ಭರತ್ಪುರದ ರಾಷ್ಟ್ರೀಯ ಉದ್ಯಾನದೊಂದಿಗೆ ಸೈಬೀರಿಯನ್ ಕೊಕ್ಕರೆಗಳಿಗಿದೆ ಶತ -ಶತಮಾನಗಳ ನಂಟು! - ಸೈಬೀರಿಯನ್ ಕೊಕ್ಕರೆಗಳ ಎಣಿಕೆ ಕಾರ್ಯ
ಭರತ್ಪುರದ ಕಿಯೋಲಾಡಿಯೊ ರಾಷ್ಟ್ರೀಯ ಉದ್ಯಾನದೊಂದಿಗೆ ಸೈಬೀರಿಯನ್ ಕ್ರೇನ್ಗಳ ಸಂಬಂಧ ಕನಿಷ್ಠ ಐದು ಶತಮಾನಗಳಷ್ಟು ಹಳೆಯದು. ಮೊಘಲ್ ಚಕ್ರವರ್ತಿ ಜಹಾಂಗೀರ್ನ ಆಸ್ಥಾನದ ವರ್ಣಚಿತ್ರಕಾರ ಉಸ್ತಾದ್ ಮನ್ಸೂರ್ (1590-1624) ಸೈಬೀರಿಯನ್ ಕೊಕ್ಕರೆಯ ಮೊದಲ ಭಾವಚಿತ್ರವನ್ನು ಚಿತ್ರಿಸಿದ್ದಾರೆ. ಇದು ಕಿಯೋಲಾಡಿಯೊ ರಾಷ್ಟ್ರೀಯ ಉದ್ಯಾನವನದೊಂದಿಗೆ ಸೈಬೀರಿಯನ್ ಕೊಕ್ಕರೆಗಳ ಒಡನಾಟದ ಇತಿಹಾಸದಲ್ಲಿ ಬಹುಶಃ ಅತ್ಯಂತ ಹಳೆಯ ಪುರಾವೆ.
ಭರತ್ಪುರ/ರಾಜಸ್ಥಾನ: ಭರತ್ಪುರದ ಕಿಯೋಲಾಡಿಯೊ ರಾಷ್ಟ್ರೀಯ ಉದ್ಯಾನವನವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವುದು ಮುಖ್ಯವಾಗಿ ಸೈಬೀರಿಯನ್ ಕೊಕ್ಕರೆಗಳು ಮತ್ತು ಇತರ ಪ್ರಭೇದದ ವಲಸೆ ಪಕ್ಷಿಗಳು ವಾರ್ಷಿಕವಾಗಿ ಇಲ್ಲಿಗೆ ಭೇಟಿ ನೀಡುವುದರಿಂದ. ಕಿಯೋಲಾಡಿಯೊ ರಾಷ್ಟ್ರೀಯ ಉದ್ಯಾನದಲ್ಲಿ 20 ವರ್ಷಗಳಲ್ಲಿ ಒಂದೇ ಸೈಬೀರಿಯನ್ ಕೊಕ್ಕರೆ ಗುರುತಿಸಲಾಗಿಲ್ಲವಾದರೂ, ಈ ಉದ್ಯಾನದೊಂದಿಗಿನ ಕೊಕ್ಕರೆಗಳ ಸಂಬಂಧವು ಸುಮಾರು 500 ವರ್ಷಗಳಷ್ಟು ಹಿಂದಿನದು.
ಉಸ್ತಾದ್ ಮನ್ಸೂರ್ ಸೈಬೀರಿಯನ್ ಕೊಕ್ಕರೆಯ ಮೊದಲ ವರ್ಣಚಿತ್ರ ರಚಿಸಿದ:
ಪಕ್ಷಿ ವೀಕ್ಷಕ ಲಕ್ಷ್ಮಣ್ ಸಿಂಗ್ ಅವರು ಕಿಯೋಲಾಡಿಯೊ ರಾಷ್ಟ್ರೀಯ ಉದ್ಯಾನದೊಂದಿಗೆ ಸೈಬೀರಿಯನ್ ಕ್ರೇನ್ಗಳ ಸಂಬಂಧ ಕನಿಷ್ಠ ಐದು ಶತಮಾನಗಳಷ್ಟು ಹಳೆಯದು ಎಂದು ವಿವರಿಸುತ್ತಾರೆ. ಅಥವಾ ಅದಕ್ಕೂ ಮುಂಚೆಯೇ ಈ ಸೈಬೀರಿಯನ್ ಕೊಕ್ಕರೆಗಳು ಭರತ್ಪುರದ ಉದ್ಯಾನಕ್ಕೆ ಬಂದಿರಬಹುದೇನೋ. ಆದರೆ ಹಳೆಯ ಪುರಾವೆಗಳು 'ಜಹಾಂಗೀರ್ನಾಮ'ಪುಸ್ತಕದಲ್ಲಿ ಕಂಡು ಬರುತ್ತವೆ. ಮೊಘಲ್ ಚಕ್ರವರ್ತಿ ಜಹಾಂಗೀರ್ನ ಆಸ್ಥಾನದ ವರ್ಣಚಿತ್ರಕಾರ ಉಸ್ತಾದ್ ಮನ್ಸೂರ್ (1590-1624) ಸೈಬೀರಿಯನ್ ಕೊಕ್ಕರೆಯ ಮೊದಲ ಭಾವಚಿತ್ರವನ್ನು ಚಿತ್ರಿಸಿದ್ದಾರೆ. ಇದು ಕಿಯೋಲಾಡಿಯೊ ರಾಷ್ಟ್ರೀಯ ಉದ್ಯಾನದೊಂದಿಗೆ ಸೈಬೀರಿಯನ್ ಕೊಕ್ಕರೆಗಳ ಒಡನಾಟದ ಇತಿಹಾಸದಲ್ಲಿ ಬಹುಶಃ ಅತ್ಯಂತ ಹಳೆಯ ಪುರಾವೆ.
