಜಿ.ಪೆರರಿವಾಲನ್ಗೆ 30 ದಿನಗಳ ಸಾಮಾನ್ಯ ರಜೆ ನೀಡುವಂತೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಬುಧವಾರ ಆದೇಶಿಸಿದ್ದಾರೆ.

ಎ.ಜಿ.ಪೆರರಿವಾಲನ್ (ಅಪರಾಧಿ ಸಂಖ್ಯೆ 7640) ತಾಯಿ ಡಿ.ಅರ್ಪುತಮ್ಮಳ್ ಮನವಿಯ ಮೇರೆಗೆ ವೈದ್ಯಕೀಯ ನೆಲೆಗಟ್ಟಿನಲ್ಲಿ 30 ದಿನಗಳ ಸಾಮಾನ್ಯ ರಜೆ ನೀಡುವಂತೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಆದೇಶಿಸಿದ್ದಾರೆ.
ಇದನ್ನೂ ಓದಿ: ಮಧ್ಯಪ್ರದೇಶದ ಸತ್ನಾದಲ್ಲಿ ಸಿಡಿಲು ಬಡಿದು 7 ಮಂದಿ ಸಾವು, ನಾಲ್ವರಿಗೆ ಗಾಯ
ಇನ್ನು ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಪೆರರಿವಾಲನ್ ಜೊತೆ ನಳಿನಿ, ವಿ.ಶ್ರೀಹರನ್ ಅಲಿಯಾಸ್ ಮುರುಗನ್, ಸಂತಾನ್, ಜಯಕುಮಾರ್, ರಾಬರ್ಟ್ ಪಯಾಸ್ ಮತ್ತು ಪಿ.ರವಿಚಂದ್ರನ್ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ.
1991ರಿಂದ ಎಲ್ಲಾ ಅಪರಾಧಿಗಳು ಜೈಲಿನಲ್ಲಿದ್ದು, ಅಪರಾಧಿಗಳನ್ನು ಬಿಡುಗಡೆ ಮಾಡಲು ತಮಿಳುನಾಡು ಸರ್ಕಾರ ನಿರ್ಣಯವನ್ನು ಅಂಗೀಕರಿಸಿದೆ. ಆದರೆ ರಾಜ್ಯಪಾಲರು ಈ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ.