ETV Bharat / bharat

Video- ದಾಲ್ ಸರೋವರದಲ್ಲಿ ಅಗ್ನಿ ಅನಾಹುತ: 2 ಹೌಸ್​ಬೋಟ್​ಗಳು ಸುಟ್ಟು ಭಸ್ಮ - ಅಗ್ನಿ ಆಕಸ್ಮಿಕಕ್ಕೆ ಸುಟ್ಟು ಕರಕಲಾದ ಹೌಸ್​ಬೋಟ್​ಗಳು

Fire incident in dal lake in Srinagar: ಜಮ್ಮು ಕಾಶ್ಮೀರದ ಶ್ರೀನಗರದಲ್ಲಿರುವ ದಾಲ್ ಸರೋವರದಲ್ಲಿ ಎರಡು ಹೌಸ್​ಬೋಟ್​ಗಳು ಸುಟ್ಟು ಭಸ್ಮವಾಗಿವೆ. ಪರಿಹಾರಕ್ಕಾಗಿ ಕಾಶ್ಮೀರ್​ ಹೌಸ್​ಬೋಟ್ ಅಸೋಸಿಯೇಷನ್ ಒತ್ತಾಯಿಸಿದೆ.

Srinagar two houseboats gutted during nocturnal fire incident in dal lake
ಶ್ರೀನಗರದ ದಾಲ್ ಸರೋವರದಲ್ಲಿ ಅಗ್ನಿ ಅನಾಹುತ: 2 ಹೌಸ್​ಬೋಟ್​ಗಳಿಗೆ ಸಂಪೂರ್ಣ ಹಾನಿ
author img

By

Published : Jan 5, 2022, 3:18 PM IST

ಶ್ರೀನಗರ(ಜಮ್ಮು ಕಾಶ್ಮೀರ): ಅಗ್ನಿ ಅವಘಡ ಸಂಭವಿಸಿ, ಎರಡು ಹೌಸ್​ ಬೋಟ್​ಗಳು ಸಂಪೂರ್ಣವಾಗಿ ನಾಶವಾಗಿರುವ ಘಟನೆ ಶ್ರೀನಗರದ ದಾಲ್ ಸರೋವರದಲ್ಲಿ ಸಂಭವಿಸಿದೆ. ಬುಧವಾರ ಮುಂಜಾನೆ ಅಗ್ನಿ ಅವಘಡ ನಡೆದಿದೆ.

ಬಷೀರ್ ಅಹ್ಮದ್ ಬದಿಯಾರಿ ಕುಟುಂಬ ವಾಸವಿದ್ದ 'ನ್ಯೂಜಿಲ್ಯಾಂಡ್' ಹಾಗೂ ಮುನೀರ್ ಅಹ್ಮದ್ ಎಂಬುವರಿಗೆ ಸೇರಿದ 'ಅಪೋಲೋ ಇಲೆವೆನ್' ಎಂಬ ಹೆಸರಿನ ಹೌಸ್​ಬೋಟ್​ಗಳು ಸಂಪೂರ್ಣ ಸುಟ್ಟು ಭಸ್ಮವಾಗಿವೆ.

ಹೌಸ್​ಬೋಟ್​ಗಳಿಗೆ ಬೆಂಕಿ

ಸ್ಥಳೀಯರು, ಪೊಲೀಸರು, ಸಿಆರ್​​ಪಿಎಫ್​ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದು, ಪ್ರತಿ ಹೌಸ್​ಬೋಟ್​ಗೆ ಸುಮಾರು 2.5 ಕೋಟಿ ರೂಪಾಯಿ ನಷ್ಟವಾಗಿರಬಹುದು ಎಂದು ಕಾಶ್ಮೀರ್​ ಹೌಸ್​ಬೋಟ್ ಅಸೋಸಿಯೇಷನ್​​ನ ವಕ್ತಾರ ಯಕೂಬ್ ದುನ್ನೋ ಮಾಹಿತಿ ನೀಡಿದ್ದಾರೆ.

ಹೌಸ್​ಬೋಟ್​ನ ಪುನರ್​ ನಿರ್ಮಾಣಕ್ಕೆ ಸರ್ಕಾರ ಪರಿಹಾರ ನೀಡಬೇಕೆಂದು ಕಾಶ್ಮೀರ್​ ಹೌಸ್​ಬೋಟ್ ಅಸೋಸಿಯೇಷನ್ ಒತ್ತಾಯಿಸಿದೆ.

ಇದನ್ನೂ ಓದಿ: Uttarakhad Snowfall : ಗಂಗೋತ್ರಿ ಹೈವೇ ಬಂದ್​, ಕಡಿಮೆ ತಾಪಮಾನಕ್ಕೆ ಒಡೆದ ಪೈಪ್​​ಲೈನ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.