ಪೋರಬಂದರ್(ಗುಜರಾತ್) : ಕರಾಚಿ ಜೈಲಿನಲ್ಲಿದ್ದ 20 ಭಾರತೀಯ ಮೀನುಗಾರರನ್ನು ಪಾಕಿಸ್ತಾನ ನಿನ್ನೆ ಬಿಡುಗಡೆ ಮಾಡಿದೆ. ಅವರೆಲ್ಲರೂ ಇಂದು ವಾಘಾ ಗಡಿ ತಲುಪಲಿದ್ದಾರೆ. ಹೀಗಾಗಿ, ಮೀನುಗಾರರ ಕುಟುಂಬ ಹಾಗೂ ಮೀನುಗಾರರ ಸಮುದಾಯದಲ್ಲಿ ಸಂತಸದ ಅಲೆ ಮೂಡಿದೆ.
ಪಾಕಿಸ್ತಾನದ ಜಲಪ್ರದೇಶವನ್ನು ಅಕ್ರಮವಾಗಿ ಪ್ರವೇಶಿಸಿದ ಆರೋಪ ಈ ಮೀನುಗಾರರ ಮೇಲಿತ್ತು. ಕರಾಚಿಯ ಜೈಲಿನಿಂದ ಬಿಡುಗಡೆಯಾಗಿರುವ ಇವರನ್ನು ಲಾಹೋರ್‌ಗೆ ಕರೆದೊಯ್ಯಲಾಗಿದೆ. ಇಂದು ವಾಘಾ ಗಡಿಯಲ್ಲಿ ಭಾರತೀಯ ಅಧಿಕಾರಿಗಳಿಗೆ ಇವರನ್ನು ಹಸ್ತಾಂತರಿಸಲಾಗುವುದು ಎಂದು ಉನ್ನತ ಮೂಲಗಳು ತಿಳಿಸಿವೆ.
ಇದನ್ನೂ ಓದಿ: Video : ₹500 ರೂಪಾಯಿ ಆಸೆಗೆ ಆಸ್ಪತ್ರೆಯಲ್ಲೇ ಹೊಡೆದಾಡಿಕೊಂಡ ಆಶಾ ಕಾರ್ಯಕರ್ತೆಯರು!
ಬಿಡುಗಡೆಯಾದ 20 ಮಂದಿ ಮೀನುಗಾರರ ಪೈಕಿ 5 ಮಂದಿ ಉತ್ತರ ಪ್ರದೇಶದವರು ಮತ್ತು 15 ಮಂದಿ ಗುಜರಾತ್ನ ಗಿರ್ ಸೋಮನಾಥ್ ಜಿಲ್ಲೆಯವರು ಎಂದು ಪ್ರಾಥಮಿಕ ಮಾಹಿತಿ ಲಭಿಸಿದೆ. ನಿಖರವಾದ ಸ್ಥಳಗಳ ಕೊರತೆಯಿಂದಾಗಿ, ಮೀನುಗಾರರ ದೋಣಿಗಳು ಆಗಾಗ ಆಕಸ್ಮಿಕವಾಗಿ ಉಭಯ ರಾಷ್ಟ್ರಗಳ ಜಲ ಗಡಿಯನ್ನು ದಾಟುತ್ತವೆ. ಇಂತಹ ಸಂದರ್ಭದಲ್ಲಿ ಎರಡೂ ದೇಶಗಳು ಮೀನುಗಾರರನ್ನು ಬಂಧಿಸುತ್ತಾರೆ.
ಇಲ್ಲೊಮ್ಮೆ ನೋಡಿ - ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