ETV Bharat / bharat

ಕರ್ನಾಟಕದ ಹಿರೇಬೆಣಕಲ್ ಸೇರಿ ಆರು ತಾಣಗಳು ಯುನೆಸ್ಕೋ ಪಟ್ಟಿಗೆ ಸೇರ್ಪಡೆ

ಸತ್ಪುರ ಟೈಗರ್ ರಿಸರ್ವ್, ವಾರಣಾಸಿಯ ಐತಿಹಾಸಿಕ ನದಿ ಘಟ್ಟ, ಕರ್ನಾಟಕದ ಹಿರೇಬೆಣಕಲ್​ನ ಬೃಹತ್ ಶಿಲಾ ಬಂಡೆಗಳ ತಾಣ, ಮಹಾರಾಷ್ಟ್ರದ ಮರಾಠ ಮಿಲಿಟರಿ ವಾಸ್ತು ಸ್ಥಳಗಳು, ನರ್ಮದಾ ಕಣಿವೆಯಲ್ಲಿನ ಜಬಲ್‌ಪುರದ ಬೇಧಾಗಾಟ್-ಲಮೇಟಾಘಾಟ್ ಮತ್ತು ಕಾಂಚಿಪುರಂ ದೇವಾಲಯ ಇವು ಯುನೆಸ್ಕೋದ ತಾತ್ಕಾಲಿಕ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆಯಾಗಿವೆ.

Six Indian sites, including hire benkal in karnataka added to unesco list
ಕರ್ನಾಟಕ ಹಿರೇಬೆಣಕಲ್ ಸೇರಿ ಆರು ತಾಣಗಳು ಯುನೆಸ್ಕೊ ಪಟ್ಟಿಗೆ ಸೇರ್ಪಡೆ
author img

By

Published : May 20, 2021, 6:25 PM IST

ಹೈದರಾಬಾದ್: ಕರ್ನಾಟಕದ ಹಿರೇಬೆಣಕಲ್ ಶಿಲಾ ಬಂಡೆಗಳು, ತಮಿಳುನಾಡಿನ ಕಾಂಚೀಪುರಂ ದೇವಾಲಯಗಳು, ವಾರಣಾಸಿಯ ಗಂಗಾ ಘಟ್ಟಗಳು ಮತ್ತು ಮಧ್ಯಪ್ರದೇಶದ ಸತ್ಪುರ ಹುಲಿ ಮೀಸಲು ಪ್ರದೇಶ ಸೇರಿದಂತೆ ಆರು ಭಾರತೀಯ ತಾಣಗಳನ್ನು ಯುನೆಸ್ಕೋದ ವಿಶ್ವ ಪರಂಪರೆಯ ತಾಣಗಳ ತಾತ್ಕಾಲಿಕ ಪಟ್ಟಿಗೆ ಸೇರಿಸಲಾಗಿದೆ ಎಂದು ಸಂಸ್ಕೃತಿ ಸಚಿವಾಲಯ ಇತ್ತೀಚೆಗೆ ಪ್ರಕಟಿಸಿದೆ.

ಭಾರತೀಯ ಸ್ಮಾರಕಗಳ ಸಂರಕ್ಷಣೆಯ ಜವಾಬ್ದಾರಿಯನ್ನು ಹೊತ್ತಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಸಂಸ್ಥೆ ಈ ಕುರಿತ ಪ್ರಸ್ತಾವನೆಗಳನ್ನು ಯುನೆಸ್ಕೋಗೆ ಸಲ್ಲಿಸಿದೆ.

"ಯುನೆಸ್ಕೋದ ತಾತ್ಕಾಲಿಕ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಸಂಸ್ಥೆಯು ಭಾರತ 9 ಸ್ಥಳಗಳ ಪ್ರಸ್ತಾವನೆಯನ್ನು ಸಲ್ಲಿಸಿದ್ದು ಹೆಮ್ಮೆಯ ವಿಷಯ. ಅದರಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣದ ತಾತ್ಕಾಲಿಕ ಪಟ್ಟಿಗೆ ಆರು ತಾಣಗಳನ್ನು ಆಯ್ಕೆ ಮಾಡಿದೆ." ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಸಂಸ್ಥೆಯ ಟ್ವೀಟ್​ನಲ್ಲಿ ತಿಳಿಸಲಾಗಿದೆ.

