ETV Bharat / bharat

'ಸೋನಿಯಾ ಗಾಂಧಿ ನನ್ನನ್ನು ಪ್ರಧಾನಿ ಮಾಡಲ್ಲ': ದಿ.ಪ್ರಣಬ್ ಮುಖರ್ಜಿ ಮಾತು ನೆನಪಿಸಿಕೊಂಡ ಪುತ್ರಿ ಶರ್ಮಿಷ್ಠಾ - ಕಾಂಗ್ರೆಸ್ ವಕ್ತಾರೆ ಶರ್ಮಿಷ್ಠಾ

Sharmistha Mukherjee: ಸೋನಿಯಾ ಗಾಂಧಿ ತನ್ನನ್ನು ಪ್ರಧಾನಿ ಮಾಡಲ್ಲ ಎಂಬುದು ಪ್ರಣಬ್​ ಮುಖರ್ಜಿಯವರಿಗೆ ಮೊದಲೇ ಗೊತ್ತಿತ್ತು ಎಂದು ಪುತ್ರಿ ಶರ್ಮಿಷ್ಠಾ ತಮ್ಮ ಕೃತಿಯಲ್ಲಿ ದಾಖಲಿಸಿದ್ದಾರೆ.

Sonia won't make me PM: Pranab told daughter Sharmistha after 2004 drama

author img

By PTI

Published : Dec 6, 2023, 4:16 PM IST

ನವದೆಹಲಿ: "ಇಲ್ಲ, ಸೋನಿಯಾ ಗಾಂಧಿ ನನ್ನನ್ನು ಪ್ರಧಾನ ಮಂತ್ರಿ ಮಾಡಲ್ಲ" ಅಂದಿದ್ದರು ಪ್ರಣಬ್ ಮುಖರ್ಜಿ. 2004ರಲ್ಲಿ ಕಾಂಗ್ರೆಸ್​ನಿಂದ ಯಾರನ್ನು ಪ್ರಧಾನಿ ಮಾಡಬೇಕೆಂಬ ವಿಚಾರಮಂಥನ ನಡೆದಾಗ, ನೀವು ಪ್ರಧಾನಿಯಾಗುವ ಸಾಧ್ಯತೆಗಳಿವೆಯಾ ಎಂದು ಪ್ರಣಬ್ ಅವರಿಗೆ ಮಗಳು ಶರ್ಮಿಷ್ಠಾ ಕೇಳಿದ್ದರಂತೆ. ಆಗ ಇಲ್ಲ, ಅವರು ನನ್ನನ್ನು ಪ್ರಧಾನಿ ಮಾಡಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರಂತೆ ಪ್ರಣಬ್ ದಾ.

ಕೆಲ ದಿನಗಳಲ್ಲಿ ಬಿಡುಗಡೆಯಾಗಲಿರುವ In Pranab, My Father: A Daughter Remembers ಕೃತಿಯಲ್ಲಿ ಶರ್ಮಿಷ್ಠಾ ಈ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ.

2021ರಲ್ಲಿ ರಾಜಕೀಯ ತೊರೆದ ಮಾಜಿ ಕಾಂಗ್ರೆಸ್ ವಕ್ತಾರೆ ಶರ್ಮಿಷ್ಠಾ ತನ್ನ ತಂದೆಯ ಪ್ರಸಿದ್ಧ ಜೀವನದ ಬಗ್ಗೆ ಒಂದು ವಿಹಂಗಮ ನೋಟವನ್ನು ಒದಗಿಸಿದ್ದಾರೆ. ಸೋನಿಯಾ ತಮ್ಮನ್ನು ಪ್ರಧಾನಿ ಮಾಡದ್ದಕ್ಕೆ ಅವರ ಮೇಲೆ ಪ್ರಣಬ್​ಗೆ ಯಾವುದೇ ದ್ವೇಷವಿರಲಿಲ್ಲ ಹಾಗೂ 2004ರಲ್ಲಿ ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆಯಾದ ಮನಮೋಹನ್ ಸಿಂಗ್ ಅವರ ಬಗ್ಗೆಯೂ ಯಾವುದೇ ಸಿಟ್ಟಿರಲಿಲ್ಲ ಎಂದು ಶರ್ಮಿಷ್ಠಾ ಬರೆದಿದ್ದಾರೆ.

