ETV Bharat / bharat

ಏಮ್ಸ್ ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣ: ಸೋಮನಾಥ ಭಾರತಿಗೆ 2 ವರ್ಷ ಜೈಲು ಶಿಕ್ಷೆ

ಸೆಪ್ಟೆಂಬರ್ 9, 2016ರಂದು ಭಾರತಿ ಸುಮಾರು 300 ಜನರ ಜೊತೆ ಆಗಮಿಸಿ ಜೆಸಿಬಿ ಮೂಲಕ ದೆಹಲಿಯ ಏಮ್ಸ್​ನಲ್ಲಿ ಗಡಿ ಗೋಡೆಯ ಬೇಲಿಯನ್ನು ನೆಲಸಮ ಮಾಡಿದ್ದಾರೆ ಎಂದು ವಿಚಾರಣೆಯಲ್ಲಿ ಸಾಬೀತಾಗಿದೆ.

Somnath Bharti gets 2 years imprisonment for assaulting AIIMS staff
ಏಮ್ಸ್ ಸಿಬ್ಬಂದಿಯ ಮೇಲೆ ಹಲ್ಲೆ ಪ್ರಕರಣ
author img

By

Published : Mar 23, 2021, 8:39 PM IST

ನವದೆಹಲಿ: 2016ರಲ್ಲಿ ಏಮ್ಸ್ ಭದ್ರತಾ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಪ್​ ಶಾಸಕ ಸೋಮನಾಥ್ ಭಾರತಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶಿಸಲಾಗಿದೆ.

ಸೆಪ್ಟೆಂಬರ್ 9, 2016ರಂದು ಭಾರತಿ ಸುಮಾರು 300 ಜನರ ಜೊತೆ ಆಗಮಿಸಿ ಜೆಸಿಬಿ ಮೂಲಕ ದೆಹಲಿಯ ಏಮ್ಸ್​​ನಲ್ಲಿನ ಗಡಿ ಗೋಡೆಯ ಬೇಲಿಯನ್ನು ನೆಲಸಮ ಮಾಡಿದ್ದಾರೆ ಎಂದು ವಿಚಾರಣೆಯಲ್ಲಿ ಸಾಬೀತಾಗಿದೆ. ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ತಡೆಗಟ್ಟುವ ಕಾಯ್ದೆ 1984ರ ಸೆಕ್ಷನ್ 3 (ಸಾರ್ವಜನಿಕ ಆಸ್ತಿಗೆ ಹಾನಿ ಉಂಟುಮಾಡುವ ಕಿಡಿಗೇಡಿತನ) ಜೊತೆಗೆ ಐಪಿಸಿ ಸೆಕ್ಷನ್ 149 ಮತ್ತು 147ರ ಅಡಿಯಲ್ಲಿ ಶಿಕ್ಷೆ ವಿಧಿಸಲಾಗಿದೆ.

ಇದಕ್ಕೂ ಮೊದಲು 2021ರ ಜನವರಿಯಲ್ಲಿ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ರವೀಂದ್ರ ಕುಮಾರ್ ಪಾಂಡೆ ಅವರು ಎಎಪಿ ಮುಖಂಡರಿಗೆ 1 ಲಕ್ಷ ರೂ. ದಂಡ ವಿಧಿಸಿದ್ದರು. ಏಮ್ಸ್​ನ ಬೇಲಿ ಹಾಗೂ ಗಡಿ ಗೋಡೆಯನ್ನು ಉರುಳಿಸುವಾಗ ಅದನ್ನು ರಕ್ಷಿಸಲು ಬಂದವರ ಮೇಲೆ ಹಾಗೂ ಅಂದು ನಡೆದ ಕೋಲಾಹಲ ಸಾಕ್ಷಿ ಸಮೇತ ರುಜುವಾತಾಗಿದ್ದು, ಇದನ್ನು ನ್ಯಾಯಾಲಯ ಗಮನಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.