ETV Bharat / bharat

ತ್ರಿಪುರಾ ಅಭಿವೃದ್ಧಿಗೆ ₹1,300 ಕೋಟಿ ರೂ. ಪ್ಯಾಕೇಜ್: ನಿರ್ಮಲಾ ಸೀತಾರಾಮನ್ ಘೋಷಣೆ - ತ್ರಿಪುರಾದ ಮೋಹನ್​ಪುರ

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ ಎರಡು ದಿನಗಳ ಕಾಲ ತ್ರಿಪುರಾ ಪ್ರವಾಸದಲ್ಲಿದ್ದು, ಈ ವೇಳೆ ಆದಿವಾಸಿ ಬುಡಕಟ್ಟು ಪ್ರದೇಶಗಳ ಅಭಿವೃದ್ಧಿಗೆ 1,300 ಕೋಟಿ ರೂ. ಪ್ಯಾಕೇಜ್​ ಘೋಷಣೆ ಮಾಡಿದ್ದಾರೆ.

ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್
author img

By

Published : Aug 28, 2021, 5:05 PM IST

ಮೋಹನ್​​ಪುರ (ತ್ರಿಪುರಾ): ತ್ರಿಪುರಾದಲ್ಲಿ ಟಿಎಂಸಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿರುವ ಈ ಹೊತ್ತಲ್ಲಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​​​​ ಎರಡು ದಿನಗಳ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ.

ರಾಜ್ಯ ಪ್ರವಾಸದ ಮೊದಲ ದಿನವಾದ ಇಂದು, ಆದಿವಾಸಿ ಬುಡಕಟ್ಟು ಪ್ರದೇಶಗಳ ಅಭಿವೃದ್ಧಿಗೆ 1,300 ಕೋಟಿ ರೂ. ಪ್ಯಾಕೇಜ್​ ಘೋಷಿಸಿದ್ದಾರೆ.

ಮೋಹನ್​ಪುರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ನಿರ್ಮಲಾ ಸೀತಾರಾಮನ್, 10 ದಿನಗಳೊಳಗೆ ಬುಡಕಟ್ಟು ಪ್ರದೇಶಗಳ ಅಭಿವೃದ್ಧಿ ಮಾಡುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ರಾಜ್ಯದಲ್ಲಿ ಪ್ರಬಲ ಬುಡಕಟ್ಟು ಪ್ರದೇಶಗಳಿಗೆ ಪ್ರತ್ಯೇಕ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದರು.

ರಾಜ್ಯದ ಅರ್ಧದಷ್ಟು ಜನಸಂಖ್ಯೆ ಎಸ್​​ಸಿ, ಎಸ್​ಟಿ ಸಮುದಾಯಗಳಿದ್ದು, ಈ ಜನರಿಗೆ ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸಲು ಕೇಂದ್ರ ಸರ್ಕಾರ ಸಂಘಟಿತ ಪ್ರಯತ್ನಗಳನ್ನು ಮಾಡುತ್ತಿದೆ. ಈ ಮಹತ್ವಾಕಾಂಕ್ಷೆಯ ಯೋಜನೆಗೆ ವಿಶ್ವ ಬ್ಯಾಂಕ್ ಮತ್ತು ಕೇಂದ್ರ ಸರ್ಕಾರವು ಒಟ್ಟಾಗಿ ಹಣ ನೀಡುತ್ತಿವೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ದೂರದ ಕುಗ್ರಾಮಗಳು ರಾಷ್ಟ್ರೀಯ ಹೆದ್ದಾರಿಗಳಿಗೆ ಸಂಪರ್ಕ ಹೊಂದಿಲ್ಲ. ಇದರಿಂದಾಗಿ ಮಕ್ಕಳು ಶಾಲೆಗೆ ಹೋಗಲು ಸಾಧ್ಯವಾಗುತ್ತಿಲ್ಲ. ಪ್ರತಿಯೊಂದು ಗ್ರಾಮದಲ್ಲೂ ರಸ್ತೆಗಳು ಮುಖ್ಯ. ಹಾಗಾಗಿ ರಸ್ತೆ ನಿರ್ಮಾಣವೇ ನಮ್ಮ ಮೊದಲ ಆದ್ಯತೆ ಎಂದಿದ್ದಾರೆ.

ಇದಲ್ಲದೆ, ಕೇಂದ್ರ ಸಚಿವರು 21 ಕೋಟಿ ರೂಪಾಯಿ ಮೌಲ್ಯದಲ್ಲಿ ನಾಲ್ಕು ರಾಷ್ಟ್ರೀಯ ಹೆದ್ದಾರಿಗಳನ್ನು ವಿಸ್ತರಿಸುವುದು, ಅಗರ್ತಲಾ ಸ್ಮಾರ್ಟ್ ಸಿಟಿಯ ಡಿಜೀಟಲೀಕರಣ ಯೋಜನೆಗಳನ್ನು ಘೋಷಿಸಿದ್ದಾರೆ. ಕೇಂದ್ರ ಸರ್ಕಾರ ಏನೇ ಯೋಜನೆಗಳನ್ನು ಜಾರಿಗೆ ತಂದರೂ, ಅವುಗಳಿಂದ ಮಹಿಳೆಯರಿಗೆ ಅನುಕೂಲವಾಗಬೇಕು. ಉಜ್ವಲ ಯೋಜನೆ, ಜಲಜೀವನ್​ ಮಿಷನ್​ ಯೋಜನೆಗಳು ಇದಕ್ಕೆ ಉದಾಹರಣೆ ಎಂದರು.

ಇದನ್ನೂ ಓದಿ: ಮಮತಾ ಬ್ಯಾನರ್ಜಿ ಸೋದರಳಿಯ ಅಭಿಷೇಕ್​ ಬ್ಯಾನರ್ಜಿ ದಂಪತಿಗೆ ಇಡಿ ಸಮನ್ಸ್​

ಇದಕ್ಕೂ ಮುನ್ನ ಸೀತಾರಾಮನ್, 151 ಕೋಟಿ ಮೌಲ್ಯದ 111 ಹೊಸ ಯೋಜನೆಗಳನ್ನು ಡಿಜಿಟಲ್ ಮೂಲಕ ಉದ್ಘಾಟಿಸಿದರು. ಇವುಗಳಲ್ಲಿ 132 ಕೆವಿ ವಿದ್ಯುತ್ ಕೇಂದ್ರ, ಆರ್‌ಐಡಿಎಫ್, ಎಸ್‌ಪಿಎ ಮತ್ತು ಏಷ್ಯನ್ ಅಭಿವೃದ್ಧಿ ಬ್ಯಾಂಕ್‌ನಿಂದ ಧನಸಹಾಯ ಪಡೆದ ಮೇಲ್ಮೈ ನೀರಿನ ಸಂಸ್ಕರಣಾ ಘಟಕದ ಏಳು ಯೋಜನೆಗಳು ಸೇರಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.