ಬಟಿಂಡಾ(ಪಂಜಾಬ್): ಹಳೇ ಮನೆಯ 5 ಕೊಠಡಿಗಳ ಛಾವಣಿ ಕುಸಿದು ಮಗು ಸೇರಿದಂತೆ 6 ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬಟಿಂಡಾ ಜಿಲ್ಲೆಯ ಬಾಬಾ ದೀಪ್ ಸಿಂಗ್ ನಗರದಲ್ಲಿ ನಡೆದಿದೆ.
ಗಾಯಗೊಂಡವರನ್ನು ಚಿಕಿತ್ಸೆಗಾಗಿ ಬಟಿಂಡಾದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ. ಮನೆ ಛಾವಣಿ ಕುಸಿತ ಆಗಿ ಅವಘಡ ಸಂಭವಿಸಿದೆ ಎಂದು ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳು ತಿಳಿಸಿದ್ದಾರೆ. ಆದರೆ, ಮನೆಯ ಛಾವಣಿ ಕೆಡವುತ್ತಿದ್ದ ವೇಳೆ ಅವಘಡ ಸಂಭವಿಸಿದ್ದು 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಹೆಚ್ಚಿನ ನಿಖರ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
ಇದನ್ನೂ ಓದಿ: ಧಗಧಗನೇ ಬೆಂಕಿಯಿಂದ ಹೊತ್ತಿ ಉರಿದ ಬೃಹತ್ ಹೋಟೆಲ್.. ಅತಿಥಿಗಳ ರಕ್ಷಣೆ, ಗಾಯಾಳು ಆಸ್ಪತ್ರೆಗೆ ದಾಖಲು