ಗ್ವಾಲಿಯರ್ (ಮಧ್ಯ ಪ್ರದೇಶ): ಕೊರೊನಾ ಸೋಂಕಿತ ಮಹಿಳೆಯ (65) ಜನ್ಮದಿನ ಆಚರಿಸಲು ಆಕೆಯ ಕುಟುಂಬ ಆಸ್ಪತ್ರೆಗೆ ಹೋಗಿ, ಸೋಂಕಿತ ಮಹಿಳೆಯಿಂದ ಕೇಕ್ ಕತ್ತರಿಸಿ, ಹುಟ್ಟುಹಬ್ಬ ಆಚರಿಸಿದ ಘಟನೆ ನಡೆದಿದೆ.
ಕೊರೊನಾದಿಂದಾಗಿ ಆಕೆಯ ಕುಟುಂಬದ ಇಬ್ಬರು ಸಾವನ್ನಪ್ಪಿದ್ದರು. ಇದರಿಂದಾಗಿ ಆಕೆ ಧೈರ್ಯ ಕಳೆದುಕೊಂಡಿದ್ದಳು. ಅಂತಹ ಪರಿಸ್ಥಿತಿಯಲ್ಲಿ ಪ್ರೀತಿಪಾತ್ರರ ಪ್ರೀತಿ ಮತ್ತು ವಾತ್ಸಲ್ಯವು ಇದೀಗ ಆಕೆಯಲ್ಲಿ ಧೈರ್ಯ ತಂದಿದೆ.
ಮಹಿಳೆ ಶೀಘ್ರದಲ್ಲೇ ಚೇತರಿಸಿಕೊಳ್ಳುತ್ತಾರೆ ಎಂದು ವೈದ್ಯರು ಭರವಸೆ ವ್ಯಕ್ತಪಡಿಸಿದ್ದಾರೆ.