ETV Bharat / bharat

ತೀರಿಹೋದ ತಾಯಿಯ ಶವದ ಸಮ್ಮುಖದಲ್ಲಿ ಮಗನ ಮದುವೆ: ಕರುಳರಿಯುವ ಹೊತ್ತಲ್ಲಿ ಕಣ್ಣೀರು ಬಿಟ್ಟು ಬೇರೇನಿಲ್ಲ..

ಕೋವಿಡ್​ ಸಾಂಕ್ರಾಮಿಕ ರೋಗ ತಗುಲಿ ಅಮ್ಮ ಮೃತಪಟ್ಟಿದ್ದು, ನೊಂದ ಮಗ ಮೃತದೇಹದ ಎದುರೇ ಮದುವೆಯಾಗಿರುವ ಮನಕಲಕುವ ಘಟನೆ ತೆಲಂಗಾಣದಲ್ಲಿ ನಡೆಯಿತು.

son marriage in front of mother dead body
ಮೃತದೇಹದ ಎದುರೇ ಮಗನ ಮದುವೆ
author img

By

Published : May 28, 2021, 7:58 AM IST

ಸಂಗರೆಡ್ಡಿ (ತೆಲಂಗಾಣ): ತಾಯಿಯ ಆಶೀರ್ವಾದ ಪಡೆದು ಮದುವೆಯಾಗಬೇಕೆಂದು ಅಮೆರಿಕದಿಂದ ಬಂದಿದ್ದ ಮಗ ಇದೀಗ ಹೆತ್ತಮ್ಮನ ಮೃತದೇಹದ ಮುಂದೆಯೇ ಸಪ್ತಪದಿ ತುಳಿದಿದ್ದಾನೆ.

ತೆಲಂಗಾಣದ ಸಂಗರೆಡ್ಡಿ ಜಿಲ್ಲೆಯ ಇಸ್ಮಾಯಿಲ್ ಖಾನ್‌ಪೇಟ್‌ನಲ್ಲಿ ಇಂತಹದ್ದೊಂದು ಬೇಸರದ ಘಟನೆ ನಡೆದಿದೆ. ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದ ರಾಕೇಶ್ ಎಂಬಾತನಿಗೆ ಮೇ 21ರಂದು ಮದುವೆ ನಿಶ್ಚಯವಾಗಿದೆ. ಮದುವೆಗೆಂದು ಆತ​​ ಯುಎಸ್​ನಿಂದ ತನ್ನೂರಿಗೆ ಮರಳಿದ್ದ. ಆದರೆ ಇವರ ತಾಯಿ ​ಪಾಲ್ಪಾನೂರಿ ರೇಣುಕಾ (49) ಅವರಿಗೆ ಕೊರೊನಾ ಸೋಂಕು ತಗುಲಿದ್ದು, ಹೈದರಾಬಾದ್​ನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಕೆಲವು ದಿನಗಳ ಹಿಂದಷ್ಟೇ ರೇಣುಕಾ ಅವರ ಸಹೋದರನೂ ಕೂಡ ಕೋವಿಡ್​ಗೆ ಬಲಿಯಾಗಿದ್ದರು.

ಈ ಸುದ್ದಿಯನ್ನೂ ಓದಿ: ಗರ್ಭಿಣಿಯನ್ನು ಒತ್ತೆಯಾಳಾಗಿಸಿ ಮಕ್ಕಳ ಮುಂದೆಯೇ ಅತ್ಯಾಚಾರ ಎಸಗಿದ ದುರುಳರು

ಹೀಗಾಗಿ ರಾಕೇಶ್​​ ತನ್ನ ವಿವಾಹವನ್ನು ಮುಂದೂಡಿ, ಅಮ್ಮ ಗುಣಮುಖರಾಗಿ ಕ್ಷೇಮವಾಗಿ ಮನೆಗೆ ಬರಲೆಂದು ಕಾಯುತ್ತಿದ್ದ. ಆದರೆ ರೇಣುಕಾ ಅವರೂ ಕೂಡಾ ಕೋವಿಡ್‌ನಿಂದ ಸಾವನ್ನಪ್ಪಿದರು. ಬಳಿಕ ಆ್ಯಂಬುಲೆನ್ಸ್​ನಲ್ಲಿ ಆಸ್ಪತ್ರೆಯಿಂದ ಗ್ರಾಮಕ್ಕೆ ಮೃತದೇಹವನ್ನು ಕರೆತರಲಾಯಿತು. ಈ ವೇಳೆ, ಅಮ್ಮನ ಮೃತದೇಹದ ಮುಂದೆಯೇ ಭಾರವಾದ ಮನಸ್ಸು, ದು:ಖದ ಮಡುವಿನಲ್ಲೇ ವರ ರಾಕೇಶ್​​ ಹಾಗೂ ವಧು ಪರಸ್ಪರ ಹಾರ ಬದಲಾಯಿಸಿಕೊಂಡರು. ಈ ಮೂಲಕ ತೀರಿಹೋದ ಅಮ್ಮನ ಶವದ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇಂಥ ಮನಕಲಕುವ ಘಟನೆಗೆ ಸಾಕ್ಷಿಯಾಗಿ ಅಲ್ಲಿ ನೆರೆದಿದ್ದವರ ಕಣ್ಣಾಲಿಗಳು ತೇವಗೊಂಡವು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.