ಸತ್ಪುರ ಟೈಗರ್ ರಿಸರ್ವ್, ವಾರಣಾಸಿಯ ಐತಿಹಾಸಿಕ ನದಿ ಘಟ್ಟ, ಕರ್ನಾಟಕದ ಹಿರೇಬೆಣಕಲ್​ನ ಬೃಹತ್ ಶಿಲಾ ಬಂಡೆಗಳ ತಾಣ, ಮಹಾರಾಷ್ಟ್ರದ ಮರಾಠ ಮಿಲಿಟರಿ ವಾಸ್ತು ಸ್ಥಳಗಳು, ನರ್ಮದಾ ಕಣಿವೆಯಲ್ಲಿನ ಜಬಲ್‌ಪುರದ ಬೇಧಾಗಾಟ್-ಲಮೇಟಾಘಾಟ್ ಮತ್ತು ಕಾಂಚಿಪುರಂ ದೇವಾಲಯ ಇವು ಯುನೆಸ್ಕೋದ ತಾತ್ಕಾಲಿಕ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆಯಾಗಿವೆ.

ಈ ಆರು ತಾಣಗಳ ಸೇರ್ಪಡೆಯೊಂದಿಗೆ, ಯುನೆಸ್ಕೋದ ಪಟ್ಟಿಯಲ್ಲಿ ಭಾರತ 48 ತಾತ್ಕಾಲಿಕ ಪ್ರಸ್ತಾಪಗಳನ್ನು ಹೊಂದಿದೆ.

ಯುನೆಸ್ಕೋದ ವಿಶ್ವ ಪಾರಂಪರಿಕ ತಾಣಗಳ ತಾತ್ಕಾಲಿಕ ಪಟ್ಟಿಗೆ ಆಯ್ಕೆಯಾಗಿರುವ ಆರು ತಾಣಗಳ ಸಂಕ್ಷಿಪ್ತ ಮಾಹಿತಿ:

ಸತ್ಪುರ ಹುಲಿ ಮೀಸಲು ಪ್ರದೇಶ

ಮಧ್ಯಪ್ರದೇಶದಲ್ಲಿರುವ ಸತ್ಪುರ ರಾಷ್ಟ್ರೀಯ ಉದ್ಯಾನವು ಹಿಮಾಲಯ ಪ್ರದೇಶದ ಸರೀಸೃಪಗಳು ಮತ್ತು 42 ಜಾತಿಯ ನೀಲಗಿರಿ ಪ್ರದೇಶಗಳನ್ನು ಒಳಗೊಂಡಿದೆ. ಇದು ಅತಿದೊಡ್ಡ ಹುಲಿ ವಾಸದ ಅರಣ್ಯವಾಗಿದೆ ಮತ್ತು ಅತಿಹೆಚ್ಚು ಹುಲಿಗಳ ಜನಸಂಖ್ಯೆಯನ್ನು ಹೊಂದಿದೆ. 1500 ರಿಂದ 10,000 ವರ್ಷಗಳಷ್ಟು ಹಳೆಯದಾದ ವರ್ಣಚಿತ್ರಗಳೊಂದಿಗೆ ಈ ಸ್ಥಳವು 50ಕ್ಕೂ ಹೆಚ್ಚು ಕಲ್ಲಿನ ಗುಹೆಗಳನ್ನು ಹೊಂದಿದೆ.

