ETV Bharat / bharat

ಶ್ರೀರಂಗಂ ರಂಗನಾಥ ದೇವಾಲಯದಲ್ಲಿನ ಭಕ್ತರಿಂದ ಆನೆಗೆ ಹುಟ್ಟುಹಬ್ಬ ಆಚರಣೆ - ಬಿಹಾರದ ಗಯಾ

ತಿರುಚಿರಪಲ್ಲಿಯಲ್ಲಿನ ಶ್ರೀರಂಗಂ ರಂಗನಾಥ ದೇವಾಲಯದಲ್ಲಿನ ಭಕ್ತರು ಆಂಡಾಲ್ ಎಂಬ ಆನೆಯ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಈ ವಿಡಿಯೋ ಸಾಕಷ್ಟು ಜನಮನ್ನಣೆಯನ್ನು ಪಡೆದಿದೆ.

ರಂಗನಾಥ ದೇವಾಲಯದ ಆನೆ ಆಂಡಾಲ್
ರಂಗನಾಥ ದೇವಾಲಯದ ಆನೆ ಆಂಡಾಲ್
author img

By

Published : Mar 1, 2023, 6:10 PM IST

ಶ್ರೀರಂಗಂ ರಂಗನಾಥ ದೇವಾಲಯದಲ್ಲಿನ ಭಕ್ತರಿಂದ ಆನೆ ಆಂಡಾಲ್ ಹುಟ್ಟುಹಬ್ಬ ಆಚರಣೆ

ತಿರುಚ್ಚಿ (ತಮಿಳುನಾಡು) : ತಮಿಳುನಾಡಿನ ತಿರುಚಿರಪಲ್ಲಿಯಲ್ಲಿನ ಶ್ರೀರಂಗಂ ರಂಗನಾಥ ದೇವಾಲಯದಲ್ಲಿನ ಭಕ್ತರು ಮಂಗಳವಾರ ದೇವಾಲಯದ ಆನೆಯಾದ ಆಂಡಾಲ್​ನ 45 ನೇ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಹುಟ್ಟುಹಬ್ಬವನ್ನು ಭವ್ಯವಾದ ಹಬ್ಬದಂತೆ ಆಚರಿಸಲಾಯಿತು. ಅಲ್ಲಿ ರಂಗನಾಥ ದೇವಾಲಯದ ಜಂಟಿ ಆಯುಕ್ತ ಮಾರಿ ಮುತ್ತು, ವ್ಯವಸ್ಥಾಪಕ ತಮಿಲ್ಸೆಲ್ವಿ, ಸಹಾಯಕ ವ್ಯವಸ್ಥಾಪಕ ಶಾನ್ಮುಗವದಿವು ಮತ್ತು ದೇವಾಲಯದ ಸಿಬ್ಬಂದಿ ಮತ್ತು ಭಕ್ತರು ಹಾಜರಾಗಿದ್ದರು.

ಟಸ್ಕರ್‌ನ ಅತಿಥಿಗಳು ವಿವಿಧ ರೀತಿಯ ಹಣ್ಣುಗಳನ್ನು ತಂದು ಆಂಡಾಲ್‌ಗೆ ನೀಡಿದರು. ಹುಟ್ಟುಹಬ್ಬದ ನಿಮಿತ್ತ ಆನೆ ಆಂಡಾಲ್​​ ಅನ್ನು ಅಲಂಕರಿಸಲಾಗಿತ್ತು. ಭಕ್ತರು ಮತ್ತು ದೇವಾಲಯದ ಸದಸ್ಯರು ನೀಡಿದ ಹಣ್ಣುಗಳನ್ನು ತಿಂದು ಆನೆ ಆನಂದಿಸಿತು. ಆಂಡಾಲ್ ತನ್ನ ಜನ್ಮದಿನವನ್ನು ಅತ್ಯಂತ ಉತ್ಸುಕತೆಯಿಂದ ಆಚರಿಸಿಕೊಂಡಿದ್ದಾನೆ. ಭಕ್ತರು ನೆಚ್ಚಿನ ಆನೆಯ ಹುಟ್ಟು ಹಬ್ಬ ಕಂಡು ಆನಂದಿತರಾಗಿದ್ದರು.

ಹಣ್ಣುಗಳನ್ನು ನೀಡಿದ ದೇವಾಲಯದ ಭಕ್ತರು: ಹುಟ್ಟುಹಬ್ಬದ ಸಮಯದಲ್ಲಿ ನಾವು ಕೇಕ್ ಕತ್ತರಿಸುವ ರೀತಿಯಲ್ಲಿಯೇ ದೇವಸ್ಥಾನದಲ್ಲಿನ ಅತಿಥಿಗಳು ಕೇಕ್​ನ ತುಂಡುಗಳನ್ನು ಆಂಡಾಲ್​ಗೆ ನೀಡಿ ಸಂಭ್ರಮಿಸಿದರು. ಈ ವೇಳೆ ದೇವಸ್ಥಾನದಲ್ಲಿ ನೆರೆದ ಅತಿಥಿಗಳು ವಿವಿಧ ರೀತಿಯ ಹಣ್ಣುಗಳನ್ನು ತಿನ್ನಲು ನೀಡಿ ಖುಷಿ ಪಟ್ಟರು. ಈ ವೇಳೆ ಆನೆ ಶಾಂತವಾಗಿ ತನ್ನ ಸೊಂಡಿಲಿನಿಂದ ಆಹಾರವನ್ನು ಪಡೆದು ತಿಂದು ಸಂತಸಪಟ್ಟಿತು.

