ETV Bharat / state

ಸುಮೇರು ಪರ್ವತದ ಮೇಲೆ ತ್ರಿವರ್ಣಧ್ವಜ: ಪಂಚಕಲ್ಯಾಣ, ಮಹಾಮಸ್ತಕಾಭಿಷೇಕ ಸಂಪನ್ನ - MAHAMASTAKABHISHEKA

ವರೂರು ನವಗ್ರಹ ಕ್ಷೇತ್ರದಲ್ಲಿ ಕಳೆದ 12 ದಿನಗಳಿಂದ ಜರುಗಿದ ತೀರ್ಥಂಕರರ ಪಂಚಕಲ್ಯಾಣ ಮಹೋತ್ಸವ, ಸುಮೇರು ಪರ್ವತ ಲೋಕಾರ್ಪಣೆ ಹಾಗೂ ಮಹಾಮಸ್ತಕಾಭಿಷೇಕ ಭಾನುವಾರ ಸಂಪನ್ನಗೊಂಡಿತು.

HUBBALLI  VARUR TIRTHANKARAS  DHARWAD  ಮಹಾಮಸ್ತಕಾಭಿಷೇಕ
ಸುಮೇರು ಪರ್ವತದ ಮೇಲೆ ತ್ರಿವರ್ಣಧ್ವಜ: ತೀರ್ಥಂಕರರ ಮಹಾಮಸ್ತಕಾಭಿಷೇಕ ಸಂಪನ್ನ (ETV Bharat)
author img

By ETV Bharat Karnataka Team

Published : Jan 27, 2025, 7:21 AM IST

ಹುಬ್ಬಳ್ಳಿ: "ವರೂರು ಜೈನ ದಿಗಂಬರ ನವಗ್ರಹ ಕ್ಷೇತ್ರದಲ್ಲಿ ನಡೆದ ತೀರ್ಥಂಕರರ ಪಂಚಕಲ್ಯಾಣ ಮತ್ತು ಮಹಾಮಸ್ತಕಾಭಿಷೇಕ ಕಾರ್ಯಕ್ರಮದಿಂದ ಧಾರವಾಡ ಜಿಲ್ಲೆಗೆ ದೇಶ ಪ್ರಸಿದ್ಧಿ ಪ್ರಾಪ್ತವಾಗಿದೆ" ಎಂದು ರಾಜ್ಯ ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.

ವರೂರು ನವಗ್ರಹ ಕ್ಷೇತ್ರದಲ್ಲಿ ಕಳೆದ 12 ದಿನಗಳಿಂದ ಜರುಗಿದ ತೀರ್ಥಂಕರರ ಪಂಚಕಲ್ಯಾಣ ಮಹೋತ್ಸವ, ಸುಮೇರು ಪರ್ವತ ಲೋಕಾರ್ಪಣೆ ಹಾಗೂ ಮಹಾಮಸ್ತಕಾಭಿಷೇಕ ಕಾರ್ಯಕ್ರಮಗಳ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು "ಈ ಕ್ಷೇತ್ರದಲ್ಲಿ ನಡೆದಿರುವ ಕಾರ್ಯಕ್ರಮಗಳಿಂದ ಬಡಜನರಿಗೆ ಬಹಳ ಅನುಕೂಲವಾಗಿದೆ" ಎಂದರು.

"ಅಹಿಂಸೆಯನ್ನೇ ತನ್ನ ಪರಮ ತತ್ವವನ್ನಾಗಿ ಪಾಲಿಸುವ ಜೈನ ಸಮುದಾಯವು ಬಿಕ್ಕಟ್ಟಿನ ಪರಿಸ್ಥಿತಿಗಳಲ್ಲಿ ಉಳಿದೆಲ್ಲ ಸಮಾಜಗಳನ್ನು ಒಗ್ಗೂಡಿಸಿಕೊಂಡು, ಇಡೀ ಸಮಾಜಕ್ಕೆ ನೆರವು ನೀಡುವ ಸದ್ಗುಣ ಹೊಂದಿದೆ. ಎಲ್ಲಾ ಧರ್ಮಗಳ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಈ ನವಗ್ರಹ ಸಂಸ್ಥೆ ದೇಶದಲ್ಲಿಯೇ ಮೊದಲನೇ ಉದಾಹರಣೆ ಎಂಬುದರಲ್ಲಿ ಅತಿಶಯೋಕ್ತಿ ಇಲ್ಲ ಎಂದು ಶ್ಲಾಘಿಸಿದರು.

HUBBALLI  VARUR TIRTHANKARAS  DHARWAD  ಮಹಾಮಸ್ತಕಾಭಿಷೇಕ
ತೀರ್ಥಂಕರರ ಮಹಾಮಸ್ತಕಾಭಿಷೇಕ ಸಂಪನ್ನ (ETV Bharat)

ಕಾಂಗ್ರೆಸ್​ ಪಕ್ಷವು ಜೈನ ಸಮುದಾಯಕ್ಕೆ ಸಕಲ ಸಹಾಯಗಳನ್ನು ಮಾಡಿದೆ. ಅಲ್ಪಸಂಖ್ಯಾತ ಸ್ಥಾನಮಾನ ನೀಡಿದೆ. ಸಂವಿಧಾನ ಮೂಲಕ ಮಹಿಳೆಯರಿಗೆ ಆಸ್ತಿ ಸಿಗುವ ಹಾಗೆ ಮಾಡಿದೆ ಎಂದು ಸಚಿವ ಸಂತೋಷ್ ಲಾಡ್​ ತಿಳಿಸಿದರು.

ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, "ಇಂಥ ಮಹಾನ್​ ಧಾರ್ಮಿಕ ಕಾರ್ಯಕ್ರಮದಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿರುವುದು ಖುಷಿ ನೀಡಿದೆ. ಮನುಷ್ಯನು ಪಕ್ಷಿ ನೋಡಿ ಹಾರುವುದನ್ನು, ಮೀನು ನೋಡಿ ಈಜುವುದನ್ನು ಕಲಿತ. ಆದರೆ ಮನುಷ್ಯ ಇನ್ನೊಬ್ಬ ಮನುಷ್ಯನನ್ನು ಪ್ರೀತಿ ಹೇಗೆ ಮಾಡಬೇಕೆಂಬುದನ್ನು ಕಲಿಯಲಿಲ್ಲ. ಆದರೆ ಈ ಕ್ಷೇತ್ರದಲ್ಲಿ ನಡೆದಿರುವ ಕಾರ್ಯಕ್ರಮ ಮತ್ತು ಆಚಾರ್ಯರ ಉಪದೇಶಗಳಿಂದ ಪ್ರೀತಿಯನ್ನು ಹೇಗೆ ಮಾಡಬೇಕು ಮತ್ತು ಪಡೆಯಬೇಕು ಎಂಬುದರ ಕುರಿತು ಮಾರ್ಗದರ್ಶನ ಸಿಕ್ಕಿದ್ದು ಮಹತ್ವದ್ದಾಗಿದೆ" ಎಂದರು.

ಸುಮೇರು ಪರ್ವತದ ಮೇಲೆ ತ್ರಿವರ್ಣಧ್ವಜ (ETV Bharat)

ಜಿಲ್ಲೆಯ ಶಾಲೆಗಳಿಗೆ ದಾನದ ಹಣ: "ಧಾರವಾಡ ಜಿಲ್ಲೆಯ ಎಲ್ಲ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಗಳಿಗೆ ಇರುವ ಹೆಂಚು ತೆಗೆದು ಕಾಂಕ್ರೀಟ್​ ಸ್ಲಾಬ್ ಹಾಕಿಸಲು ಮಹಾಮಸ್ತಕಾಭಿಷೇಕ ವೆಚ್ಚ ಪಾವತಿಸಿ ಉಳಿದ ದಾನದ ದುಡ್ಡನ್ನು ಕಾಣಿಕೆಯಾಗಿ ಕೊಡುವುದಾಗಿ ಆಚಾರ್ಯ ಗುಣಧರ ನಂದಿ ಮಹಾರಾಜರು ಇದೇ ವೇಳೆ ಹೇಳಿದರು. ಬಡ ಮಕ್ಕಳಿಗೆ ಖಾಸಗಿ ಸಿಬಿಎಸ್‌ಸಿ ಶಾಲೆಯಲ್ಲಿ ಕಲಿಸಲು ಆರ್ಥಿಕ ಅನುಕೂಲವಿಲ್ಲ. ಅಂತಹ ಪ್ರತಿಭಾವಂತ ಮಕ್ಕಳಿಗೆ ತೀರ್ಥಕ್ಷೇತ್ರದಲ್ಲಿ ಮುಂದಿನ ವರ್ಷದಿಂದ ಉಚಿತವಾಗಿ ಶಿಕ್ಷಣ ನೀಡಲಾಗುವುದು" ಎಂದು ಆಚಾರ್ಯರು ಪ್ರಕಟಿಸಿದರು.

ತಿರಂಗಾ ಅಭಿಷೇಕ, ಹೋಮ: ಭಾನುವಾರ ಮಹಾಮಸ್ತಕಾಭಿಷೇಕ ಕೊನೆಯ ದಿನ ಕೇಸರಿ, ಬಿಳಿ ಮತ್ತು ಹಸಿರು ಪವಿತ್ರ ಜಲಗಳಿಂದ ತೀರ್ಥಂಕರರಿಗೆ ಮಹಾಮಸ್ತಕಾಭಿಷೇಕ ಜರುಗಿತು. 9999 ಹೋಮ ಕುಂಡಗಳಲ್ಲಿ ಹವನ ನಡೆಯಿತು. 405 ಅಡಿ ಎತ್ತರದ ಸುಮೇರು ಪರ್ವತದ ಮೇಲೆ ಗಣರಾಜ್ಯೋತ್ಸವ ಅಂಗವಾಗಿ ತ್ರಿವರ್ಣ ಧ್ವಜ ಹಾರಾಡಿತು. ಜೊತೆಗೆ ಜೈನ ಧರ್ಮದ ಪಂಚರಂಗಿ ಧ್ವಜವನ್ನೂ ಆರೋಹಣ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಗುರುದೇವ ಆಚಾರ್ಯ ಕುಂತು ಸಾಗರ ಮಹಾರಾಜರು ಶಿಕ್ಷಣ ಮತ್ತು ಧರ್ಮಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಆಚಾರ್ಯ ಗುಣಧರ ನಂದಿ ಅವರಿಗೆ ರಾಜರ್ಷಿ ಮತ್ತು ಶಿಕ್ಷಣ ಮಹರ್ಷಿ ಬಿರುದುಗಳನ್ನು ದಯಪಾಲಿಸಿದರು.

ಇದನ್ನೂ ಓದಿ: ಗಣರಾಜ್ಯೋತ್ಸವ ಸಂಭ್ರಮ ; ರಾಜಭವನ ಸಾರ್ವಜನಿಕ ವೀಕ್ಷಣೆಗೆ ಅವಕಾಶ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.