ETV Bharat / bharat

3 ದಿನ ಮೊದಲೇ ಭಾರತ ಪ್ರವೇಶಿಸಿದ ನೈಋತ್ಯ ಮಾನ್ಸೂನ್; ಈ ರಾಜ್ಯಗಳಲ್ಲಿ ಅತಿ ಹೆಚ್ಚು ಮಳೆಯಂತೆ! - ಮಳೆಯ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ

ನೈಋತ್ಯ ಮುಂಗಾರು ಮಾರುತಗಳು ಅವಧಿಗಿಂತಲೂ ಮೂರು ದಿನ ಮುಂಚೆಯೇ ಚುರುಕು ಪಡೆದಿದ್ದು, ಕರ್ನಾಟಕ ಮಹಾರಾಷ್ಟ್ರ, ಗುಜರಾತ್​, ತೆಲಂಗಾಣ, ರಾಯಲಸೀಮಾ ಭಾಗದಲ್ಲಿ ಮಳೆಯಾಗಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.

3 ದಿನ ಮೊದಲೇ ಭಾರತ ಪ್ರವೇಶಿಸಿದ ನೈಋತ್ಯ ಮಾನ್ಸೂನ್

author img

By

Published : Jun 13, 2022, 8:18 PM IST

ನವದೆಹಲಿ: ನೈಋತ್ಯ ಮುಂಗಾರು ಮಾರುತಗಳು ಅವಧಿಗಿಂತಲೂ ಮುನ್ನವೇ ಚುರುಕಾಗಿವೆ. ಪಶ್ಚಿಮ ಮತ್ತು ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹವಾಮಾನ ಇಲಾಖೆಯ ಪ್ರಕಾರ, ಗುಜರಾತ್‌, ಮಹಾರಾಷ್ಟ್ರದ, ಕರ್ನಾಟಕ, ಬಿಹಾರ, ಪಶ್ಚಿಮ ಬಂಗಾಳ, ತೆಲಂಗಾಣ, ರಾಯಲಸೀಮಾ ಮತ್ತು ತಮಿಳುನಾಡಿನ ಕೆಲವು ಭಾಗಗಳಲ್ಲಿ ಹೆಚ್ಚು ಮಳೆ ಸುರಿಯಲಿದೆ.

ಉತ್ತರ ಅರೇಬಿಯನ್ ಸಮುದ್ರದ ಕೆಲವು ಭಾಗಗಳು, ಗುಜರಾತ್ ರಾಜ್ಯದ ಕೆಲವು ಭಾಗಗಳು, ದಕ್ಷಿಣ ಮಧ್ಯಪ್ರದೇಶದ ಕೆಲವು ಭಾಗಗಳು, ಸಂಪೂರ್ಣ ಮಧ್ಯ ಮಹಾರಾಷ್ಟ್ರ, ಮರಾಠವಾಡ, ಕರ್ನಾಟಕ ಮತ್ತು ತಮಿಳುನಾಡು, ವಿದರ್ಭ ಮತ್ತು ತೆಲಂಗಾಣದ ಕೆಲವು ಭಾಗಗಳಲ್ಲಿ ಮಾನ್ಸೂನ್​ ಮಾರುತಗಳು ಅತಿ ಹೆಚ್ಚು ಮಳೆ ಸುರಿಯಲಿವೆ. ಮುಂದಿನ 48 ಗಂಟೆಗಳಲ್ಲಿ ಆಂಧ್ರಪ್ರದೇಶ, ಪಶ್ಚಿಮ ಕೇಂದ್ರ ಮತ್ತು ವಾಯುವ್ಯ ಬಂಗಾಳ ಕೊಲ್ಲಿಯ ಹೆಚ್ಚಿನ ಭಾಗಗಳಲ್ಲಿ ಮಳೆಯಾಗಲಿದೆ ಎಂದು ಐಎಂಡಿ ತಿಳಿಸಿದೆ.

  • Southwest Monsoon has further advanced into some more parts of Arabian Sea, some parts of Gujarat, entire Konkan, most parts of Madhya Maharashtra & Marathwada, Karnataka, Some parts of Telangana & Rayalaseema, some more parts of TN, most parts of SHWB, some parts of Bihar today pic.twitter.com/85o6ErRiZA

    — India Meteorological Department (@Indiametdept) June 13, 2022 " class="align-text-top noRightClick twitterSection" data=" ">

ಮೇ 29 ರಂದು ಕೇರಳದಲ್ಲಿ ಮಳೆ ಪ್ರಾರಂಭವಾದ ನಂತರ, ಜೂನ್‌ನಲ್ಲಿ ಸಾಮಾನ್ಯ ದಿನಾಂಕಕ್ಕಿಂತ 3 ದಿನಗಳ ಮುಂಚಿತವಾಗಿಯೇ ನೈಋತ್ಯ ಮಾನ್ಸೂನ್ ಮಾರುತಗಳು ಮಳೆ ಸುರಿಸಲಿವೆ. ಜೂನ್ 9 ರಿಂದ ನೈಋತ್ಯ ಮಾನ್ಸೂನ್ ಮಾರುತಗಳು ವೇಗ ಪಡೆದುಕೊಂಡಿವೆ.

ಮುಂದಿನ 5 ದಿನಗಳಲ್ಲಿ ಈಶಾನ್ಯ ಭಾರತ ಮತ್ತು ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನಲ್ಲಿ ವ್ಯಾಪಕವಾದ ಗುಡುಗು ಸಹಿತ ಮಳೆಯಾಗಲಿದೆ. ಮುಂದಿನ ಕೆಲವು ದಿನಗಳಲ್ಲಿ ಈಶಾನ್ಯ ಭಾರತದ ಹಲವು ಭಾಗಗಳಲ್ಲೂ ಭಾರಿ ಮಳೆ ಸಾಧ್ಯತೆಯಿದೆ. ಜೂನ್ 15 ಮತ್ತು 17 ರ ನಡುವೆ ಬಿಹಾರ, ಜಾರ್ಖಂಡ್, ಒಡಿಶಾ ಮತ್ತು ಪಶ್ಚಿಮ ಬಂಗಾಳದ ಗಂಗಾನದಿ ಪ್ರದೇಶದಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇದನ್ನೂ ಓದಿ: ಕೇರಳ ಸಿಎಂ ಪ್ರಯಾಣಿಸುತ್ತಿದ್ದ ವಿಮಾನದೊಳಗೂ ಯುವ ಕಾಂಗ್ರೆಸ್‌ ಪ್ರತಿಭಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.