ಇದನ್ನೂ ಓದಿ : ಶುಭ ಸುದ್ದಿ: ಭಾರತದ ಐಟಿ ವಲಯದಲ್ಲಿ ಉದ್ಯೋಗ ನೇಮಕಾತಿ ಪುನಾರಂಭ

ಭಕ್ತರಿಗೆ ಆರ್ಶೀವಾದ ಮಾಡಿದ ಆನೆ: ನಂತರ ದೇವಸ್ಥಾನಕ್ಕೆ ಬಂದಿದ್ದ ಭಕ್ತರು ವಿವಿಧ ಬಗೆಯ ಹಣ್ಣುಗಳನ್ನು ಆನೆಗೆ ತಿನ್ನಿಸಿದರು. ಈ ವೇಳೆ, ಆನೆ ಅಲ್ಲಿ ನೆರೆದಿದ್ದ ಜನರಿಗೆ ಒಂದು ಬುಟ್ಟಿಯಲ್ಲಿ ಚಾಕೋಲೇಟ್​ ಅನ್ನು ಹಂಚಿಕೆ ಮಾಡಿತು. ನಂತರ ಅಲ್ಲಿ ನೆರೆದಿದ್ದ ಭಕ್ತರಿಗೆ ಆರ್ಶೀವಾದವನ್ನು ಮಾಡಿತು.

ನೆಟಿಜನ್​​ಗಳ ಹೃದಯ ಗೆದ್ದ ಗಿಳಿ : ಬಿಹಾರದ ಗಯಾದಲ್ಲಿಯೂ ಇದೇ ರೀತಿಯ ಘಟನೆಯೊಂದು ನಡೆದಿದೆ. ಕುಟುಂಬವೊಂದು ತಮ್ಮ ಸಾಕು ಗಿಳಿಯಾದ ಶಿವನ ಮೊದಲ ಜನ್ಮದಿನವನ್ನು ಆಚರಿಸಿತು. ಈ ಹುಟ್ಟುಹಬ್ಬದ ಆಚರಣೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೆಯಾದ ನಂತರ ನೆಟಿಜನ್​​ಗಳ ಹೃದಯವನ್ನು ಗೆದ್ದಿದೆ. ಜನರು ತಮ್ಮ ಜನ್ಮದಿನಗಳನ್ನು ಆಚರಿಸುವ ರೀತಿಯಲ್ಲಿಯೇ ಅವರ ತಮ್ಮ ಸಾಕುಗಿಳಿಯ ಜನ್ಮದಿನವನ್ನು ಆಚರಿಸಿದ್ದಾರೆ.

ಇದನ್ನೂ ಓದಿ : ಹಾರ್ಮೋನಿಯಂ ನುಡಿಸಿ ಗಮನ ಸೆಳೆದ ಉಪ ರಾಷ್ಟ್ರಪತಿ ಜಗದೀಪ್ ಧನಕರ್!

ಹುಟ್ಟುಹಬ್ಬದ ಕೇಕ್ ರುಚಿಯನ್ನು ಸವಿದ ಗಿಳಿ: ಗಿಳಿ ಪಂಜರದಲ್ಲಿದ್ದಾಗ ಹುಟ್ಟುಹಬ್ಬದ ಆಶಯದೊಂದಿಗೆ ವಿಡಿಯೋ ತೆರೆಯುತ್ತದೆ. ಗಿಳಿ ನಂತರ ಪಂಜರದಿಂದ ಹೊರಬಂದು ಕೇಕ್ ಕಡೆಗೆ ನಡೆಯುತ್ತದೆ. ನಂತರ ಅದು ಚಾಕುವನ್ನು ತನ್ನ ಬಾಯಿಯಲ್ಲಿ ಹಿಡಿದು ಕೇಕ್ ಕತ್ತರಿಸಲು ಪ್ರಯತ್ನಿಸುತ್ತದೆ. ನಂತರ, ಗಿಳಿ ತನ್ನ ಹುಟ್ಟುಹಬ್ಬದ ಕೇಕ್​​ನ ರುಚಿಯನ್ನು ಸಹ ನೋಡಿದೆ.

ಇದನ್ನೂ ಓದಿ : ಧಾರ್ಮಿಕ ಕಾರ್ಯಗಳಿಗೆ ರೋಬೋಟ್ ಆನೆ ಬಳಕೆ: ಕೇರಳದ ದೇಗುಲದಲ್ಲಿ ಹೊಸ ನಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.