ವಾರಾಣಸಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಮಧ್ಯಸ್ಥಿಕೆಯಿಂದ ವರ್ಷಗಟ್ಟಲೆ ಹಣಕ್ಕಾಗಿ ಅಲೆದಾಡುತ್ತಿದ್ದ ವೃದ್ಧೆಗೆ ಅಂಚೆ ಇಲಾಖೆಯಿಂದ ಕೇವಲ 8 ಗಂಟೆಯಲ್ಲಿ 7 ಲಕ್ಷ ರೂಪಾಯಿ ದೊರೆತಿದೆ. ಇದಿಷ್ಟೇ ಅಲ್ಲ ಮಂಗಳವಾರ ಸಂತ್ರಸ್ತರ ಮನೆಗೆ ತೆರಳಿ ಖುದ್ದು ಇಲಾಖೆಯ ಅಧಿಕಾರಿಯೇ 7 ಲಕ್ಷದ 1 ಸಾವಿರದ 10 ರೂಪಾಯಿ ಚೆಕ್ ವಿತರಿಸಿದ್ದಾರೆ.
ಬನಾರಸ್ ಪ್ರವಾಸದ ಎರಡನೇ ದಿನ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಲು ಭೀಮನಗರಕ್ಕೆ ಬಂದಿದ್ದರು. ಇದು ಸ್ಥಳೀಯ ನಿವಾಸಿ ವೃದ್ಧೆಯಾಗಿರುವ ಚಿಂತಾದೇವಿಗೆ ತಿಳಿದಿದೆ. ಚಿಂತಾದೇವಿ ಅವರು ಸ್ವಚ್ಛತಾ ಅಭಿಯಾನದ ಸ್ಥಳಕ್ಕೆ ತರಾತುರಿಯಲ್ಲಿ ತಲುಪಿದರು.
ಆದರೆ, ಅವರಿಗೆ ಸ್ಮೃತಿ ಇರಾನಿ ಅವರನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಈ ವೇಳೆ, ಸ್ಥಳದಲ್ಲಿದ್ದ ಪ್ರಾದೇಶಿಕ ಅಧ್ಯಕ್ಷ ಮಹೇಶ್ ಚಂದ್ ಶ್ರೀವಾಸ್ತವ, ಮಹಾನಗರ ಪಾಲಿಕೆ ಅಧ್ಯಕ್ಷ ವಿದ್ಯಾಸಾಗರ್ ರೈ, ಶಾಸಕ ಸೌರಭ್ ಶ್ರೀವಾಸ್ತವಗೆ ಭೇಟಿ ಮಾಡಿ ನನಗೆ ತುಂಬಾ ತೊಂದರೆಯಾಗಿದೆ, ಸಚಿವರನ್ನು ಭೇಟಿ ಮಾಡಬೇಕು ಎಂದು ಮನವಿ ಮಾಡಿಕೊಂಡರು. ಬಿಜೆಪಿ ನಾಯಕರು ತಡ ಮಾಡದೆ ಚಿಂತಾದೇವಿ ಯವರನ್ನು ಕರೆದುಕೊಂಡು ಸ್ಮೃತಿ ಇರಾನಿಗೆ ಭೇಟಿ ಮಾಡಿಸಿದರು.
ಈ ವೇಳೆ, ಚಿಂತಾದೇವಿ, ಮಗಳ ಮದುವೆಗೆ ಎಂದು ನಮ್ಮ ಪತಿ ಅಂಚೆ ಕಚೇರಿಯಲ್ಲಿ ಹಣ ಜಮಾ ಮಾಡಿದ್ದರು. ವಿವಿಧ ಸಮಸ್ಯೆಗಳಿಂದ ಅಂಚೆ ಕಚೇರಿಯಲ್ಲಿನ ಹಣ ನಮ್ಮ ಕೈ ಸೇರುತ್ತಿಲ್ಲ. ಜೂನ್ 15ರಂದು ಮಗಳ ಮದುವೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು. ಈ ಕುರಿತು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅಂಚೆ ಕಚೇರಿ ಬಗ್ಗೆ ವಿಚಾರಿಸಿದ್ದಾರೆ.
ಇಂದು ಅಂಚೆ ಕಚೇರಿ ಬಂದ್ ಆಗಿದೆ ಎಂದು ಬಿಜೆಪಿ ಮುಖಂಡರು ತಿಳಿಸಿದ್ದಾರೆ. ಈ ಕುರಿತು ಸ್ಮೃತಿ ಇರಾನಿ ಪ್ರಾದೇಶಿಕ ಕೌನ್ಸಿಲರ್ ದಿನೇಶ್ ಯಾದವ್ಗೆ ಅಂಚೆ ಕಚೇರಿ ತೆರೆದ ತಕ್ಷಣ ಚಿಂತಾದೇವಿ ಕರೆದೊಯ್ದು ಹಣ ತೆಗೆಯಲು ಸಹಾಯ ಮಾಡಿ. ಸಮಸ್ಯೆಯಾದರೆ ನಾನೇ ಅಂಚೆ ಕಚೇರಿಗೆ ಬರುತ್ತೇನೆ ಎಂದು ಹೇಳಿದರು.
