ETV Bharat / bharat

ಬೆಳೆದು ನಿಂತ ಭತ್ತದಲ್ಲಿ ಅರಳಿದ ತಿರುವಳ್ಳುವರ್ ಆಕೃತಿ: ರೈತನ ಅದ್ಭುತ ಪ್ರಯತ್ನ - ಕುಂಭಕೋಣಂನ ಮಲಯಪ್ಪನಲ್ಲೂರು ಗ್ರಾಮದ ರೈತ ಪಿ ಜಿ ಇಳಂಗೋವನ್

ಸಾವಯವ ಕೃಷಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ತಂಜಾವೂರಿನ ರೈತರೊಬ್ಬರು ಭತ್ತದಲ್ಲಿ ತಿರುವಳ್ಳುವರ್ ಚಿತ್ರವನ್ನು ಮೂಡಿಸುವ ಮೂಲಕ ವಿಚಿತ್ರ ಹಾಗೂ ವಿಭಿನ್ನ ಪ್ರಯತ್ನ ಮಾಡಿದ್ದಾರೆ.

sowed paddy in the image of Tamil poet Thiruvalluvar

author img

By

Published : Jul 10, 2022, 4:01 PM IST

ತಂಜಾವೂರು (ತಮಿಳುನಾಡು) : ಕುಂಭಕೋಣಂನ ಮಲಯಪ್ಪನಲ್ಲೂರು ಗ್ರಾಮದ ರೈತ ಪಿ.ಜಿ.ಇಳಂಗೋವನ್ ಎಂಬುವರು ಕಳೆದ 30 ವರ್ಷಗಳಿಂದ ಕೃಷಿ ಮಾಡುತ್ತಿದ್ದಾರೆ. ಅದರಲ್ಲೂ ಪ್ರಮುಖವಾಗಿ ಭತ್ತದ ಮೇಲಿನ ಆಸಕ್ತಿಯಿಂದಾಗಿ ಸಾವಯವ ಕೃಷಿಯತ್ತ ಮುಖಮಾಡಿದ್ದಾರೆ. ಈ ಕಾರ್ಯವನ್ನು 10 ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದಾರೆ.

ಸಾವಯವ ಕೃಷಿಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ 110 ದಿನದ ಸಾಂಪ್ರದಾಯಿಕ ಭತ್ತದ ನೇಪಾಳ ಚಿನ್ನಾರ್ ತಳಿ ಹಾಗೂ ಮೈಸೂರು ಮಲ್ಲಿಗೆ ತಳಿಯನ್ನು ಕುರವೈ ಕೃಷಿಯಲ್ಲಿ ಬೆಳೆಸಿದ್ದು, ಅದರಲ್ಲಿ ತಿರುವಳ್ಳುವರ್ ಚಿತ್ರಣವನ್ನು ಕಾಣಬಹುದಾಗಿದೆ.

  • TN | Elangovan, a farmer from Thanjavur's Malaiyappanallur sowed paddy in the image of Tamil poet Thiruvalluvar

    " I've been doing organic farming for many years. Thiruvalluvar has written about organic farming&due to that I made it with 2 types of paddy varieties,"he said (09.7) pic.twitter.com/pG9rsJ9nUD

    — ANI (@ANI) July 10, 2022 " class="align-text-top noRightClick twitterSection" data=" ">

ಈ ಸಂಬಂಧ ಇಳಂಗೋವನ್ ಮಾತನಾಡಿ, ವಿಶ್ವವಿಖ್ಯಾತ ತಿರುಕ್ಕುರಳವನ್ನು ನೀಡಿದ ತಿರುವಳ್ಳುವರ್ ಎಲ್ಲರನ್ನೂ ಹೆಮ್ಮೆ ಪಡುವಂತೆ ಮಾಡಿದ್ದಾರೆ. ಅವರು ನೈಸರ್ಗಿಕ ಬೆಳೆಗಳಿಗೆ ಹೆಚ್ಚಿನ ಒತ್ತು ನೀಡುವ ಬಗ್ಗೆ ನಮಗೆ ತಿಳಿಸಿಕೊಟ್ಟಿದ್ದಾರೆ. ಅವರನ್ನು ಹೊಗಳಲು ಹಾಗೂ ಜಾಗೃತಿ ಮೂಡಿಸಲು ಈ ರೀತಿಯಲ್ಲಿ ನಾಟಿ ಮಾಡಿದ್ದೇನೆ. ನೈಸರ್ಗಿಕ ಕೃಷಿಯ ಬಗ್ಗೆ ಜನರು ಈ ಮೂಲಕ ಎಚ್ಚೆತ್ತುಕೊಳ್ಳಲಿ ಎಂಬುದು ನನ್ನ ಉದ್ದೇಶ ಎಂದಿದ್ದಾರೆ. ನಾಟಿ ಮಾಡಿ 60 ದಿನ ಕಳೆದಿರುವ ಈ ಬೆಳೆ ಈಗ ಬಾಡಲಾರಂಭಿಸಿದ್ದು, ಇನ್ನು 50 ದಿನಗಳಲ್ಲಿ ಫಸಲು ಬರಲಿದೆ.

ಇದನ್ನೂ ಓದಿ: ಕಲಬುರಗಿ ಜಿಲ್ಲೆಯಲ್ಲಿ ರೆಡ್ ಅಲರ್ಟ್.. ತುರ್ತು ಕಾರ್ಯಾಚರಣೆಗೆ ಸಜ್ಜಾದ ಎಸ್‌ಡಿಆರ್‌ಎಫ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.