ಮುಂಬೈ: ಕ್ರೂಸ್ ಹಡಗು ಡ್ರಗ್ಸ್ ಪ್ರಕರಣದ ಆರೋಪಿ ಮೋಹಕ್ ಜೈಸ್ವಾಲ್‌ಗೆ (Mohak Jaiswal) ವಿಶೇಷ ಎನ್‌ಡಿಪಿಎಸ್ (ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ) ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಕ್ರೂಸ್ ಹಡಗು ಡ್ರಗ್ಸ್ ಪ್ರಕರಣದಲ್ಲಿ(cruise drugs bust case) ಬಂಧಿತರಾದ 20 ಜನರ ಪೈಕಿ ಜೈಸ್ವಾಲ್ ಜಾಮೀನು ಪಡೆದ 15ನೇ ಆರೋಪಿಯಾಗಿದ್ದಾರೆ. ವಿಶೇಷ ಎನ್‌ಡಿಪಿಎಸ್ (NDPS) ನ್ಯಾಯಾಧೀಶ ವಿ.ವಿ ಪಾಟೀಲ್ ಅವರು ಆರೋಪಿಗಳಿಗೆ 50,000 ರೂ.ಗಳ ವೈಯಕ್ತಿಕ ಬಾಂಡ್‌ನಲ್ಲಿ ಜಾಮೀನು ನೀಡಿದರು. ಅಲ್ಲದೇ ಪ್ರತಿ ಸೋಮವಾರ ಎನ್‌ಸಿಬಿ(NCB) ಕಚೇರಿಗೆ ಭೇಟಿ ನೀಡುವಂತೆ ಸೂಚಿಸಲಾಗಿದೆ.
ಇದನ್ನೂ ಓದಿ: 24ನೇ ವಸಂತಕ್ಕೆ ಕಾಲಿಟ್ಟ ಶಾರೂಖ್ ಪುತ್ರ.. ಹುಟ್ಟುಹಬ್ಬದ ಮುನ್ನಾದಿನ ವಿಚಾರಣೆ ಎದುರಿಸಿ ಬಂದ ಆರ್ಯನ್