ನವದೆಹಲಿ : ಶಕರ್‌ಪುರ ಪ್ರದೇಶದಲ್ಲಿ ನಡೆದ ಎನ್ಕೌಂಟರ್ನಲ್ಲಿ ದೆಹಲಿ ಪೊಲೀಸರ ವಿಶೇಷ ಸೆಲ್ ಐವರನ್ನು ಬಂಧಿಸಿದ್ದಾರೆ. ಈ ಐವರು ನಿಷೇಧಿತ ಖಲಿಸ್ತಾನಿ ಮತ್ತು ಇಸ್ಲಾಮಿಕ್ ಸಂಘಟನೆಗಳೊಂದಿಗೆ ನಂಟು ಹೊಂದಿದ್ದರು ಎಂದು ಡಿಸಿಪಿ ಪ್ರಮೋದ್ ಕುಶ್ವಾಹ ಹೇಳಿದ್ದಾರೆ.
ಬಂಧಿತರಲ್ಲಿ ಇಬ್ಬರು ಪಂಜಾಬ್ ಮೂಲದವರಾಗಿದ್ದು, ಇನ್ನೂ ಮೂವರು ಕಾಶ್ಮೀರ ಮೂಲದವರು. ಆರೋಪಿಗಳಿಂದ ಶಸ್ತ್ರಾಸ್ತ್ರಗಳು ಮತ್ತು ಇತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಡಿಸಿಪಿ ಪ್ರಮೋದ್ ಕುಶ್ವಾಹ ತಿಳಿಸಿದ್ದಾರೆ.
ದೀರ್ಘ ಕಾಲದಿಂದಲೂ ದೆಹಲಿ ಪೊಲೀಸರ ವಿಶೇಷ ಸೆಲ್ ಈ ಎರಡೂ ಸಂಘಟನೆ ಮತ್ತು ಅದರ ಸದಸ್ಯರ ಮೇಲೆ ನಿಗಾವಹಿಸಿತ್ತು. ಅಲ್ಲದೇ ಅವರನ್ನು ನಿರಂತರವಾಗಿ ಟ್ರ್ಯಾಕ್ ಮಾಡಲಾಗುತ್ತಿತ್ತು ಎಂದು ಮೂಲಗಳು ತಿಳಿಸಿವೆ.