ಕೋಜಿಕೋಡ (ಕೇರಳ) : ಸೋಲಾರ್ ಹಗರಣ ಪ್ರಕರಣದಲ್ಲಿ ಸರಿತಾ ಎಸ್. ನಾಯರ್ ಮತ್ತು ಬಿಜು ರಾಧಾಕೃಷ್ಣನ್ ಅವರ ಜಾಮೀನು ರದ್ದುಪಡಿಸಿದ ನಂತರ ಬಂಧನ ವಾರಂಟ್ ಹೊರಡಿಸಲಾಗಿದೆ.
ಈ ಪ್ರಕರಣದ ತೀರ್ಪಿನ ವಿಚಾರಣೆ ಫೆಬ್ರವರಿ 25 ರಂದು ನಡೆಯಲಿದೆ. ಸೌರ ಫಲಕವನ್ನು ಸ್ಥಾಪಿಸುವ ಸಂಬಂಧ ಸರಿತಾ ಮತ್ತು ಬಿಜು ಅವರು ಕೋಜಿಕೋಡ ಮೂಲದ ಅಬ್ದುಲ್ ಮಜೀದ್ ಅವರಿಂದ 42,70,000 ರೂ. ಹಣ ಪಡೆದಿದ್ದರು ಎಂಬ ಆರೋಪ ಇದೆ.
ಏನಿದು ಪ್ರಕರಣ:
2003ರಲ್ಲಿ ಈ ಹಗರಣ ಜರುಗಿದೆ. ಟೀಮ್ ಸೋಲಾರ್ ಎಂಬ ಹೆಸರಿನ ನಕಲಿ ಕಂಪನಿ ಇಬ್ಬರು ಮಹಿಳೆಯರನ್ನು ಬಳಸಿಕೊಂಡು ಕೇರಳ ರಾಜ್ಯದಲ್ಲಿ ಸೌರ ವಿದ್ಯುತ್ ಘಟಕಗಳ ಸ್ಥಾಪನೆಗೆ ಮುಂದಾಗಿತ್ತು.
ಈ ಮಹಿಳೆಯರು ಅಂದಿನ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರ ಆಪ್ತ ಸಿಬ್ಬಂದಿ ಜತೆ ಸಂಪರ್ಕ ಸಾಧಿಸಿ, 70 ಮಿಲಿಯನ್ ಮೊತ್ತದ ಯೋಜನೆ ಅನುಷ್ಠಾನಗೊಳಿಸಲು ಮುಂದಾಗಿದ್ದರು. ಈ ನಕಲಿ ಕಂಪನಿಯ ನಿರ್ದೇಶಕರಾಗಿದ್ದ ಬಿಜು ರಾಧಾಕೃಷ್ಣನ್ ಹಾಗೂ ಸರಿತಾ ನಾಯರ್ ಸಾವಿರಾರು ಹೂಡಿಕೆದಾರರಿಂದ ಹಣ ಸಂಗ್ರಹಿಸಿ, ಪಾಲುದಾರಿಕೆ ಆಮಿಷ ಒಡ್ಡಿದ್ದರು.