ETV Bharat / bharat

ಅಸ್ಸೋಂ-ಮಿಜೋರಾಂ ಗಡಿಯಲ್ಲಿ ಹಿಂಸಾಚಾರ: ಆರು ಪೊಲೀಸರು ಹುತಾತ್ಮ, ಹಲವರಿಗೆ ಗಾಯ

ಅಸ್ಸೋಂ-ಮಿಜೋರಾಂ ಗಡಿ ವಿಚಾರವಾಗಿ ನಡೆದ ಹಿಂಸಾಚಾರದಲ್ಲಿ ಅಸ್ಸೋಂ ಪೊಲೀಸ್ ಇಲಾಖೆಗೆ ಸೇರಿದ್ದ ಆರು ಮಂದಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.

Six jawans
Six jawans
author img

By

Published : Jul 26, 2021, 8:21 PM IST

Updated : Jul 26, 2021, 10:56 PM IST

ಅಸ್ಸೋಂ/ಮಿಜೋರಾಂ: ಅತಿಕ್ರಮಣ ವಿಚಾರವಾಗಿ ಅಸ್ಸೋಂ ಮತ್ತು ಮಿಜೋರಾಂ ಗಡಿಯಲ್ಲಿ ಉಂಟಾಗಿರುವ ಕಲ್ಲು ತೂರಾಟ, ಹಿಂಸಾಚಾರದ ವೇಳೆ ಆರು ಮಂದಿ ಅಸ್ಸೋಂ ಪೊಲೀಸರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಅಸ್ಸೋಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.

  • I am deeply pained to inform that six brave jawans of @assampolice have sacrificed their lives while defending constitutional boundary of our state at the Assam-Mizoram border.

    My heartfelt condolences to the bereaved families.

    — Himanta Biswa Sarma (@himantabiswa) July 26, 2021 " class="align-text-top noRightClick twitterSection" data=" ">

ಕಳೆದ ಕೆಲವು ದಿನಗಳಿಂದ ಈ ಸಂಘರ್ಷ ನಡೆಯುತ್ತಿದ್ದು, ಕೆಲ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿ, ದಾಳಿ ಮಾಡಿದ್ದರು. ಇದೇ ವಿಚಾರವಾಗಿ ಮಿಜೋರಾಂ ಹಾಗೂ ಅಸ್ಸೋಂ ಮುಖ್ಯಮಂತ್ರಿಗಳೊಂದಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತುಕತೆ ನಡೆಸಿ ವಿವಾದ ಬಗೆಹರಿಸುವಂತೆ ಸೂಚಿಸಿದ್ದರು.

  • Honble ⁦@ZoramthangaCM⁩ ji , Kolasib ( Mizoram) SP is asking us to withdraw from our post until then their civilians won't listen nor stop violence. How can we run government in such circumstances? Hope you will intervene at earliest ⁦@AmitShah⁩ ⁦@PMOIndiapic.twitter.com/72CWWiJGf3

ಅಸ್ಸೋಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹಾಗೂ ಮುಖ್ಯಮಂತ್ರಿ ಜೊರಾಮ್ತಂಗ ಕೆಲವೊಂದು ವಿಡಿಯೋ ತುಣುಕುಗಳನ್ನು ಗೃಹ ಸಚಿವರ ಟ್ವಿಟರ್​ ಅಕೌಂಟ್​ಗೆ ಟ್ಯಾಗ್ ಮಾಡಿ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ಇಂದು ಹಿಂಸಾಚಾರ ನಡೆದಿದ್ದು, ಆರು ಮಂದಿ ಪೊಲೀಸರು ಸಾವಿಗೀಡಾಗಿದ್ದಾರೆ.

ಆರು ಪೊಲೀಸರು ಹುತಾತ್ಮ, ಹಲವರಿಗೆ ಗಾಯ

ಏನಿದು ಪ್ರಕರಣ?

ಕಳೆದ ಕೆಲ ದಿನಗಳ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್​ ಶಾ,ಈಶಾನ್ಯ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಿದ್ದರು. ಅದಾದ ಎರಡೇ ದಿನದಲ್ಲಿ ಅಸ್ಸೋಂ ಮತ್ತು ಮಿಜೋರಾಂ ಗಡಿಯಲ್ಲಿ ಗಲಾಟೆ ನಡೆಯುತ್ತಿದೆ. ಇದೇ ವಿಚಾರವಾಗಿ ಅಮಿತ್ ಶಾ ಮಧ್ಯಪ್ರವೇಶ ಮಾಡಿ ಗಡಿ ಸಮಸ್ಯೆ ಬಗೆಹರಿಸುವಂತೆ ಕೇಳಿದ್ದರು. ವಿವಾದಿತ ಸ್ಥಳದಿಂದ ಎರಡು ರಾಜ್ಯಗಳು ಪೊಲೀಸರು ಹಿಂದೆ ಸರಿಯುವಂತೆ ತಿಳಿಸಲಾಗಿತ್ತು. ಇದಾದ ಬಳಿಕ ಮೇಲಿಂದ ಮೇಲೆ ಕಲ್ಲು ತೂರಾಟ, ಹಿಂಸಾಚಾರ ನಡೆಯುತ್ತಿತ್ತು. ಹೀಗಾಗಿ ಯೋಧರ ನಿಯೋಜನೆ ಮಾಡಲಾಗಿತ್ತು.

ಪ್ರಮುಖವಾಗಿ ಮಿಜೋರಾಂನ ಐಜಾಲ್​, ಕೊಲಾಸಿಬ್​ ಮತ್ತು ಮಾಮಿತ್​ ಹಾಗೂ ಅಸ್ಸೋಂನ ಕ್ಯಾಚರ್​, ಹೈಲಕಂಡಿ ಮತ್ತು ಕರಿಮಗಂಜ್​ ಜಿಲ್ಲೆಗಳೊಂದಿಗೆ 164.6 ಕಿ.ಮೀ ಉದ್ದದ ಅಂತರ್‌ರಾಜ್ಯ ಗಡಿ ಹಂಚಿಕೊಂಡಿವೆ. ಇಲ್ಲಿ ಎರಡು ರಾಜ್ಯಗಳ ನಡುವೆ ಭೂಮಿ ಅತಿಕ್ರಮಣದ ಸಂಘರ್ಷ ನಡೆಯುತ್ತಿದೆ.

Last Updated : Jul 26, 2021, 10:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.