ETV Bharat / bharat

ಡಿಸಿಎಂ ಮನೀಶ್ ಸಿಸೋಡಿಯಾ ಕೇಳಿದ ಕಡತ ನೀಡಲು ಒಪ್ಪದ ದೆಹಲಿ ಕಾನೂನು ಇಲಾಖೆ? - ಸಿಬಿಐ

ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ತಮ್ಮ ವಿಶೇಷ ಕರ್ತವ್ಯ ಅಧಿಕಾರಿಯ ಮೂಲಕ ಆಯುಕ್ತರಿಂದ ಅಬಕಾರಿ ನೀತಿಗೆ ಸಂಬಂಧಿಸಿದ ಕಡತಗಳನ್ನು ಕೇಳಿದ್ದರು. ಆದರೆ, ಅಬಕಾರಿ ನೀತಿ ಹಗರಣದ ಬಗ್ಗೆ ಸದ್ಯ ವಿವಿಧ ಏಜೆನ್ಸಿಗಳು ತನಿಖೆ ನಡೆಸುತ್ತಿರುವುದರಿಂದ ಯಾವುದೇ ದಾಖಲೆ ನೀಡಲು ಕಾನೂನು ಇಲಾಖೆಯು ಒಪ್ಪಿಲ್ಲ ಎಂದು ಹೇಳಲಾಗಿದೆ.

sisodias-osd-wrote-a-letter-to-excise-commissioner-for-documents-related-to-excise-policy
ಡಿಸಿಎಂ ಮನೀಶ್ ಸಿಸೋಡಿಯಾ ಕೇಳಿದ ಕಡತ ನೀಡಲು ಒಪ್ಪದ ದೆಹಲಿ ಕಾನೂನು ಇಲಾಖೆ
author img

By

Published : Nov 10, 2022, 8:11 PM IST

ನವದೆಹಲಿ: ಸಾಕಷ್ಟು ವಿವಾದಕ್ಕೆ ಕಾರಣವಾದ ದೆಹಲಿ ಸರ್ಕಾರದ ಹೊಸ ಅಬಕಾರಿ ನೀತಿ ಹಗರಣದ ತನಿಖೆ ಇನ್ನೂ ಮುಂದುವರೆದಿದೆ. ಇದರ ನಡುವೆ ಈ ಹಗರಣದ ಪ್ರಮುಖ ಆರೋಪಿಯಾದ ದೆಹಲಿಯ ಉಪಮುಖ್ಯಮಂತ್ರಿ ಮತ್ತು ಅಬಕಾರಿ ಸಚಿವ ಮನೀಶ್ ಸಿಸೋಡಿಯಾ ತಮ್ಮದೇ ಇಲಾಖೆಯ ಕಡತಗಳನ್ನು ಪಡೆಯುವಲ್ಲಿ ವಿಫಲರಾಗಿದ್ದಾರೆ ಎಂದು ವರದಿಯಾಗಿದೆ.

ಅಬಕಾರಿ ನೀತಿ ಹಗರಣದ ತನಿಖೆಯನ್ನು ಸಿಬಿಐ, ಇಡಿ ಮತ್ತು ಆರ್ಥಿಕ ಅಪರಾಧ ವಿಭಾಗದಂತಹ ತನಿಖಾ ಸಂಸ್ಥೆಗಳು ನಡೆಸುತ್ತಿವೆ. ಅಬಕಾರಿ ಸಚಿವರೂ ಆದ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಸಿಬಿಐ ಆರೋಪಿಯನ್ನಾಗಿ ಮಾಡಿದೆ. ಇದರ ನಡುವೆ ಮನೀಶ್ ಸಿಸೋಡಿಯಾ ತಮ್ಮ ವಿಶೇಷ ಕರ್ತವ್ಯ ಅಧಿಕಾರಿ ಎಂಕೆ ನಿಖಿಲ್ ಮೂಲಕ ಆಯುಕ್ತರಿಂದ ಅಬಕಾರಿ ನೀತಿಗೆ ಸಂಬಂಧಿಸಿದ ಕಡತಗಳನ್ನು ಕೇಳಿದ್ದರು ಎಂದು ಹೇಳಲಾಗಿದೆ.

ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ಅವರ ವಿಶೇಷ ಕರ್ತವ್ಯ ಅಧಿಕಾರಿ ಬರೆದ ಪತ್ರ

ವಿಶೇಷ ಕರ್ತವ್ಯ ಅಧಿಕಾರಿ ಎಂಕೆ ನಿಖಿಲ್ ಸಹಿ ಮಾಡಿದ ಪತ್ರವನ್ನು ಸೆ.30 ರಂದು ಅಬಕಾರಿ ಆಯುಕ್ತರಿಗೆ ಕಳುಹಿಸಲಾಗಿದೆ. ಅದರಲ್ಲಿ ಉಪ ಮುಖ್ಯಮಂತ್ರಿಗಳಿಗೆ 2021-22 ರ ಅಬಕಾರಿ ನೀತಿಗೆ ಸಂಬಂಧಿಸಿದ ದಾಖಲೆಯ ಫೋಟೊಕಾಪಿ ಮತ್ತು ಸಾಫ್ಟ್ ಕಾಪಿ ಅಗತ್ಯವಿದೆ ಎಂದು ಸ್ಪಷ್ಟವಾಗಿ ಬರೆಯಲಾಗಿದೆ.