ವಾರಣಾಸಿಯ ಘಟ್ಟಗಳು

ಉತ್ತರ ಪ್ರದೇಶದ ವಾರಣಾಸಿಯ ಗಂಗಾ ನದಿಯ ಘಟ್ಟವು ಯುನೆಸ್ಕೋ ಟ್ಯಾಗ್‌ಗಾಗಿ ಹಲವಾರು ವರ್ಷಗಳಿಂದ ಸ್ಪರ್ಧಿಸುತ್ತಿದೆ. "ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿ ಸ್ಪರ್ಧೆಯಿಂದ ಸಂರಕ್ಷಣೆಯವರೆಗೆ 'ವಾರಣಾಸಿ ಆಸ್ ಹೆರಿಟೇಜ್ ಸಿಟಿ (ಭಾರತ)" ಎಂಬ ಸಂಶೋಧನಾ ಲೇಖನದ ಪ್ರಕಾರ, ವಾರಣಾಸಿಯ ನದಿಯ ಮುಂಭಾಗವು ಮುಖ್ಯವಾಗಿ ಸಾಂಸ್ಕೃತಿಕ ಗುಣಲಕ್ಷಣಗಳ ಎರಡನೇ ವರ್ಗಕ್ಕೆ ಸೇರುತ್ತದೆ. ಈ ಸ್ಥಾನವು ಇತಿಹಾಸ, ಕಲೆ ಹಾಗೂ ವಿಜ್ಞಾನದ ದೃಷ್ಟಿಕೋನದಿಂದ ಮಹೋನ್ನತ ಸಾರ್ವತ್ರಿಕ ಮೌಲ್ಯವನ್ನು ಹೊಂದಿದೆ.

ಕರ್ನಾಟಕದ ಹಿರೇಬೆಣಕಲ್ ಬೃಹತ್ ಶಿಲಾ ಬಂಡೆಗಳು

ಕರ್ನಾಟಕದ ಗಂಗಾವತಿಯ ಹಿರೇಬೆಣಕಲ್​ನಲ್ಲಿರುವ 2,800 ವರ್ಷಗಳಷ್ಟು ಹಳೆಯದಾದ ಬೃಹತ್ ಶಿಲಾ ಬಂಡೆಗಳ ತಾಣವು ತಾತ್ಕಾಲಿಕ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಐತಿಹಾಸಿಕ ಸಮಾಧಿ ತಾಣಗಳು, ಸ್ಮಾರಕಗಳನ್ನು ಉಳಿಸಿಕೊಂಡಿರುವ ಅತಿದೊಡ್ಡ ಇತಿಹಾಸಪೂರ್ವ ಶಿಲಾಬಂಡೆಗಳ ವಸಾಹತುಗಳಲ್ಲಿ ಇದು ಕೂಡ ಒಂದಾಗಿದೆ. ವಿದ್ವಾಂಸರ ಪ್ರಕಾರ, ಇಲ್ಲಿರುವ ನವಶಿಲಾಯುಗದ ಸ್ಮಾರಕಗಳ ಅತ್ಯಮೂಲ್ಯ ಸಂಗ್ರಹದಿಂದಾಗಿ ಈ ತಾಣವನ್ನು ಪ್ರಸ್ತಾಪಿಸಲಾಗಿದೆ.

ಮಹಾರಾಷ್ಟ್ರದ ಮರಾಠ ಮಿಲಿಟರಿ ವಾಸ್ತು ಕಟ್ಟಡಗಳು

ಮಹಾರಾಷ್ಟ್ರದಲ್ಲಿ 17 ನೇ ಶತಮಾನದ ಮರಾಠ ರಾಜ ಛತ್ರಪತಿ ಶಿವಾಜಿಯ ಕಾಲದ 12 ಕೋಟೆಗಳಿವೆ. ಶಿವನೇರಿ (ಶಿವಾಜಿಯ ಜನ್ಮಸ್ಥಳ), ರಾಯಗಡ್ (ಮರಾಠ ರಾಜನ ಪಟ್ಟಾಭಿಷೇಕಕ್ಕಾಗಿ ಪುನರ್​ ನಿರ್ಮಿಸಲಾದ ರಾಜಧಾನಿ ಕೋಟೆ), ತೋರಣಾ (ಮರಾಠಾ ಸಾಮ್ರಾಜ್ಯದ ಮೊದಲ ಕೋಟೆ), ರಾಜ್‌ಗಡ್, ಸಾಲ್ಹರ್-ಮುಲ್ಹರ್, ಪನ್ಹಾಳಾ, ಪ್ರತಾಪಗಡ್, ಲೋಹಾಗಡ್, ಸಿಂಧುದುರ್ಗ, ಪದ್ಮದುರ್ಗ (ಕಾಸಾ), ವಿಜಯದುರ್ಗ ಮತ್ತು ಕೊಲಾಬಾ ಈ ತಾಣಗಳು ಯುನೆಸ್ಕೋ ತಾತ್ಕಾಲಿಕ ಪಟ್ಟಿಗೆ ಸೇರ್ಪಡೆಯಾಗಿವೆ.