ಉಸ್ತಾದ್ ಮನ್ಸೂರ್ ಪಕ್ಷಿಗಳೊಂದಿಗಿನ ಒಡನಾಟ:
ಲಕ್ಷ್ಮಣ್ ಸಿಂಗ್ ಪ್ರಕಾರ, ಜಹಾಂಗೀರ್ ಪಕ್ಷಿಗಳನ್ನು ಪ್ರೀತಿಸುತ್ತಿದ್ದರು. ಆಗ ಆಗ್ರಾ ಮೊಘಲ್ ಸುಲ್ತಾನರ ರಾಜಧಾನಿಯಾಗಿತ್ತು ಮತ್ತು ಒಬ್ಬರು ಭರತ್ಪುರ ಮತ್ತು ಬಯಾನಾದ ಮೂಲಕ ರಜಪೂತನ (ಪ್ರಸ್ತುತ ರಾಜಸ್ಥಾನ) ತಲುಪಬೇಕಾಗಿತ್ತು. ಈ ಸಮಯದಲ್ಲಿ, ಉಸ್ತಾದ್ ಮನ್ಸೂರ್ ಸೈಬೀರಿಯನ್ ಕ್ರೇನ್ಗಳನ್ನು ಇಲ್ಲಿ ನೋಡಿದರು ಮತ್ತು ಅವುಗಳ ಚಿತ್ರವನ್ನು ಬಿಡಿಸಿದ್ರು.
ಸೈಬೀರಿಯನ್ ಕೊಕ್ಕರೆ ಸಂತತಿ ಕ್ಷೀಣಿಸಲು ಕಾರಣ:
ಕಿಯೋಲಾಡಿಯೊ ರಾಷ್ಟ್ರೀಯ ಉದ್ಯಾನವನದಲ್ಲಿ ಸೈಬೀರಿಯನ್ ಕೊಕ್ಕರೆಗಳ ಎಣಿಕೆ ಕಾರ್ಯ ಮೊದಲ ಬಾರಿಗೆ 1964 ರಲ್ಲಿ ನಡೆಯಿತು. ಈ ಸಮಯದಲ್ಲಿ 200 ಕೊಕ್ಕರೆಗಳಿದ್ದವು ಎಂದು ದಾಖಲಿಸಲಾಗಿದೆ. ಆದರೆ ನಂತರ, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿ ಸೈಬೀರಿಯನ್ ಕೊಕ್ಕರೆಗಳ ಹತ್ಯೆಯಿಂದಾಗಿ, ಈ ಪಕ್ಷಿಗಳ ಸಂಖ್ಯೆ ಕ್ರಮೇಣ ಕಡಿಮೆಯಾಯಿತು. 2001 ರಲ್ಲಿ, ಕೇವಲ ಎರಡು ಸೈಬೀರಿಯನ್ ಕ್ರೇನ್ಗಳು ಕಿಯೋಲಾಡಿಯೊ ರಾಷ್ಟ್ರೀಯ ಉದ್ಯಾನಕ್ಕೆ ಕೊನೆಯ ಬಾರಿಗೆ ಭೇಟಿ ನೀಡಿವೆ.
ಸೈಬೀರಿಯನ್ ಕ್ರೇನ್ಗಳು ಮಧ್ಯ ಏಷ್ಯಾದಿಂದ 5,000 ಕಿ.ಮೀ. ದೂರದಲ್ಲಿರೋ ಈ ಕಿಯೋಲಾಡಿಯೊ ಉದ್ಯಾನವನಕ್ಕೆ ವಲಸೆ ಬರಲು ಪ್ರಮುಖ ಕಾರಣ ಇಲ್ಲಿ ಸಾಕಷ್ಟು ಆಹಾರ ಸಿಗುತ್ತದೆ ಮತ್ತು ಸಂತಾನೋತ್ಪತ್ತಿಗೆ ಸುರಕ್ಷಿತ ವಾತಾವರಣವಿದೆ ಎಂಬ ಕಾರಣಕ್ಕೆ ವಲಸೆ ಬರುತ್ತಿದ್ದವು.