ETV Bharat / bharat

ಸಂಕ್ರಾತಿಯಂದು ನಿಮ್ಮ ರಾಶಿಯ ಫಲಾಫಲ ಹೀಗಿದೆ ನೋಡಿ.. - ಗುರುವಾರದ ರಾಶಿಫಲ

ಜನವರಿ 14ರಂದು ಸೂರ್ಯನು ಮಕರ ರಾಶಿಯನ್ನು ಪ್ರವೇಶ ಮಾಡಲಿದ್ದು, ಈ ವಿಶೇಷ ದಿನದ ರಾಶಿಫಲ ಹೀಗಿದೆ..

Special horoscope content is being sent on the occasion of  Makar Shankranti
ಸಂಕ್ರಾತಿಯಂದು ನಿಮ್ಮ ರಾಶಿಯ ಫಲಾಫಲ
author img

By

Published : Jan 14, 2021, 6:04 AM IST

ಮೇಷ: ಸೂರ್ಯ ಮಕರ ರಾಶಿಗೆ ಪ್ರವೇಶಿಸುವುದರಿಂದ ನಿಮಗೆ ಆರ್ಥಿಕ ಲಾಭಗಳಾಗಲಿವೆ. ನೀವು ಸಮಯಕ್ಕೆ ಸರಿಯಾಗಿ ನಿಮ್ಮ ಜವಾಬ್ದಾರಿಗಳನ್ನು ಪೂರೈಸಲು ಸಾಧ್ಯವಾಗುತ್ತದೆ. ಕಾರ್ಯಸ್ಥಳದಲ್ಲಿ ನಿಮ್ಮ ಸ್ಥಾನಮಾನ ಹೆಚ್ಚಲಿದೆ.

ಪರಿಹಾರ: ಭಾನುವಾರದಂದು ಹಸುವಿಗೆ ಬೆಲ್ಲವನ್ನು ನೀಡಬೇಕು.

ವೃಷಭ: ಸೂರ್ಯನು ಮಕರ ರಾಶಿಗೆ ಪ್ರವೇಶಿಸುವುದರಿಂದ ನಿಮಗೆ ಅದೃಷ್ಟ ಒಲಿಯಲಿದೆ. ಅದಾಗ್ಯೂ, ನೀವು ಕಠಿಣ ಪರಿಶ್ರಮ ಪಡಲೇಬೇಕಾಗಿರುತ್ತದೆ. ಯಾವುದೇ ಕೆಲಸ ಆರಂಭಿಸುವ ಮುನ್ನ ನಿಮ್ಮ ಹಿರಿಯರ ಆಶೀರ್ವಾದ ಪಡೆಯಿರಿ. ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ.

ಪರಿಹಾರ: ನೀರು ಮತ್ತು ಕುಂಕುಮ ಬೆರೆಸಿ ಪ್ರತಿ ಮುಂಜಾನೆ ಸೂರ್ಯನಿಗೆ ಅರ್ಘ್ಯ ನೀಡಿ.

ಮಿಥುನ: ಸೂರ್ಯ ಮಕರ ರಾಶಿಗೆ ಪ್ರವೇಶ ಮಾಡುವುದರಿಂದ ನೀವು ಪ್ರವಾಸಕ್ಕೆ ಹೋಗಬಹುದು. ಅದಾಗ್ಯೂ, ನೀವು ಹೊರಗಿನ ಆಹಾರ ಸೇವಿಸದೆ ಇದ್ದರೆ ಒಳಿತು. ನಿಮ್ಮ ವಾಹನವನ್ನು ಎಚ್ಚರಿಕೆಯಿಂದ ಚಲಾಯಿಸಿ.

ಪರಿಹಾರ: ಸೂರ್ಯಾಷ್ಟಕ ಜಪಿಸಿದರೆ ಸಹಾಯವಾಗುತ್ತದೆ.

