ETV Bharat / bharat

ಪಬ್​ಜಿ ಚಟ.. ಸೇನಾಧಿಕಾರಿ ಮಗನಿಂದ ಹೆತ್ತಮ್ಮನ ಕೊಲೆ, ತಾಯಿ ಶವದೊಂದಿಗೆ 3 ದಿನ ಕಳೆದ ಅಣ್ಣ-ತಂಗಿ! - ಲಖನೌದಲ್ಲಿ ತಾಯಿ ಕೊಂದ ಮಗ

ಉತ್ತರಪ್ರದೇಶದ ರಾಜಧಾನಿ ಲಖನೌದಲ್ಲಿ ಅಪ್ರಾಪ್ತನೊಬ್ಬ ತನ್ನ ತಾಯಿಯನ್ನು ಗುಂಡಿಕ್ಕಿ ಕೊಲೆ ಮಾಡಿದಲ್ಲದೇ ತನ್ನ ತಾಯಿ ಶವದ ಜೊತೆ ಮೂರು ದಿನ ಕಳೆದಿರುವ ಘಟನೆ ಬೆಳಕಿಗೆ ಬಂದಿದೆ.

Lucknow today news  lucknow murder case in pgi area  murder in yamunapuram colony lucknow  son murder his mother in lucknow  ಉತ್ತರಪ್ರದೇಶದಲ್ಲಿ ಪಬ್​ಜೀ ಆಟ ನಿರಾಕರಿಸಿದ ತಾಯಿಯನ್ನೇ ಗುಂಡಿಕ್ಕಿ ಕೊಂದ ಮಗ  ಲಖನೌದಲ್ಲಿ ತಾಯಿ ಕೊಂದ ಮಗ  ಉತ್ತರಪ್ರದೇಶ ಅಪರಾಧ ಸುದ್ದಿ
ಸೇನಾಧಿಕಾರಿ ಮಗನಿಂದ ಹೆತ್ತಮ್ಮನ ಕೊಲೆ
author img

By

Published : Jun 8, 2022, 8:15 AM IST

ಲಖನೌ: ರಾಜಧಾನಿಯಲ್ಲಿ ಮಂಗಳವಾರ ತಡರಾತ್ರಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. 10ನೇ ತರಗತಿ ಓದುತ್ತಿದ್ದ 16 ವರ್ಷದ ಬಾಲಕ ತನ್ನ ತಾಯಿಯನ್ನು ಗುಂಡಿಕ್ಕಿ ಕೊಂದಿದ್ದಾನೆ. ಅಷ್ಟೇ ಅಲ್ಲ, 10 ವರ್ಷದ ತಂಗಿಯೊಂದಿಗೆ ಮೂರು ದಿನಗಳ ಕಾಲ ತಾಯಿಯ ಶವದೊಂದಿಗೆ ಮನೆಯಲ್ಲೇ ವಾಸಿಸಿದ್ದಾನೆ. ಮಂಗಳವಾರ ಸಂಜೆ ಮೃತದೇಹದಿಂದ ದುರ್ವಾಸನೆ ಬರಲಾರಂಭಿಸಿದಾಗ ಬಾಲಕ ತಾನು ಮಾಡಿದ ಕೊಲೆಗೆ ಸುಳ್ಳು ಕಥೆಯನ್ನು ಹೆಣೆದಿದ್ದಾನೆ.

Lucknow today news  lucknow murder case in pgi area  murder in yamunapuram colony lucknow  son murder his mother in lucknow  ಉತ್ತರಪ್ರದೇಶದಲ್ಲಿ ಪಬ್​ಜೀ ಆಟ ನಿರಾಕರಿಸಿದ ತಾಯಿಯನ್ನೇ ಗುಂಡಿಕ್ಕಿ ಕೊಂದ ಮಗ  ಲಖನೌದಲ್ಲಿ ತಾಯಿ ಕೊಂದ ಮಗ  ಉತ್ತರಪ್ರದೇಶ ಅಪರಾಧ ಸುದ್ದಿ
ಸೇನಾಧಿಕಾರಿ ಮಗನಿಂದ ಹೆತ್ತಮ್ಮನ ಕೊಲೆ

ಪೊಲೀಸರ ಮಾಹಿತಿ ಪ್ರಕಾರ: ಇಲ್ಲಿನ ಯಮುನಾಪುರಂ ಕಾಲೋನಿಯಲ್ಲಿ ಸಾಧನಾ ತನ್ನ 16 ವರ್ಷದ ಮಗ ಮತ್ತು 10 ವರ್ಷದ ಮಗಳೊಂದಿಗೆ ವಾಸವಿದ್ದರು. ಸಾಧನಾ ಅವರ ಪತಿ ನವೀನ್ ಸಿಂಗ್ ಅವರು ಕೋಲ್ಕತ್ತಾದ ಅಸನ್ಸೋಲ್‌ನಲ್ಲಿ ಸೇನೆಯಲ್ಲಿ JCO (ಜೂನಿಯರ್ ಕಮಿಷನ್ಡ್ ಆಫೀಸರ್‌) ಆಗಿ ನೇಮಕಗೊಂಡಿದ್ದಾರೆ. ಸಾಧನಾ ಅವರ ಮಗ PUBG ಆಟ ಆಡುವ ಚಟಕ್ಕೆ ಬಿದ್ದಿದ್ದ ಎಂದು ಎಡಿಸಿಪಿ ಪೂರ್ವ ಖಾಸಿಮ್ ಅಬ್ದಿ ಹೇಳಿದ್ದಾರೆ.

