ETV Bharat / bharat

ಫೀಲ್ಡ್​ ಫೈರಿಂಗ್​ ಅಭ್ಯಾಸದ ವೇಳೆ ಅವಘಡ.. ಇಬ್ಬರು ಯೋಧರ ಸಾವು..ಓರ್ವರಿಗೆ ಗಾಯ

author img

By

Published : Oct 7, 2022, 5:39 PM IST

ಝಾನ್ಸಿ ಬಳಿಯ ಬಬಿನಾ ಕಂಟೋನ್ಮೆಂಟ್‌ನಲ್ಲಿ ಇಂದು ಫೀಲ್ಡ್ ಫೈರಿಂಗ್ ಅಭ್ಯಾಸದ ವೇಳೆ ಟಿ-20 ಟ್ಯಾಂಕ್‌ನ ಬ್ಯಾರೆಲ್ ಒಡೆದು ಜೆಸಿಒ ಸೇರಿದಂತೆ ಇಬ್ಬರು ಭಾರತೀಯ ಸೇನಾ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಟಿ-90 ಟ್ಯಾಂಕರ್
ಟಿ-90 ಟ್ಯಾಂಕರ್

ಝಾನ್ಸಿ: ಉತ್ತರ ಪ್ರದೇಶದ ಝಾನ್ಸಿ ಬಳಿಯ ಬಬಿನಾ ಕಂಟೋನ್ಮೆಂಟ್‌ನಲ್ಲಿ ಶುಕ್ರವಾರ ಫೀಲ್ಡ್ ಫೈರಿಂಗ್ ಅಭ್ಯಾಸದ ವೇಳೆ ಟಿ - 90 ಟ್ಯಾಂಕ್‌ನ ಬ್ಯಾರೆಲ್ ಒಡೆದ ಪರಿಣಾಮ ಇಬ್ಬರು ಭಾರತೀಯ ಸೇನೆಯ ಸಿಬ್ಬಂದಿ ಸಾವನ್ನಪ್ಪಿದ್ದು, ಮತ್ತೊಬ್ಬ ಯೋಧ ಗಂಭೀರವಾಗಿ ಗಾಯಗೊಂಡಿದ್ದಾರೆ.

'ಝಾನ್ಸಿ ಬಳಿಯ ಬಬಿನಾ ಕಂಟೋನ್ಮೆಂಟ್‌ನಲ್ಲಿ ಇಂದು ಫೀಲ್ಡ್ ಫೈರಿಂಗ್ ಅಭ್ಯಾಸದ ವೇಳೆ ಟಿ-20 ಟ್ಯಾಂಕ್‌ನ ಬ್ಯಾರೆಲ್ ಒಡೆದು ಜೆಸಿಒ ಸೇರಿದಂತೆ ಇಬ್ಬರು ಭಾರತೀಯ ಸೇನಾ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ. ಘಟನೆಯ ಬಗ್ಗೆ ತನಿಖೆ ನಡೆಸಲು ನ್ಯಾಯಾಲಯಕ್ಕೆ ಆದೇಶಿಸಲಾಗಿದೆ' ಎಂದು ಭಾರತೀಯ ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ.

ಮೃತ ಸೈನಿಕರನ್ನು ರಾಜಸ್ಥಾನದ ಸುಮೇರ್ ಸಿಂಗ್ ಮತ್ತು ಪಶ್ಚಿಮ ಬಂಗಾಳದ ಸುಕಾಂತ ಮಂಡಲ್ ಎಂದು ಗುರುತಿಸಲಾಗಿದೆ. ಗಾಯಗೊಂಡ ಉತ್ತರ ಪ್ರದೇಶದ ಖಲೀಲಾಬಾದ್‌ನ ಪ್ರದೀಪ್ ಸಿಂಗ್ ಯಾದವ್ ಅವರನ್ನು ಚಿಕಿತ್ಸೆಗಾಗಿ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

ಓದಿ: ಉತ್ತರಕಾಶಿ ಹಿಮಪಾತ ದುರಂತ: ಸಾವಿನ ಸಂಖ್ಯೆ 26ಕ್ಕೆ ಏರಿಕೆ.. ಮುಂದುವರೆದ ರಕ್ಷಣಾ ಕಾರ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.