ಆ ದಿನಗಳ ಮುಖರ್ಜಿ ಅವರ ಡೈರಿ ಬರಹಗಳು ಕೊಂಚ ಗೊಂದಲಕಾರಿಯಾಗಿವೆ. ಬಹುಶಃ ಸಮಯದ ಅಭಾವದ ಕಾರಣದಿಂದ ಅವರಿಗೆ ವಿವರವಾಗಿ ಬರೆಯಲು ಸಾಧ್ಯವಾಗಿಲ್ಲದಿರಬಹುದು ಎಂದು ಶರ್ಮಿಷ್ಠಾ ಹೇಳುತ್ತಾರೆ.

ತನ್ನ ತಂದೆ ಬರೆದಿರುವ ಡೈರಿಯಲ್ಲಿನ ಮಾಹಿತಿಗಳು, ತಂದೆ ಸ್ವತಃ ತನಗೆ ಹೇಳಿದ ವೈಯಕ್ತಿಕ ವಿಚಾರಗಳು ಮತ್ತು ತನ್ನ ಸ್ವಂತ ಸಂಶೋಧನೆಯ ಮೂಲಕ ಶರ್ಮಿಷ್ಠಾ ಪ್ರಣಬ್ ಅವರ ರಾಜಕೀಯ ಜೀವನದ ಇಲ್ಲಿಯವರೆಗೆ ತಿಳಿದಿರದ ಅಂಶಗಳನ್ನು ಬಹಿರಂಗಪಡಿಸಿದ್ದಾರೆ. ಸೋನಿಯಾ ಗಾಂಧಿಯವರ ವಿಶ್ವಾಸ ಗಳಿಸುವಷ್ಟು 'ನಂಬರ್ ಒನ್ ವ್ಯಕ್ತಿ' ಆಗಿ ಹೊರಹೊಮ್ಮಲು ಸಾಧ್ಯವಾಗದ ಕಾರಣ ಭಾರತದ ಪ್ರಧಾನಿಯಾಗಬೇಕೆಂಬ ಅವರ ಈಡೇರದ ಮಹತ್ವಾಕಾಂಕ್ಷೆ, ನೆಹರೂ-ಗಾಂಧಿ ಕುಟುಂಬದ ಸುತ್ತಲಿನ ವ್ಯಕ್ತಿ ಆರಾಧನೆ ಮತ್ತು ರಾಹುಲ್ ಗಾಂಧಿ ಅವರ ವರ್ಚಸ್ಸು ಮತ್ತು ರಾಜಕೀಯ ತಿಳುವಳಿಕೆಯ ಕೊರತೆ ಇವೆಲ್ಲವೂ ಕೃತಿಯಲ್ಲಿ ಕಾಣಿಸಿಕೊಂಡಿವೆ ಎಂದು ಪ್ರಕಾಶಕ ಕಂಪನಿ ರೂಪಾ ಪಬ್ಲಿಕೇಷನ್ಸ್ ಹೇಳಿದೆ.

ಮುಖರ್ಜಿ ಭಾರತದ ಹಣಕಾಸು ಸಚಿವರಾಗಿ ಸೇವೆ ಸಲ್ಲಿಸಿದರು ಮತ್ತು ನಂತರ ವಿದೇಶಾಂಗ ವ್ಯವಹಾರಗಳು, ರಕ್ಷಣಾ, ಹಣಕಾಸು ಮತ್ತು ವಾಣಿಜ್ಯ ಸಚಿವರಾದರು. ಅವರು ಭಾರತದ 13ನೇ ರಾಷ್ಟ್ರಪತಿಯಾಗಿದ್ದರು (2012 ರಿಂದ 2017 ರವರೆಗೆ). ಪ್ರಣಬ್ ಮುಖರ್ಜಿ ಆಗಸ್ಟ್ 31, 2020ರಂದು ತಮ್ಮ 84ನೇ ವಯಸ್ಸಿನಲ್ಲಿ ನಿಧನರಾದರು.

ಇದನ್ನೂ ಓದಿ: ಕರ್ನಾಟಕದಲ್ಲಿ ಅಪರಾಧ ಪ್ರಕರಣ ಹೆಚ್ಚಳ: ಕಳೆದ ವರ್ಷ 1,404 ಮಂದಿ ಕೊಲೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.