ಪಬ್​ಜೀಗೆ ವಿರೋಧ: ತಾಯಿ ಸಾಧನಾಳಿಗೆ ಮಗ ಈ ಚಟ ಇಷ್ಟವಿರಲಿಲ್ಲ. ಇದರಿಂದಾಗಿ ಬಾಲಕ ತನ್ನ ತಾಯಿಯೊಂದಿಗೆ ಆಗಾಗ ಜಗಳವಾಡುತ್ತಿದ್ದ. ಶನಿವಾರ ಸಾಧನಾ ಮನೆಯಲ್ಲಿ ಮಲಗಿದ್ದಾಗ ಪರವಾನಗಿ ಪಡೆದ ಪಿಸ್ತೂಲ್‌ನಿಂದ ತಾಯಿಯ ತಲೆಗೆ ಗುಂಡು ಹಾರಿಸಿ ಕೊಂದಿದ್ದಾನೆ. ಮೂರು ದಿನಗಳ ಕಾಲ ತಾಯಿ ಶವವನ್ನು ಬೆಡ್​ರೂಂನಲ್ಲೇ ಇಟ್ಟಿದ್ದ. ಬಳಿಕ ವಾಸನೆ ಹೋಗಲಾಡಿಸಲು ರೂಮ್ ಫ್ರೆಶ್ನರ್ ಅನ್ನು ಪದೇ ಪದೆ ಸ್ಪ್ರೇ ಕೂಡ ಮಾಡುತ್ತಿದ್ದ.

ಕಟ್ಟು ಕಥೆ: ಇನ್ನು ಅಕ್ಕಪಕ್ಕದವರು ಸಾಧನಾ ಬಗ್ಗೆ ಮಗನ ಬಳಿ ವಿಚಾರಿಸಿದ್ದಾರೆ. ಆಗ ಅಜ್ಜಿ ಅನಾರೋಗ್ಯದಿಂದ ಬಳಲುತ್ತಿದ್ದು, ತಾಯಿ ಚಿಕ್ಕಪ್ಪನ ಮನೆಗೆ ಹೋಗಿರುವುದಾಗಿ ಹೇಳಿದ್ದಾನೆ. ಮೃತದೇಹದಿಂದ ದುರ್ವಾಸನೆ ಹೆಚ್ಚಾಗುತ್ತಿದ್ದಂತೆ ಗಾಬರಿಗೊಂಡ ಸಾಧನಾ ಮಗ ಮಂಗಳವಾರ ರಾತ್ರಿ 8 ಗಂಟೆಗೆ ಅಸನ್ಸೋಲ್‌ನಲ್ಲಿರುವ ತನ್ನ ತಂದೆಗೆ ಕರೆ ಮಾಡಿದ್ದಾನೆ. ಬಳಿಕ ತನ್ನ ತಾಯಿಯನ್ನು ಯಾರೋ ಕೊಂದಿದ್ದಾರೆ ಎಂದು ತಿಳಿಸಿದ್ದಾನೆ.

ಪೊಲೀಸ್​ ದೌಡು: ಸುದ್ದಿ ತಿಳಿದ ಕೂಡಲೇ ಬಾಲಕನ ತಂದೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹತ್ಯೆಯಾದ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕಾಗಮಿಸಿದಾಗ ಕಳೆದ ಮೂರು ದಿನಗಳಿಂದ ಬಾಲಕ ಮನೆಗೆ ಯಾರ್ಯಾರು ಬಂದಿದ್ದರು ಎಂಬುದರ ಬಗ್ಗೆ ಮಾಹಿತಿ ಪಡೆದು ತನಿಖೆ ಕೈಗೊಂಡಿದ್ದಾರೆ.

ಓದಿ: ಆನ್​ಲೈನ್ ಫೈರ್​​ ಗೇಮ್, ಪಬ್​ಜೀ ಲವರ್ಸ್​ ಹುಷಾರ್​.. ಪ್ರಜ್ಞಾಹೀನ ಸ್ಥಿತಿಯಲ್ಲೂ ಗನ್ ಶೂಟ್​ ಮಾಡುತ್ತಿರುವ ಶಾಲಾ ಬಾಲಕ!

