ETV Bharat / bharat

ಗುಜರಾತ್​ನಲ್ಲಿ ಅಂಗಡಿ ಮಾಲೀಕನಿಗೆ ರಾಡ್​ನಿಂದ ಹಲ್ಲೆ ಪ್ರಕರಣ: ಆರೋಪಿಗೆ 10 ವರ್ಷ ಕಠಿಣ ಶಿಕ್ಷೆ - ಹ್ಯಾಂಡ್​ ಫ್ರೀ ಡಿವೈಸ್​ ನೀಡಲಿಲ್ಲ ಎಂಬ ಕ್ಷುಲಕ ಕಾರಣ

2017ರಲ್ಲಿ ನಡೆದ ಪ್ರಕರಣ ಸಂಬಂಧ ಗುಜರಾತ್​ನ ಹೆಚ್ಚುವರಿ ಸೆಷನ್​ ನ್ಯಾಯಾಲಯ ಈ ತೀರ್ಪು ನೀಡಿದೆ.

ಗುಜರಾತ್​ನಲ್ಲಿ ಅಂಗಡಿ ಮಾಲೀಕನಿಗೆ ರಾಡ್​ನಿಂದ ಹಲ್ಲೆ; ಆರೋಪಿಗೆ 10 ವರ್ಷ ಕಠಿಣ ಶಿಕ್ಷೆ
shop-owner-attacked-with-rod-in-gujarat-the-accused-was-sentenced-to-10-years-rigorous-imprisonment
author img

By

Published : Jan 21, 2023, 1:19 PM IST

ಅಹಮದಾಬಾದ್( ಗುಜರಾತ್​)​: 2017ರಲ್ಲಿ ಅಂಗಡಿ ಮಾಲೀಕ ಕೊಲೆ ಯತ್ನ ಪ್ರಕರಣದಲ್ಲಿ ಆರೋಪಿಗೆ 10 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ಹೆಚ್ಚುವರಿ ಸೆಷನ್ಸ್​ ನ್ಯಾಯಾಲಯ ತೀರ್ಪು ನೀಡಿದೆ. ಹ್ಯಾಂಡ್​ ಫ್ರೀ ಡಿವೈಸ್​ ನೀಡಲಿಲ್ಲ ಎಂಬ ಕ್ಷುಲಕ ಕಾರಣಕ್ಕೆ ಅಪರಾಧಿ ಜಗದೀಶ್​ ಛನಬಾಯಿ ಪರ್ಮಾರ್​​, ಅಂಗಡಿ ಮಾಲೀಕ ಅನಿಲ್​ ರಾಮ್​ತೇಜ್​ ಚವರ್ಸಿಯಾಗೆ ಕಬ್ಬಿಣದ ರಾಡ್​ನಿಂದ ಹೊಡೆದು ಹಲ್ಲೆ ಮಾಡಿದ್ದ.

ಈ ಪ್ರಕರಣದಲ್ಲಿ ಗಂಭೀರ ಅಪರಾಧ ನಡೆದಿರುವುದನ್ನು ನ್ಯಾಯಾಲಯ ಗಮನಿಸಿ, ಇಂತಹ ಅಪರಾಧವನ್ನು ಲಘುವಾಗಿ ಪರಿಗಣಿಸಲಾಗದು, ನ್ಯಾಯದ ಹಿತದೃಷ್ಟಿಯಿಂದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಿ ಸಮಾಜಕ್ಕೆ ಮಾದರಿಯಾಗಬೇಕು ಎಂದು ಅಪರಾಧಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಿದೆ.

ಏನಿದು ಪ್ರಕರಣ?: 2017ರ ಫೆ. 24ರಂದು ನವ ವದ್ಜ್​ನಲ್ಲಿನ ಅಂಗಡಿ ಮಾಲೀಕನಾದ ಅನಿಲ್​​ ರಾಮ್​ತೇಜ್​ ಛವರ್ಸಿಯಾ ಮೇಲೆ ಜಗದೀಶ್​ ಛನಬಾಯಿ ಪರ್ಮಾರ್ ಎಂಬ ರಾಡ್​ನಿಂದ ಬಲವಾಗಿ ಒಡೆದಿದ್ದು, ಇದರಿಂದ ಆತ ಗಂಭೀರವಾಗಿ ಗಾಯಗೊಂಡಿದ್ದ. ಈ ಪ್ರಕರಣ ಸಂಬಂದ ವಜ್ರ ಪೊಲೀಸ್​ ಠಾಣೆಯಲ್ಲಿ ಕೊಲೆ ಯತ್ನ ಆರೋಪದ ಅಡಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣ ಸಂಬಂಧ ಆರೋಪಿ ಪರ್ಮಾರ್​ನನ್ನು ಪೊಲೀಸರು ಬಂಧಿಸಿದ್ದರು.

