ETV Bharat / bharat

ಶ್ರದ್ಧಾ ಹಂತಕನಿದ್ದ ವಾಹನದ ಮೇಲೆ ಹಿಂದು ಸೇನಾನಿಗಳ ದಾಳಿ, ಇಬ್ಬರು ವಶ - ಹಂತಕ ಅಫ್ತಾಬ್​ ಪೂನಾವಾಲಾಗೆ ಸುಳ್ಳು ಪತ್ತೆ ಪರೀಕ್ಷೆ

ಶ್ರದ್ಧಾ ವಾಲ್ಕರ್​ ಹಂತಕ ಅಫ್ತಾಬ್​ ಪೂನಾವಾಲಾ ಸಾಗಿಸುತ್ತಿದ್ದ ಪೊಲೀಸ್​ ವಾಹನದ ಮೇಲೆ ಇಬ್ಬರು ವ್ಯಕ್ತಿಗಳು ಕತ್ತಿಗಳಿಂದ ದಾಳಿ ಮಾಡಿದ ಘಟನೆ ಇಂದು ನಡೆದಿದೆ. ಯುವತಿಯ ಹತ್ಯೆಗೆ ಕ್ರೋಧಗೊಂಡು ಅವರು ಈ ದಾಳಿ ಮಾಡಿದ್ದಾರೆ ಎಂದು ಹೇಳಲಾಗಿದೆ.

shradhha-murder-accused-van-attacked-by-2-men
ಶ್ರದ್ಧಾ ಹಂತಕನಿದ್ದ ವಾಹನದ ಮೇಲೆ ಹಿಂದು ಸೇನಾನಿಗಳ ದಾಳಿ
author img

By

Published : Nov 28, 2022, 7:48 PM IST

ನವ ದೆಹಲಿ: ಶ್ರದ್ಧಾ ವಾಲ್ಕರ್​ ಭೀಕರ ಹತ್ಯೆ ಆರೋಪಿ ಅಫ್ತಾಬ್​ ಪೂನಾವಾಲಾಗೆ ದೆಹಲಿಯ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಸುಳ್ಳು ಪತ್ತೆ ಪರೀಕ್ಷೆ ಬಳಿಕ ಕಸ್ಟಡಿಗೆ ಕರೆದೊಯ್ಯುತ್ತಿದ್ದ ವಾಹನದ ಮೇಲೆ ಇಬ್ಬರು ವ್ಯಕ್ತಿಗಳು ಕತ್ತಿಗಳಿಂದ ದಾಳಿ ಮಾಡಿದ ಘಟನೆ ನಡೆದಿದೆ. ಬಳಿಕ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಶ್ರದ್ಧಾಳನ್ನು 35 ತುಂಡುಗಳನ್ನಾಗಿ ಮಾಡಿ ಶೀತಪೆಟ್ಟಿಗೆಯಲ್ಲಿಟ್ಟ ಕೇಸ್​ಗೆ ಸಂಬಂಧಿಸಿದಂತೆ ಹಂತಕ ಅಫ್ತಾಬ್​ ತನ್ನ ಹೇಳಿಕೆಗಳನ್ನು ಬದಲಿಸುತ್ತಿದ್ದು, ಸುಳ್ಳು ಪತ್ತೆಗಾಗಿ ಪರೀಕ್ಷೆ (ಪಾಲಿಗ್ರಾಫ್) ನಡೆಸಲಾಗುತ್ತಿದೆ. ಇಂದು ಕೂಡ ಹಂತಕನಿಗೆ ದೆಹಲಿಯ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಿ ವಾಪಸ್​ ಕರೆದೊಯ್ಯುತ್ತಿದ್ದಾಗ ಇಬ್ಬರು ವ್ಯಕ್ತಿಗಳು ಏಕಾಏಕಿ ಪೊಲೀಸ್​ ವ್ಯಾನ್​ ಮೇಲೆ ದಾಳಿ ಮಾಡಿದ್ದಾರೆ.

  • #WATCH | Police van carrying Shradhha murder accused Aftab Poonawalla attacked by at least 2 men carrying swords who claim to be from Hindu Sena, outside FSL office in Delhi pic.twitter.com/Bpx4WCvqXs

    — ANI (@ANI) November 28, 2022 " class="align-text-top noRightClick twitterSection" data=" ">

ಕೈಯಲ್ಲಿ ಕತ್ತಿ ಹಿಡಿದುಕೊಂಡಿದ್ದ ಅವರು, ಹಂತಕನನ್ನೂ ಕೊಚ್ಚಿ ಹಾಕಿ ಎಂದು ಘೋಷಣೆ ಕೂಗುತ್ತಾ ವ್ಯಾನ್​ ಮೇಲೆ ಮುಗಿಬಿದ್ದಿದ್ದಾರೆ. ತಕ್ಷಣವೇ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ. ಇನ್ನು ಶ್ರದ್ಧಾ ಹಂತಕನಿಗೆ ಪಾಲಿಗ್ರಾಫ್​ ಪರೀಕ್ಷೆ ನಡೆಸಲಾಗುತ್ತಿದೆ. ನಾಳೆಯೂ ಪರೀಕ್ಷೆಯನ್ನು ಮುಂದುವರಿಸಲಾಗುವುದು. ಪರೀಕ್ಷೆಗಳು ಪೂರ್ಣಗೊಂಡ ನಂತರ ನಾರ್ಕೋ ಪರೀಕ್ಷೆಯನ್ನು ನಡೆಸಲಾಗುತ್ತದೆ ಎಂದು ಎಫ್‌ಎಸ್‌ಎಲ್ ಸಹಾಯಕ ನಿರ್ದೇಶಕ ಸಂಜೀವ್ ಗುಪ್ತಾ ತಿಳಿಸಿದ್ದಾರೆ.

ಇದನ್ನೂ ಓದಿ: ಶ್ರದ್ಧಾ ​ಹತ್ಯೆ ಪ್ರಕರಣ: ಅಫ್ತಾಬ್‌ಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದವ ಸೆರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.