ದೇಹದಲ್ಲಿ ಕೀಟಗಳು ಪತ್ತೆ: ಫೋರೆನ್ಸಿಕ್ ತಂಡವು ಸ್ಥಳಕ್ಕೆ ತಲುಪಿದಾಗ ಸಾಧನಾ ಅವರ ದೇಹವು ಹಾಸಿಗೆಯ ಮೇಲೆ ಬಿದ್ದಿತ್ತು. ದೇಹ ತೀರಾ ಕೊಳೆತು ಹೋಗಿತ್ತು. ಅಷ್ಟೇ ಅಲ್ಲ ಮೃತದೇಹದ ಸುತ್ತ ರಕ್ತ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು ಎಂದು ಪೊಲೀಸರಿಗೆ ಮಾಹಿತಿ ನೀಡಿದರು.

ತಂಗಿಗೆ ಜೀವ ಬೆದರಿಕೆ: ಬಾಲಕ ತನ್ನ ತಾಯಿಯನ್ನು ಕೊಲೆ ಮಾಡಿದಾಗ ಸಾಧನಾಳ 10 ವರ್ಷದ ಸಹೋದರಿ ಕೂಡ ಮನೆಯಲ್ಲಿ ಮಲಗಿದ್ದಳು. ಗುಂಡಿನ ಸದ್ದು ಕೇಳಿದ ತಂಗಿಗೆ ಎಚ್ಚರವಾಗಿದೆ. ಕೂಡಲೇ ಆಕೆಯನ್ನು ಸ್ಟಡಿ ರೂಮಿಗೆ ಕರೆದುಕೊಂಡು ಹೋಗಿ ಮತ್ತೆ ಮಲಗಿಸಿದ್ದಾನೆ. ಬೆಳಗ್ಗೆ ಎದ್ದ ತಂಗಿಯನ್ನು ಯಾರಿಗಾದರೂ ಈ ವಿಷಯ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಇದರಿಂದಾಗಿ 10 ವರ್ಷದ ಅಮಾಯಕ 3 ದಿನಗಳ ಕಾಲ ಸ್ಟಡಿ ರೂಂನಿಂದ ಹೊರಗೆ ಬಂದಿಲ್ಲ ಎಂದು ಪೊಲೀಸ್​ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಮನಗ ಮೇಲೆ ತಾಯಿಗೆ ಕೋಪ: ಮೂಲಗಳ ಪ್ರಕಾರ, ಕಳೆದ ವರ್ಷ ಅಕ್ಟೋಬರ್‌ನಲ್ಲಿ ಮಗನ ಹುಟ್ಟುಹಬ್ಬದಂದು ಪತಿ-ಪತ್ನಿಯ ನಡುವೆ ಜಗಳವಾಗಿತ್ತು. ಮಗನಿಂದಲೇ ಈ ಜಗಳ ನಡೆದಿದೆ ಎನ್ನಲಾಗಿದ್ದು, ಅಂದಿನಿಂದ ಸಾಧನಾ ಮಗನ ಮೇಲೆ ಕೋಪಗೊಂಡಿದ್ದಳು. ಅಷ್ಟೇ ಅಲ್ಲ, ಕೊಲೆಯಾಗುವ ಮೂರು ದಿನಗಳ ಮೊದಲು ಸಾಧನಾ ಮನೆಯಲ್ಲಿದ್ದ 10,000 ರೂ. ಕಾಣದಿದ್ದಾಗ ತನ್ನ ಮಗನಿಗೆ ಥಳಿಸಿದ್ದಳು. ಸ್ವಲ್ಪ ಸಮಯದ ನಂತರ ಸಾಧನಾ ಬಳಿ ಆ ಹಣ ಪತ್ತೆಯಾಗಿತ್ತು. ಇದರಿಂದ ಆತ ತನ್ನ ತಾಯಿಯ ಮೇಲೆ ಕೋಪಗೊಂಡಿದ್ದ. ಅಕ್ಟೋಬರ್‌ನಿಂದ ಸಾಧನಾ ತನ್ನ ಮಗನಿಗೆ ಎಲ್ಲದಕ್ಕೂ ಅಡ್ಡಿಪಡಿಸುತ್ತಿದ್ದಳು ಎನ್ನಲಾಗಿದೆ.

ನೆರೆಹೊರೆಯವರ ಮಾತು: ಸಾಧನಾ ಮತ್ತು ಅವರ ಮಗ ತುಂಬಾ ನೇರ ಮತ್ತು ಸ್ನೇಹಪರರಾಗಿದ್ದರು. ಭಾನುವಾರ ಮತ್ತು ಸೋಮವಾರ ಬಾಲಕ ಕ್ರಿಕೆಟ್ ಆಡಲು ಮನೆಯಿಂದ ಹೊರಗಿದ್ದ. ಹೀಗಾಗಿ ಅವರ ಮನೆಯಲ್ಲಿ ಸಾಧನಾ ಅವರ ಮೃತದೇಹ ಇರಬಹುದೆಂಬ ಶಂಕೆ ಬರಲಿಲ್ಲ ಎಂದು ನೆರೆಹೊರೆಯವರು ತಿಳಿಸಿದ್ದಾರೆ

ಈ ಘಟನೆ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದರು, ಅಣ್ಣ ಮತ್ತು ತಂಗಿಯನ್ನು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.