ನರ್ಮದಾ ಕಣಿವೆಯ ಜಬಲ್ಪುರದಲ್ಲಿರುವ ಬೇದಾಘಾಟ್ - ಲಮೇಟಾಘಾಟ್

ಮಧ್ಯಪ್ರದೇಶದ ಮತ್ತೊಂದು ಅಪ್ರತಿಮ ತಾಣ ಬೇದಾಘಾಟ್. ಇದನ್ನು ಭಾರತದ ಗ್ರ್ಯಾಂಡ್ ಕ್ಯಾನಾನ್ (ಅತಿ ಪುರಾತನ ಕಣಿವೆ) ಎಂದು ಕರೆಯಲಾಗುತ್ತದೆ. ಇದು ಜಬಲ್ಪುರ ಜಿಲ್ಲೆಯಲ್ಲಿನ ಒಂದು ಪಟ್ಟಣವಾಗಿದ್ದು, ಜಬಲ್ಪುರದಿಂದ 25 ಕಿ.ಮೀ. ದೂರದಲ್ಲಿದೆ. ಇದು ಅಮೃತಶಿಲೆಯ ಬಂಡೆಗಳಿಗೆ ಹೆಸರುವಾಸಿಯಾಗಿದೆ. ನರ್ಮದಾ ಕಣಿವೆಯಲ್ಲಿ, ವಿಶೇಷವಾಗಿ ಜಬಲ್‌ಪುರದ ಬೇದಾಘಾಟ್ - ಲಮೇಟಾಘಾಟ್ ಪ್ರದೇಶದಲ್ಲಿ ಹಲವಾರು ಡೈನೋಸಾರ್ ಪಳೆಯುಳಿಕೆಗಳು ಕಂಡುಬಂದಿವೆ. 1828 ರಲ್ಲಿ, ಮೊದಲ ಡೈನೋಸಾರ್ ಪಳೆಯುಳಿಕೆಯನ್ನು ವಿಲಿಯಂ ಸ್ಲೀಮನ್ ಅವರು ಲಮೇಟಾ ಪ್ರದೇಶದಿಂದ ಸಂಗ್ರಹಿಸಿದ್ದರು.

ಕಾಂಚೀಪುರಂ ದೇವಾಲಯಗಳು

ಆಧ್ಯಾತ್ಮಿಕತೆ, ಪ್ರಶಾಂತತೆ ಮತ್ತು ರೇಷ್ಮೆಗಾಗಿ ಪ್ರಸಿದ್ಧವಾದ ತಮಿಳುನಾಡಿನ ಕಾಂಚೀಪುರಂ ಪಟ್ಟಣವು ಪ್ರಾಚೀನ ದೇವಾಲಯಗಳಿಂದ ಕೂಡಿದ್ದು, ವಾಸ್ತುಶಿಲ್ಪದ ಅದ್ಭುತಗಳು ಇಲ್ಲಿವೆ. ವೇಗವತಿ ನದಿಯ ದಡದಲ್ಲಿರುವ ಈ ಐತಿಹಾಸಿಕ ನಗರವು ಒಂದು ಕಾಲದಲ್ಲಿ 1,000 ದೇವಾಲಯಗಳನ್ನು ಹೊಂದಿತ್ತು. ಆದರೆ ಈಗ ಅದರಲ್ಲಿ ಕೇವಲ 126 (108 ಶೈವ ಮತ್ತು 18 ವೈಶ್ಯ) ದೇವಾಲಯಗಳು ಮಾತ್ರ ಉಳಿದುಕೊಂಡಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.