ETV Bharat / bharat

2 ವರ್ಷದಿಂದ ತಂದೆಯ ಚಿತಾಭಸ್ಮಕ್ಕಾಗಿ ಕಾಯುತ್ತಿದ್ದ ಮಕ್ಕಳು : ಆಸೆ ಪೂರೈಸಿದ ಮುಸ್ಲಿಂ ಮಹಿಳೆ

ವಿದೇಶದಲ್ಲಿ ಎರಡು ವರ್ಷಗಳಿಂದ ಹಾಗೆ ಇದ್ದ ತಂದೆಯ ಅಂತ್ಯಕ್ರಿಯೆಯ ಚಿತಾಭಸ್ಮವನ್ನು ಪುತ್ರರು ಕೊನೆಗೂ ಸ್ಪರ್ಶಿಸಿದ್ದಾರೆ. ತಂದೆಯ ಚಿತಾಭಸ್ಮಕ್ಕಾಗಿ ಕಾಯುತ್ತಿದ್ದ ಮಕ್ಕಳು ಕೊನೆಗೂ ಅದಕ್ಕೆ ನಮಸ್ಕರಿಸಿದ್ದಾರೆ.

2 ವರ್ಷದಿಂದ ತಂದೆಯ ಚಿತಾಭಸ್ಮಕ್ಕಾಗಿ ಕಾಯುತ್ತಿದ್ದ ಮಕ್ಕಳು : ಆಸೆ ಪೂರೈಸಿದ ಮುಸ್ಲಿಂ ಮಹಿಳೆ
2 ವರ್ಷದಿಂದ ತಂದೆಯ ಚಿತಾಭಸ್ಮಕ್ಕಾಗಿ ಕಾಯುತ್ತಿದ್ದ ಮಕ್ಕಳು : ಆಸೆ ಪೂರೈಸಿದ ಮುಸ್ಲಿಂ ಮಹಿಳೆ
author img

By

Published : Aug 28, 2022, 8:51 PM IST

ಕನ್ಯಾಕುಮಾರಿ( ತಮಿಳುನಾಡು): ಮಾನವೀಯತೆಗೆ ಧರ್ಮ ಅಥವಾ ಜಾತಿ ಯಾವುದೂ ಬೇಡ. ಒಂದೆಡೆ ಧಾರ್ಮಿಕವಾಗಿ ಜಗಳಗಳು ಹೆಚ್ಚಾಗುತ್ತಿರುವ ಈ ಸನ್ನಿವೇಶದಲ್ಲಿ ಇಂತಹ ಘಟನೆಗೆ ಪಾಠ ಹೇಳುವ ವಿಶೇಷ ಮಾನವೀಯ ಘಟನೆಯೊಂದು ಜರುಗಿದೆ.

ವಿದೇಶದಲ್ಲಿ ಎರಡು ವರ್ಷಗಳಿಂದ ಹಾಗೆ ಇದ್ದ ತಂದೆಯ ಅಂತ್ಯಕ್ರಿಯೆಯ ಚಿತಾಭಸ್ಮವನ್ನು ಪುತ್ರರು ಕೊನೆಗೂ ಸ್ಪರ್ಶಿಸಿದ್ದಾರೆ. ಇದಕ್ಕೆ ಕಾರಣವಾದದ್ದು, ಮುಸ್ಲಿಂ ಹೆಣ್ಣುಮಗಳು. ತಂದೆಯ ಚಿತಾಭಸ್ಮಕ್ಕಾಗಿ ಕಾಯುತ್ತಿದ್ದ ಮಕ್ಕಳು ಕೊನೆಗೂ ಅದಕ್ಕೆ ನಮಸ್ಕರಿಸಿದ್ದಾರೆ. ಈ ಘಟನೆ ಅರುಮಣೈ ಸಮೀಪದ ಕುಳಿಚಲ್ ಗ್ರಾಮದಲ್ಲಿ ನಡೆದಿದೆ.

ಬುಕ್ಲಿನ್ ರಿಕ್ಕಿ (22), ಅಕ್ಲಿನ್ ರಘುಲ್ (20) ಎಂಬ ಇಬ್ಬರು ಯುವಕರು ಸಾವಿಗೀಡಾದ ರಾಜಕುಮಾರ್ ಅವರ ಮಕ್ಕಳು. ರಾಜುಕುಮಾರ್ ಅವರ ಪತ್ನಿ ಲತಾ ಅವರು 2012 ರಲ್ಲಿ ರಸ್ತೆ ಅಪಘಾತದಿಂದ ನಿಧನರಾಗಿದ್ದರು. ಇದಾದ ನಂತರ ರಾಜ್‌ಕುಮಾರ್ ತಮ್ಮ ಕೆಲಸದ ನಿಮಿತ್ತ ಯುಎಇಗೆ ಹೋಗಿದ್ದರು. 2020 ರಲ್ಲಿ ಯುಎಇಯಲ್ಲಿ ಕೊರೊನಾದಿಂದಾಗಿ ಅಲ್ಲೇ ಸಾವಿಗೀಡಾಗಿದ್ದಾರೆ. ಸೋಂಕಿಗೆ ಒಳಗಾದ ಮೃತದೇಹವನ್ನು ವಿದೇಶದಿಂದ ತರಲು ನಿರ್ಬಂಧವಿದ್ದ ಕಾರಣ, ರಾಜ್‌ಕುಮಾರ್ ಅವರ ಅಂತ್ಯಕ್ರಿಯೆಯನ್ನು ಯುಎಇಯಲ್ಲಿಯೇ ನೆರವೇರಿಸಲಾಗಿತ್ತು.