ಓದಿ: ಕೊರೊನಾದಿಂದ ಅನಾಥೆಯಾದ ಬಾಲಕಿಗೆ 29 ಲಕ್ಷ ಸಾಲ ಕಟ್ಟುವಂತೆ ಬ್ಯಾಂಕ್ ನೋಟಿಸ್... ಮುಂದೇನಾಯ್ತು ಅಂದ್ರೆ
ಕೇಂದ್ರ ಸಚಿವರ ಸೂಚನೆ ಮೇರೆಗೆ ಪುರಸಭಾ ಸದಸ್ಯ ದಿನೇಶ್ ಅವರು ಚಿಂತಾದೇವಿ ಅವರೊಂದಿಗೆ ಮುಂಜಾನೆ ಅಂಚೆ ಕಚೇರಿಗೆ ಭೇಟಿ ನೀಡಿದ್ದಾರೆ. ಅಲ್ಲಿ ಚಿಂತಾದೇವಿಯ ಕಡತಗಳು ಪತ್ತೆಯಾಗಿಲ್ಲ. ಈ ಕುರಿತು ಬಿಜೆಪಿ ಮಹಾನಗರ ಪಾಲಿಕೆ ಪ್ರಧಾನ ಕಾರ್ಯದರ್ಶಿ ನವೀನ್ ಕಪೂರ್ ಅವರನ್ನು ಅಂಚೆ ಅಧೀಕ್ಷಕ ಸಿಪಿ ತಿವಾರಿ ಅವರೊಂದಿಗೆ ಮಾತನಾಡುವಂತೆ ಕೌನ್ಸಿಲರ್ ಕೋರಿದರು.
ಪ್ರಧಾನ ಕಾರ್ಯದರ್ಶಿ ಕರೆ ಮಾಡಿದರೂ ಅಂಚೆ ಅಧೀಕ್ಷಕರು ಹಣ ಹಿಂಪಡೆಯಲು 15 ದಿನ ಬೇಕು ಎಂದು ತಡಬಡಾಯಿಸುತ್ತಾ ಹೇಳಿದ್ದಾರೆ. ಈ ಕುರಿತು ಸ್ವತಃ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅಂಚೆ ಅಧೀಕ್ಷಕರೊಂದಿಗೆ ಮಾತನಾಡಿದ್ದರು. ಈ ವೇಳೆ, ಅಂಚೆ ಅಧೀಕ್ಷ ಕರು ಸಚಿವರೊಂದಿಗೆ ಗಲಾಟೆ ಮಾಡಿಕೊಂಡಿದ್ದಾರೆ. ಕೂಡಲೇ ಸ್ಮೃತಿ ಇರಾನಿ ಕೇಂದ್ರ ರಾಜ್ಯ ಸಚಿವ (ಪೋಸ್ಟ್) ದೇವಿ ಸಿಂಗ್ ಚೌಹಾಣ್ರಿಗೆ ಕರೆ ಮಾಡಿ ಇಡೀ ಘಟನೆಯ ಬಗ್ಗೆ ತಿಳಿಸಿದರು.
ವಿಷಯ ತಿಳಿದು ಕೇಂದ್ರ ರಾಜ್ಯ ಸಚಿವರು ಅಂಚೆ ಇಲಾಖೆಯ ಉನ್ನತ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಂತಿಮವಾಗಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಶ್ರಮಕ್ಕೆ ತಕ್ಕ ಫಲ ಸಿಕ್ಕಿದ್ದು, ಅಂಚೆ ಇಲಾಖೆ ಚಿಂತಾದೇವಿ ಅವರಿಗೆ ಚೆಕ್ ನೀಡಿದೆ. ವಕ್ತಾರ ನವರತನ್ ರಾಠಿ ಮಾತನಾಡಿ, ಅಂಚೆ ಇಲಾಖೆಯು ಚಿಂತಾದೇವಿ ಮತ್ತು ಅವರ ಇಬ್ಬರು ಪುತ್ರಿಯರಾದ ನೀತು ಭಾರತಿ ಮತ್ತು ಕಲ್ಪನಾ ಭಾರತಿ ಅವರ ಹೆಸರಿನಲ್ಲಿ ಕ್ರಮವಾಗಿ 27,235 ರೂ. 1,58,960 ರೂ. ಮತ್ತು 5,14,815 ರೂ.ಗಳ ಚೆಕ್‌ಗಳನ್ನು ನೀಡಲಾಗಿದೆ ಎಂದು ಹೇಳಿದರು.
ಚೆಕ್ ಕೈಗೆ ಸಿಕ್ಕ ಕೂಡಲೇ ಚಿಂತಾದೇವಿ ಚಿಂತೆ ದೂರವಾಗಿ ಕೇಂದ್ರ ಸಚಿವರಿಗೆ ಆಶೀರ್ವಾದ ಮಾಡಿದರು. ಈಗ ನನ್ನ ಮಗಳ ಮದುವೆ ಸುಲಭವಾಗಿ ನಡೆಯಲಿದ್ದು, ಅವರ ತಂದೆಯ ಆತ್ಮಕ್ಕೆ ಶಾಂತಿ ಸಿಗಲಿ ಎಂದರು.