ನವದೆಹಲಿ: ದೆಹಲಿ-ಎನ್‌ಸಿಆರ್ ಪ್ರವೇಶಿಸಿರುವ ನೈರುತ್ಯ ಮಾನ್ಸೂನ್ ಐದು ದಿನಗಳ ವಿಳಂಬದ ನಂತರ ಇಂದು ಇಡೀ ದೇಶವನ್ನು ಆವರಿಸಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
ನೈರುತ್ಯ ಮಾರುತಗಳ ಪ್ರವೇಶದಿಂದ ಉತ್ತರ ಭಾರತ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಬಿರುಸಿನ ಮಳೆಯಾಗುತ್ತಿದೆ. ಸಾಮಾನ್ಯವಾಗಿ ಜುಲೈ 8ರ ವೇಳೆಗೆ ದೇಶದಾದ್ಯಂತ ನೈರುತ್ಯ ಮುಂಗಾರು ಮಾರುತಗಳ ವ್ಯಾಪಿಸುತ್ತದೆ. ಈ ಹಿಂದೆ ಜುಲೈ 15ಕ್ಕೆ ಮಾನ್ಸೂನ್ ಮಾರುತಗಳು ಪ್ರವೇಶವಾಗುತ್ತಿತ್ತು. ಆದರೆ, ಈ ವರ್ಷದ ಐದು ದಿನ ವಿಳಂಬವಾಗಿದೆ ಎಂದು ಐಎಂಡಿ ಮಾಹಿತಿ ನೀಡಿದೆ.
ಮಂಗಳವಾರ, ಎನ್‌ಸಿಆರ್‌ಯ ಹಲವಾರು ಭಾಗಗಳಲ್ಲಿ ಮಳೆಯಾಗಿದೆ. ಅದರ ನಂತರ ಮುಂಗಾರು ಮಾರುತಗಳು ದೆಹಲಿಯನ್ನೂ ಪ್ರವೇಶಿಸಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಸೋಮವಾರ ರಾಜಸ್ಥಾನದ ಜೈಸಲ್ಮೇರ್ ಮತ್ತು ಗಂಗಾನಗರ ವ್ಯಾಪ್ತಿಯಲ್ಲಿ ಮಳೆ ಆರಂಭವಾಗಿದೆ. ಮಂಗಳವಾರ ಎನ್‌ಸಿಆರ್ ಪ್ರದೇಶದಲ್ಲಿ ಉತ್ತಮ ಮಳೆಯಾಗಿದೆ.
ಕಳೆದ ನಾಲ್ಕು ದಿನಗಳಿಂದ ಬಂಗಾಳ ಕೊಲ್ಲಿಯಲ್ಲಿ ನಿರಂತರವಾಗಿ ತೇವಾಂಶವುಳ್ಳ ಗಾಳಿ ಬೀಸುತ್ತಿರುವುರಿಂದ, ದೆಹಲಿ, ಉತ್ತರ ಪ್ರದೇಶ, ಪಂಜಾಬ್, ಹರಿಯಾಣ, ರಾಜಸ್ಥಾನ ಸೇರಿದಂತೆ ದೇಶದ ಬೇರೆ ಬೇರೆ ಭಾಗಗಳಲ್ಲಿ ಮಳೆಯಾಗುತ್ತಿದೆ’ ಎಂದು ಐಎಂಡಿ ಹೇಳಿದೆ.