ಚಿತಾಭಸ್ಮವಷ್ಟೇ ನೆನಪು: ರಾಜ್‌ಕುಮಾರ್ ಅವರ ಅಂತ್ಯಕ್ರಿಯೆಯ ಚಿತಾಭಸ್ಮವನ್ನು ಅಜ್ಮಾನ್‌ನ ಕಲಿಫಾ ಆಸ್ಪತ್ರೆಯಲ್ಲಿ ಸುರಕ್ಷಿತವಾಗಿ ಇರಿಸಲಾಗಿತ್ತು. ಕೊನೆಯ ಕ್ಷಣದಲ್ಲಿ ತಂದೆಯ ಮುಖವನ್ನೂ ನೋಡದ ಮಕ್ಕಳು ತಮ್ಮ ತಂದೆಯ ಅಂತ್ಯಕ್ರಿಯೆಯ ಚಿತಾಭಸ್ಮವನ್ನು ಅಲ್ಲಿಂದ ಹೇಗಾದರೂ ಮಾಡಿ ತರಿಸಿಕೊಳ್ಳಲು ಹರಸಾಹಸ ಪಟ್ಟರು. ಆದರೆ, ದುರದೃಷ್ಟವಶಾತ್ ಅವರಿಗೆ ಏನೂ ದೋಚಿರಲಿಲ್ಲ. ಕೊನೆಯದಾಗಿ ಅವರು ವಾಟ್ಸ್ ಆಪ್ ಗ್ರೂಪ್‌ನಲ್ಲಿ ಈ ಸಂಬಂಧ ಮಾಹಿತಿ ಹಂಚಿದರು. ಇದರಲ್ಲಿ ಅವರು ಕೇರಳದ ಕೊಟ್ಟಾಯಂಗೆ ಸೇರಿದ ಸಿಜೋ ಎಂಬ ವ್ಯಕ್ತಿಯಿಂದ ಸಹಾಯ ಪಡೆದರು. ತಂದೆಯನ್ನು ಕಳೆದುಕೊಂಡ ಈ ಇಬ್ಬರು ಮಕ್ಕಳಿಗೆ ಸಹಾಯ ಮಾಡಲು ಮುಂದೆ ಬಂದು ತಂದೆಯ ಚಿತಾಭಸ್ಮವನ್ನು ಆಸ್ಪತ್ರೆಯಿಂದ ಸ್ವೀಕರಿಸಿ ಅದನ್ನು ತಮ್ಮ ಮನೆಯಲ್ಲಿಟ್ಟುಕೊಂಡಿದ್ದರು.

ಮುಂದೆ ಬಂದ ಮುಸ್ಲಿಂ ಮಹಿಳೆ: ಸಿಜೋ ಅವರು ಅಂತ್ಯಕ್ರಿಯೆಯ ಚಿತಾಭಸ್ಮವನ್ನು ಅನೇಕ ಜನರ ಮೂಲಕ ತಲುಪಿಸಲು ಪ್ರಯತ್ನಿಸಿದರಾದರೂ ಭಾರತಕ್ಕೆ ಯಾರೂ ಅದನ್ನು ತರಲು ಮುಂದಾಗಲಿಲ್ಲ. ಆದರೆ, ಕೊನೆಗೆ ಕೋಜಿಕೋಡಿನ ತಾಹಿರಾ ಎಂಬ ಮುಸ್ಲಿಂ ಮಹಿಳೆ ಈ ಮಾನವೀಯ ಕೆಲಸ ಮಾಡಿದ್ದಾರೆ. ಚಿತಾಭಸ್ಮಕ್ಕಾಗಿ ಹಂಬಲಿಸುತ್ತಿದ್ದ ಪುತ್ರರಿಗೆ ಈ ಮೂಲಕ ಸಹಾಯ ಮಾಡಿದ್ದಾರೆ. 2 ವರ್ಷಗಳಿಂದ ತಂದೆಯ ಚಿತಾಭಸ್ಮಕ್ಕಾಗಿ ಕಾಯುತ್ತಿದ್ದ ಪುತ್ರರು ಅಂತಿಮವಾಗಿ ಅದನ್ನು ಕಣ್ಣಿಗೊತ್ತಿಕೊಂಡಿದ್ದಾರೆ.

ಇದನ್ನೂ ಓದಿ: ಸ್ಪೆಷಲ್‌ ವಿಡಿಯೋ ಹಂಚಿಕೊಂಡ ಆನಂದ್ ಮಹೀಂದ್ರ: ಈ ರೀತಿಯ ಸುರಂಗ ನಿರ್ಮಿಸಲು ಗಡ್ಕರಿಗೆ ಮನವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.