ಕಾನೂನು ಇಲಾಖೆ ಹೇಳಿದ್ದೇನು?: ಅಂತೆಯೇ, ಮನೀಶ್ ಸಿಸೋಡಿಯಾ ಕೇಳಿದ ದಾಖಲೆಗಳ ಪ್ರತಿಯನ್ನು ನೀಡಬಹುದೇ ಎಂದು ಅಬಕಾರಿ ಇಲಾಖೆಯು ಕಾನೂನು ಇಲಾಖೆಯನ್ನು ಸಂಪರ್ಕಿಸಿ ಸಲಹೆ ಕೇಳಿತ್ತು. ಆದರೆ, ಕಾನೂನು ಇಲಾಖೆಯು ಸದ್ಯ ವಿವಿಧ ಏಜೆನ್ಸಿಗಳು ಅಬಕಾರಿ ನೀತಿ ಹಗರಣದ ತನಿಖೆ ನಡೆಸುತ್ತಿರುವುದರಿಂದ ಯಾವುದೇ ದಾಖಲೆ ನೀಡಲು ಒಪ್ಪಿಲ್ಲ.

  • बातों को भटकाने की बजाय ये बतायें कि उनको अभी तक जाँच में मिला क्या? कुछ नहीं।

    अब ये बताएँ कि तेलेंगाना में MLA ख़रीदने गये इनके लोग रंगे हाथों सौ करोड़ के साथ पकड़े गये। मोदी जी, वो सौ करोड़ किस से लिए? https://t.co/2gjKXAtH87

    — Manish Sisodia (@msisodia) November 10, 2022 " class="align-text-top noRightClick twitterSection" data=" ">

ಸಾಮಾನ್ಯ ಸಂದರ್ಭಗಳಲ್ಲಿ ಇಲಾಖೆಯು ಮಾಹಿತಿಗಾಗಿ ಸಚಿವರಿಗೆ ದಾಖಲೆಗಳನ್ನು ನೀಡುತ್ತದೆ. ಆದರೆ, ಈಗ ಪ್ರಮುಖ ಏಜೆನ್ಸಿಗಳು ತನಿಖೆ ನಡೆಸುತ್ತಿವೆ. ಆದ್ದರಿಂದ ತನಿಖಾ ಸಂಸ್ಥೆಗಳ ಅನುಮೋದನೆಯಿಲ್ಲದೇ ಈ ದಾಖಲೆಗಳನ್ನು ನೀಡಲಾಗುವುದಿಲ್ಲ ಎಂಬುವುದಾಗಿ ಕಾನೂನು ಇಲಾಖೆಯು ಹೇಳಿದೆ ಎಂದು ವರದಿಯಾಗಿದೆ.

ಕಳೆದ ವರ್ಷ ದೆಹಲಿ ಸರ್ಕಾರ ಜಾರಿಗೆ ತಂದ ಹೊಸ ಅಬಕಾರಿ ನೀತಿಯನ್ನು ಈಗಾಗಲೇ ಹಿಂಪಡೆಯಲಾಗಿದೆ. ಆಗಸ್ಟ್‌ನಲ್ಲಿ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅವರು ಹೊಸ ಅಬಕಾರಿ ನೀತಿ ಜಾರಿಯಲ್ಲಿನ ಅಕ್ರಮಗಳು ಮತ್ತು ಭ್ರಷ್ಟಾಚಾರದ ಬಗ್ಗೆ ಸಿಬಿಐ ತನಿಖೆಗೆ ಶಿಫಾರಸು ಮಾಡಿದ್ದರು. ಇದಾದ ಬಳಿಕ ದೆಹಲಿ ಸೇರಿದಂತೆ ದೇಶದ ಇತರ ನಗರಗಳಲ್ಲೂ ಇಡಿ ದಾಳಿ ನಡೆಸಲಾಗಿತ್ತು.

ಸುಪ್ರೀಂಕೋರ್ಟ್​ನಲ್ಲಿ ಅಫಿಡವಿಟ್​: ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಕೆಲಸ ಕಾರ್ಯಗಳಿಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ಮನೀಶ್ ಸಿಸೋಡಿಯಾ ಸುಪ್ರೀಂಕೋರ್ಟ್​ನಲ್ಲಿ ಅಫಿಡವಿಟ್ ಸಲ್ಲಿಸಿದ್ದಾರೆ. ಸಭೆಯಲ್ಲಿ ಭಾಗವಹಿಸದಂತೆ ಅಧಿಕಾರಿಗಳ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದೂ ಅಫಿಡವಿಟ್​ನಲ್ಲಿ ಉಲ್ಲೇಖಿಸಲಾಗಿದೆ.

ಇದೀಗ ಈ ಅಫಿಡವಿಟ್ ಕೂಡ ಮಹತ್ವದ್ದಾಗಿದೆ. ಏಕೆಂದರೆ ಒಂದೆಡೆ ದೆಹಲಿಯಲ್ಲಿ ಎಂಸಿಡಿ ಚುನಾವಣೆಗಳು ನಡೆಯುತ್ತಿವೆ ಮತ್ತು ಎರಡನೆಯದಾಗಿ ಅಬಕಾರಿ ನೀತಿ ಹಗರಣದ ತನಿಖೆ ನಡೆಯುತ್ತಿದೆ. ಇದರ ಆಧಾರದ ಮೇಲೆ ತಮ್ಮದೇ ಇಲಾಖೆಯು ಮನೀಶ್ ಸಿಸೋಡಿಯಾ ಅವರಿಗೆ ಕಡತಗಳನ್ನು ನೀಡಲು ನಿರಾಕರಿಸಿದೆ.

ಇದನ್ನೂ ಓದಿ: ದೆಹಲಿ ಸರ್ಕಾರದ ಹೊಸ ಅಬಕಾರಿ ನೀತಿ: ಸಿಬಿಐ ತನಿಖೆಗೆ ಲೆಫ್ಟಿನೆಂಟ್ ಗವರ್ನರ್ ಶಿಫಾರಸು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.