ETV Bharat / bharat

ರೋಹಿಣಿ ಕೋರ್ಟ್​ನಲ್ಲಿ ಮತ್ತೆ ಗುಂಡಿನ ಸದ್ದು.. ವಕೀಲರ ಮೇಲೆ ಗುಂಡು ಹಾರಿಸಿದ ತಪಸಣಾ ಅಧಿಕಾರಿ! - ದೆಹಲಿ ಕೋರ್ಟ್​ನಲ್ಲಿ ವಕೀಲರ ಮೇಲೆ ಗುಂಡು ತಪಸಣಾ ಹಾರಿಸಿದ ಅಧಿಕಾರಿ

ದೆಹಲಿಯ ರೋಹಿಣಿ ನ್ಯಾಯಾಲಯದಲ್ಲಿ ಮತ್ತೊಮ್ಮೆ ಗುಂಡಿನ ಸದ್ದು ಕೇಳಿ ಬಂದಿದೆ. ಪ್ರವೇಶ ದ್ವಾರದಲ್ಲಿ ಭದ್ರತಾ ತಪಾಸಣೆಯ ಅಧಿಕಾರಿ ಜೊತೆ ವಾಗ್ವಾದ ನಡೆದಿದ್ದು, ಈ ವೇಳೆ ವಕೀಲರ ಮೇಲೆ ಗುಂಡು ಹಾರಿಸಲಾಗಿದೆ..

Shot fired again in Rohini court  Firing took place during security checking in entry  Delhi crime news  ದೆಹಲಿಯ ರೋಹಿಣಿ ಕೋರ್ಟ್​ನಲ್ಲಿ ಮತ್ತೆ ಗುಂಡಿನ ಸದ್ದು  ದೆಹಲಿ ಕೋರ್ಟ್​ನಲ್ಲಿ ವಕೀಲರ ಮೇಲೆ ಗುಂಡು ತಪಸಣಾ ಹಾರಿಸಿದ ಅಧಿಕಾರಿ  ದೆಹಲಿ ಅಪರಾಧ ಸುದ್ದಿ
ರೋಹಿಣಿ ಕೋರ್ಟ್​ನಲ್ಲಿ ಮತ್ತೆ ಗುಂಡಿನ ಸದ್ದು
author img

By

Published : Apr 22, 2022, 11:26 AM IST

ನವದೆಹಲಿ : ದೆಹಲಿಯ ರೋಹಿಣಿ ಕೋರ್ಟ್ ಆವರಣದಲ್ಲಿ ಮತ್ತೊಮ್ಮೆ ಗುಂಡಿನ ಸದ್ದು ಕೇಳಿ ಬಂದಿದೆ. ಪ್ರವೇಶ ದ್ವಾರದಲ್ಲಿ ಭದ್ರತಾ ತಪಾಸಣೆ ವೇಳೆ ಅಧಿಕಾರಿ ಹಾಗೂ ವಕೀಲರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವಿವಾದದಿಂದಾಗಿ ವಕೀಲರ ಮೇಲೆ ಗುಂಡು ಹಾರಿಸಲಾಗಿದೆ. ಆದರೆ, ಈ ದಾಳಿಯಲ್ಲಿ ವಕೀಲರು ಸ್ವಲ್ಪದರಲ್ಲೇ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಇದಕ್ಕೂ ಮುನ್ನ ಅಂದ್ರೆ 2021ರ ಸೆಪ್ಟಂಬರ್​ ಕೊನೆ ವಾರದಲ್ಲಿ ಇಲ್ಲಿನ ಕೋರ್ಟ್​ ಆವರಣದಲ್ಲಿ ಶೂಟೌಟ್ ನಡೆದಿತ್ತು. ಈ ಗುಂಡಿನ ಸಂಘರ್ಷದಲ್ಲಿ ಮೂವರು ಬಲಿಯಾಗಿದ್ದು, ಆರು ಜನ ಗಾಯಗೊಂಡಿದ್ದರು. ಗುಂಡಿನ ದಾಳಿಯಲ್ಲಿ ಇಬ್ಬರು ಶೂಟರ್​ಗಳನ್ನು ಸ್ಥಳೀಯ ಪೊಲೀಸರು ಹೊಡೆದುರುಳಿಸಿದ್ದರು. ಗ್ಯಾಂಗ್​ಸ್ಟರ್​ ಜಿತೇಂದ್ರ ಗೋಗಿ ಸೇರಿ ಮೂವರು ಮೃತಪಟ್ಟಿದ್ದರು.

ಓದಿ: ದೆಹಲಿಯ ರೋಹಿಣಿ ಕೋರ್ಟ್​ ಆವರಣದಲ್ಲಿ ಫೈರಿಂಗ್​!

ಈಗ ನಡೆದ ಗುಂಡಿನ ದಾಳಿಯಿಂದಾಗಿ ದೆಹಲಿಯ ಜನ ಬೆಚ್ಚಿಬಿದ್ದಿದ್ದಾರೆ. ಈ ಘಟನೆ ಬಗ್ಗೆ ಪೊಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.