ಬೆಂಗಳೂರು: ಮಾದಕ ವಸ್ತು ಪ್ರಕರಣದಲ್ಲಿ ಹಿರಿಯ ನಟ ಶಕ್ತಿ ಕಪೂರ್ ಮಗ ಸಿದ್ದಾಂತ್ ಕಪೂರ್ಗೆ ಜಾಮೀನು ಸಿಕ್ಕಿದೆ. ಇಲ್ಲಿನ ಹೋಟೆಲ್ವೊಂದರ ಮೇಲೆ ದಾಳಿ ನಡೆಸಿದ್ದ ಪೊಲೀಸರು ಪಾರ್ಟಿಯಲ್ಲಿ ಡ್ರಗ್ಸ್ ಸೇವಿಸಿದ್ದ ಸಿದ್ಧಾಂತ್ ಸೇರಿದಂತೆ ಐವರನ್ನು ಬಂಧಿಸಿದ್ದರು. ಆರೋಪಿಗಳ ಡ್ರಗ್ಸ್ ಪರೀಕ್ಷೆ ಪಾಸಿಟಿವ್ ಬಂದಿತ್ತು. ಈ ಪ್ರಕರಣದಲ್ಲಿ ಈಗ ಐವರಿಗೂ ಜಾಮೀನು ನೀಡಲಾಗಿದೆ.
-
Actor Shraddha Kapoor's brother Siddhanth Kapoor and four others have been released on station bail. They will further have to appear before the Police as and when called: Bheema Shankar Gulled, DCP East Bengaluru
— ANI (@ANI) June 13, 2022 " class="align-text-top noRightClick twitterSection" data="
">Actor Shraddha Kapoor's brother Siddhanth Kapoor and four others have been released on station bail. They will further have to appear before the Police as and when called: Bheema Shankar Gulled, DCP East Bengaluru
— ANI (@ANI) June 13, 2022Actor Shraddha Kapoor's brother Siddhanth Kapoor and four others have been released on station bail. They will further have to appear before the Police as and when called: Bheema Shankar Gulled, DCP East Bengaluru
— ANI (@ANI) June 13, 2022
ಈ ಪ್ರಕರಣದಲ್ಲಿ ಸಿದ್ದಾಂತ್ ಕಪೂರ್ ಹಾಗೂ ನಾಲ್ವರನ್ನು ಠಾಣೆಯ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಬೆಂಗಳೂರು ಪೂರ್ವ ಡಿಸಿಪಿ ಭೀಮಾಶಂಕರ್ ಗುಳೇದ್ ಸ್ಪಷ್ಟಪಡಿಸಿದ್ದಾರೆ. ಕರೆದಾಗ ಠಾಣೆಗೆ ಬರಬೇಕಾಗುತ್ತದೆ ಎಂದು ಷರತ್ತು ವಿಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಏನಿದು ಪ್ರಕರಣ?: ಭಾನುವಾರ ರಾತ್ರಿ ಎಂಜಿ ರಸ್ತೆಯಲ್ಲಿರುವ ಐಷಾರಾಮಿ ಹೋಟೆಲ್ನಲ್ಲಿ ರೇವ್ ಪಾರ್ಟಿ ನಡೆಯುತ್ತಿತ್ತು. ಈ ವೇಳೆ ದಾಳಿ ನಡೆಸಿದ ಬೆಂಗಳೂರು ಪೊಲೀಸರು ಸಿದ್ದಾಂತ್ ಕಪೂರ್ ಸೇರಿ ನಾಲ್ವರನ್ನು ಬಂಧಿಸಿದ್ದರು. ದಾಳಿ ವೇಳೆ ಸುಮಾರು 35 ಮಂದಿ ರೇವ್ ಪಾರ್ಟಿಯಲ್ಲಿ ಸಿಕ್ಕಿ ಬಿದ್ದಿದ್ದರು. ಈ ವೇಳೆ ನಡೆಸಿದ ಪರೀಕ್ಷೆಯಲ್ಲಿ ಐವರು ಡ್ರಗ್ಸ್ ಸೇವಿಸಿರುವುದು ಸಾಬೀತಾಗಿತ್ತು.
ಈ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್ ಆಕ್ಟ್ ಸೆಕ್ಷನ್ 22ಎ, 22ಬಿ ಮತ್ತು 27ಬಿ ಅಡಿ ಪ್ರಕರಣ ದಾಖಲಿಸಲಾಗಿತ್ತು.