ಕಟಕ: ಸೂರ್ಯ ಮಕರ ರಾಶಿಗೆ ಪ್ರವೇಶ ಮಾಡುವುದರಿಂದ ನಿಮಗೆ ಜಠರ ಸಂಬಂಧಿ ಸಮಸ್ಯೆಗಳು ಎದುರಾಗಬಹುದು. ಖಾಯಿಲೆಗಳ ಕಾರಣದಿಂದ ನಿಮ್ಮ ಖರ್ಚುಗಳು ಹೆಚ್ಚಾಗಬಹುದು. ನಿಮ್ಮ ಬಾಳಸಂಗಾತಿ ಅಥವಾ ವ್ಯಾಪಾರಿ ಪಾಲುದಾರರ ಜೊತೆಯಲ್ಲಿ ಕೆಲವು ವ್ಯತ್ಯಾಸಗಳು ಎದುರಾಗಬಹುದು.

ಪರಿಹಾರ: ನಿಮ್ಮ ಭೋಜನವಾದ ನಂತರ ಪ್ರತಿನಿತ್ಯ ಬೆಲ್ಲವನ್ನು ಸೇವಿಸಿ.

ಸಿಂಹ: ಸೂರ್ಯ ಮಕರ ರಾಶಿಗೆ ಪ್ರವೇಶ ಮಾಡುವುದರಿಂದ ನಿಮ್ಮ ಸಂಪಾದನೆ ಕಡಿಮೆಯಾಗಿ ಖರ್ಚುಗಳು ಹೆಚ್ಚಾಗಬಹುದು. ಹಾಗಾಗಿ ಸ್ವಲ್ಪ ಅಸಮತೋಲನ ಎದುರಾಗುವ ಸಾಧ್ಯತೆ ಇದೆ. ಒಂದೊಮ್ಮೆ ನೀವು ಕೆಲಸ ಬದಲಾಯಿಸಲು ಬಯಸಿದ್ದರೆ, ಆ ದಿಕ್ಕಿನಲ್ಲಿ ಮುನ್ನಡೆಯುವ ಸಾಧ್ಯತೆ ಇದೆ. ನಿಮ್ಮ ವಿರೋಧಿಗಳು ದುರ್ಬಲರಾಗುತ್ತಾರೆ.

ಪರಿಹಾರ: ಆಧಿತ್ಯಹೃದಯ ಸ್ತೋತ್ರವನ್ನು ಜಪಿಸಿ.

ಕನ್ಯಾ: ಸೂರ್ಯ ಮಕರ ರಾಶಿಗೆ ಪ್ರವೇಶ ಮಾಡುವುದರಿಂದ ನಿಮಗೆ ವೃತ್ತಿಯಲ್ಲಿ ಬಡ್ತಿ ಸಿಗಬಹುದು. ನಿಮ್ಮ ಮಕ್ಕಳು ಕಷ್ಟಗಳನ್ನು ಎದುರಿಸಬಹುದು. ನೀವು ಮನೆಯಲ್ಲಿ ಕೆಲವು ಶುಭಕಾರ್ಯಗಳನ್ನು ಕೈಗೊಳ್ಳಬಹುದು.

ಪರಿಹಾರ: ಗಾಯತ್ರಿ ಚಾಲೀಸಾ ಜಪಿಸಿ.

ತುಲಾ: ಸೂರ್ಯನು ಮಕರ ರಾಶಿಗೆ ಪ್ರವೇಶ ಮಾಡುವುದರಿಂದ ನಿಮ್ಮ ತಾಯಿಯ ಆರೋಗ್ಯದ ಬಗ್ಗೆ ನಿಮಗೆ ಕಳವಳ ಮೂಡಬಹುದು. ನಿಮ್ಮ ಮನಸ್ಸು ಎಲ್ಲೆಲ್ಲೊ ಓಡಬಹುದು. ನಿಮ್ಮ ಭೂಮಿಗೆ ಸಂಬಂಧಿಸಿದ ಕಾರ್ಯಗಳು ವಿಳಂಬವಾಗಬಹುದು.

ಪರಿಹಾರ: ಗಾಯತ್ರಿ ಮಂತ್ರ ಪಠಿಸಿ.

