ETV Bharat / bharat

ತಾಯಿಯ ಶವ ಡ್ರಮ್​​​ನಲ್ಲಿ ಹೂತಿಟ್ಟ ಮಗ: ಪುತ್ರನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ ಪೊಲೀಸರು! - 86 year old Shenbagam hails from the Nilangarai area of Chennai

ಚೆನ್ನೈನಲ್ಲಿ ತಾಯಿಯ ಶವವನ್ನು ಡ್ರಮ್​ನಲ್ಲಿ ಹೂತಿಟ್ಟಿದ್ದರಿಂದ ಹೊರ ತೆಗೆಯಲು ಸಾಧ್ಯವಾಗದೇ ಇರುವುದರಿಂದ ಶವದೊಂದಿಗೆ ಡ್ರಮ್​​ ಅನ್ನೇ ಶವಪರೀಕ್ಷೆಗಾಗಿ ರಾಯಪೇಟೆ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.

Son buried his mother's corpse in a drum

author img

By

Published : May 16, 2022, 9:49 PM IST

ಚೆನ್ನೈ( ತಮಿಳುನಾಡು): ಮಗನೊಬ್ಬ ತನ್ನ ತಾಯಿಯನ್ನು ಡ್ರಂನಲ್ಲಿ ಹೂತಿಟ್ಟ ಪ್ರಕರಣ ಚೆನ್ನೈನಲ್ಲಿ ನಡೆದಿದೆ. ತಾಯಿಯ ಶವವನ್ನು ಡ್ರಮ್​ನಲ್ಲಿ ಹೂತಿಟ್ಟಿದ್ದರಿಂದ ಹೊರ ತೆಗೆಯಲು ಸಾಧ್ಯವಾಗದೇ ಇರುವುದರಿಂದ ಶವದೊಂದಿಗೆ ಡ್ರಮ್​​ ಅನ್ನೇ ಶವಪರೀಕ್ಷೆಗಾಗಿ ರಾಯಪೇಟೆ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ನೀಲಂಗರೈ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮಗ ಸುರೇಶನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಏನಿದು ಪ್ರಕರಣ: 86 ವರ್ಷದ ಶೇನ್​ಬೇಗಂ ಅವರು ಚೆನ್ನೈನ ನೀಲಂಗರೈ ಪ್ರದೇಶದವರು. ಅವರಿಗೆ ಸುರೇಶ್ ಮತ್ತು ಬಾಬು ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಸುರೇಶ ಎಂಬುವವನೊಂದಿಗೆ ಶೇನ್​​ಬೇಗಂ ಮನೆಯಲ್ಲಿ ವಾಸವಾಗಿದ್ದರು. ಸುರೇಶ್ ಸ್ವಲ್ಪ ಮಾನಸಿಕ ಅಸ್ವಸ್ಥ ಎನ್ನಲಾಗಿದೆ. ಇದರಿಂದ ಸುರೇಶನ ಪತ್ನಿ ಮತ್ತು ಮಕ್ಕಳು ಪ್ರತ್ಯೇಕವಾಗಿ ವಾಸವಾಗಿದ್ದಾರೆ.

ಈ ಮಧ್ಯೆ ಕಳೆದ ಕೆಲ ದಿನಗಳಿಂದ ತಾಯಿ ಕಾಣುತ್ತಿಲ್ಲ ಎಂದು ಗೊತ್ತಾಗಿದೆ. ಈ ಬಗ್ಗೆ ಅಕ್ಕಪಕ್ಕದ ಮನೆಯವರು ಹಾಗೂ ಸಹೋದರ ಬಾಬು, ಸುರೇಶನನ್ನು ತಾಯಿ ಎಲ್ಲಿ ಎಂದು ಪ್ರಶ್ನಿಸಿದ್ದಾರೆ. ಆದರೆ, ಈ ಬಗ್ಗೆ ಸುರೇಶ ಯಾವುದೇ ಉತ್ತರ ನೀಡಿರಲಿಲ್ಲ. ಹೀಗಾಗಿ ಶೇನ್​​ಬೇಗಂ ಇನ್ನೊಬ್ಬ ಮಗ ಬಾಬು, ತಾಯಿಯ ಮನೆಗೆ ಬಂದಾಗ ಸುರೇಶ್​ ಮತ್ತು ಬಾಬು ನಡುವೆ ವಾಗ್ವಾದ ನಡೆದಿದೆ.

ಈ ಘಟೆನೆಯಿಂದ ಅನುಮಾನ ಬಂದು, ಬಾಬು ಪೊಲೀಸರಿಗೆ ತಾಯಿ ಕಾಣುತ್ತಿಲ್ಲ ಎಂದು ದೂರು ನೀಡಿದ್ದಾರೆ. ಬಾಬು ಮಾಹಿತಿ ಖಚಿತ ಪಡಿಸಿಕೊಂಡ ಪೊಲೀಸರು ಸ್ಥಳಕ್ಕೆ ಧಾವಿಸಿ ಸುರೇಶ್​​ನನ್ನು ವಿಚಾರಣೆಗೆ ಒಳಪಡಿಸಿದಾಗ ಸತ್ಯ ಹೊರ ಬಂದಿದೆ.

ಹಾಗಾದರೆ ನಡೆದಿದ್ದೇನು?: ಕೆಲ ದಿನಗಳ ಹಿಂದೆ ತಾಯಿ ಅನಾರೋಗ್ಯದಿಂದ ಮೃತಪಟ್ಟಿದ್ದು, ಮನೆಯಲ್ಲಿ ಡ್ರಮ್ ನಲ್ಲಿಟ್ಟು ಸಿಮೆಂಟ್ ಹಾಕಿ ಹೂತಿಟ್ಟಿರುವುದಾಗಿ ವಿಚಾರಣೆ ವೇಳೆ ಸುರೇಶ್ ತಿಳಿಸಿದ್ದಾನೆ. ಸುರೇಶ್​ ಹೇಳಿಕೆ ಪಡೆದಿರುವ ಪೊಲೀಸರು ಶೇನ್​ಬೇಗಂ ಅನಾರೋಗ್ಯದಿಂದ ಮೃತಪಟ್ಟರೆ, ಮಗನೇ ಏನಾದರೂ ಮಾಡಿ ಡ್ರಮ್​​ನಲ್ಲಿ ಹೂತಿಟ್ಟನಾ ಎಂಬ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನು ಓದಿ:ಸಾಕಿದ್ದ ಕೋಳಿಗಳಿಗೆ ಕಾಳು, ನೀರು ಹಾಕಲಿಲ್ವಂತೆ.. ಹೆತ್ತ ಮಗಳನ್ನೇ ಹೊಡೆದು ಕೊಂದ ತಂದೆ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.