ವೃಶ್ಚಿಕ: ಸೂರ್ಯನು ಮಕರ ರಾಶಿಗೆ ಪ್ರವೇಶ ಮಾಡುವುದರಿಂದ ನಿಮ್ಮ ಒಡಹುಟ್ಟಿದವರ ಜೊತೆಗಿನ ಸಂಬಂಧದಲ್ಲಿ ಒತ್ತಡಗಳು ಎದುರಾಗಬಹುದು. ನಿಮ್ಮ ಕುಟುಂಬದ ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ಪರಿಹಾರ: ಸೂರ್ಯ ದೇವನಿಗೆ ಸಂಬಂಧಿಸಿದ ದಾನಗಳನ್ನು ಮಾಡಿ

ಧನಸ್ಸು: ಸೂರ್ಯನು ಮಕರ ರಾಶಿಗೆ ಪ್ರವೇಶ ಮಾಡುವುದರಿಂದ ನಿಮ್ಮ ಕುಟುಂಬದಲ್ಲಿನ ಹಿರಿಯರ ಜೊತೆಯಲ್ಲಿ ಕೆಲವು ಅಭಿಪ್ರಾಯ ಬೇಧಗಳಾಗಬಹುದು. ನಿಮ್ಮ ವಂಶಪಾರಂಪರಿಕವಾಗಿ ಬಂದ ಆಸ್ತಿಗೆ ಸಂಬಂಧಿಸಿದಂತೆ ವಿವಾದಗಳು ಎದುರಾಗಬಹುದು. ಅದಲ್ಲದೆ, ನಿಮ್ಮ ಪ್ರವೃತ್ತಿಯು ಕಠೋರವಾಗಿರಬಹುದು.

ಪರಿಹಾರ: ಸೂರ್ಯ ದೇವನ ಮಂತ್ರವನ್ನು ಪ್ರತಿನಿತ್ಯ ಜಪಿಸಿ.

ಮಕರ: ಸೂರ್ಯನು ಮಕರ ರಾಶಿಗೆ ಪ್ರವೇಶ ಮಾಡುವುದರಿಂದ ನಿಮಗೆ ಅತಿಹೆಚ್ಚು ಉತ್ಸಾಹವಿರುತ್ತದೆ. ಅದಾಗ್ಯೂ, ಸಣ್ಣಪುಟ್ಟ ವಿಚಾರಗಳಿಗಾಗಿ ನಿಮ್ಮ ವ್ಯಾಪಾರಿ ಪಾಲುದಾರರ ಜೊತೆಯಲ್ಲಿ ವ್ಯತ್ಯಾಸಗಳು ಎದುರಾಗಬಹುದು.

ಪರಿಹಾರ: ಭಾನುವಾರ ಸೂರ್ಯ ದೇವನಿಗೆ ಬೆಲ್ಲವನ್ನು ಅರ್ಪಿಸಿ.

ಕುಂಭ: ಸೂರ್ಯನು ಮಕರ ರಾಶಿಗೆ ಪ್ರವೇಶ ಮಾಡುವುದರಿಂದ ವಿದೇಶಕ್ಕೆ ಸಂಬಂಧಿಸಿದ ವ್ಯಾಪಾರಗಳಿಗೆ ಇದು ಉತ್ತಮ ಸಮಯವೆಂದು ತೋರುತ್ತದೆ. ನಿಮ್ಮ ಆರೋಗ್ಯವು ಉತ್ತಮವಾಗಿರಲಿದೆ. ನಿಮ್ಮ ವಿರೋಧಿಗಳ ಬಗ್ಗೆ ಎಚ್ಚರಿಕೆ ಇರಲಿ.

ಪರಿಹಾರ: ಪ್ರತಿನಿತ್ಯ ನಿಮ್ಮ ತಂದೆತಾಯಿ ಇಬ್ಬರ ಆಶಿರ್ವಾದ ಪಡೆಯಿರಿ.

ಮೀನ: ಸೂರ್ಯನ ಮಕರ ರಾಶಿಯ ಪ್ರವೇಶವು ನಿಮ್ಮ ಉತ್ತಮ ಫಲ ನೀಡಲಿದೆ. ನಿಮ್ಮ ಸಾಮಾಜಿಕ ಘನತೆ ಹೆಚ್ಚಲಿದೆ. ನಿಮ್ಮ ಸಂಪಾದನೆ ಹೆಚ್ಚಿಸಬೇಕೆಂದಿರುವ ನಿಮ್ಮ ಪ್ರಯತ್ನಗಳಿಗೆ ಯಶಸ್ಸು ದೊರೆಯಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.