ಈ ಪ್ರಕರಣದ ವೇಳೆ ಪಬ್ಲಿಕ್ ಪ್ರಾಸಿಕ್ಯೂಟರ್ ದಿಲೀಪ್‌ಸಿನ್ಹ್ ಠಾಕೂರ್ ಅವರು ಅನೇಕ ಸಾಕ್ಷಿಗಳನ್ನು ವಿಚಾರಣೆಗೊಳಪಡಿಸಿದರು. ಜೊತೆಗೆ ಹಲವು ಸಾಕ್ಷ್ಯಗಳನ್ನು ಹಾಜರುಪಡಿಸಿದರು. ಈ ವೇಳೆ ಆರೋಪಿ ಉದ್ದೇಶಪೂರ್ವಕವಾಗಿ ತಲೆಗೆ ಕಬ್ಬಿಣದ ರಾಡ್‌ನಿಂದ ಹೊಡೆದು ಕೊಲ್ಲುವ ಪ್ರಯತ್ನ ನಡೆದಿರುವುದು ಸಾಬೀತಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಇದಕ್ಕೂ ಮುಂದೆ ಕೂಡ ಇದೇ ರೀತಿಯ ಅನೇಕ ಪ್ರಕರಣಗಳನ್ನು ಪೊಲೀಸರು ತನಿಖೆ ನಡೆಸಿದ್ದರು. ಆದರೆ, ನವ ವದ್ಜ್​ ಪ್ರಕರಣ ಪೊಲೀಸರನ್ನು ಬೆಚ್ಚಿ ಬೀಳಿಸಿತ್ತು. ಆರೋಪಿಯ ಕ್ರೌರ್ಯಕ್ಕೆ ಸಾಕ್ಷಿಯಾಗಿತ್ತು. ಈ ಹಿನ್ನೆಲೆ ಆರೋಪಿ ಪರ್ಮಾರ್​ ನನ್ನು ತನಿಖೆಗೆ ಒಳಪಡಿಸಲಾಗಿತ್ತು. ನಗರದಲ್ಲಿ ಆಗಿರುವ ಮೊದಲ ಕೊಲೆ ಯತ್ನ ಪ್ರಕರಣ ಇದು ಆಗಿಲ್ಲ. ಇದಕ್ಕಿಂತ ಮೊದಲು ಅನೇಕ ಕೊಲೆಗಳು ಈ ಸ್ಥಳದಲ್ಲಿ ನಡೆದಿದೆ. ಗ್ರಾಹಕರ ದೌರ್ಜನ್ಯವನ್ನು ನಿಲ್ಲಿಸಬೇಕು ಎಂಬ ಉದ್ದೇಶದಿಂದ ಕಳೆದ ಕೆಲವು ದಿನಗಳಿಂದ ಪೊಲೀಸರು ವಿಶೇಷ ಕಾರ್ಯಕ್ಕೆ ಮುಂದಾಗಿದ್ದಾರೆ. ಈ ಪ್ರಕರಣದಲ್ಲಿ ಗ್ರಾಹಕನ ದೌರ್ಜನ್ಯ ಗಂಭೀರ ಮಟ್ಟದಲ್ಲಿರುವುದನ್ನು ಗಮನಿಸಿ ಕಾನೂನು ಕ್ರಮಕ್ಕೆ ಮುಂದಾಗಲಾಗಿದೆ.

ಹರಿಯಾಣದಲ್ಲಿ ಯುವತಿಯ ಮೇಲೆ ದೌರ್ಜನ್ಯ: ಬಲ್ಬಗ್ರಾಹ್​: ಯುವತಿಯನ್ನ ಕಿಡ್ನಾಪ್​ ಮಾಡಲು ವಿಫಲವಾದ ಹಿನ್ನಲೆಯಲ್ಲಿ ಯುವಕನೊಬ್ಬ ಯುವತಿಯನ್ನು ಕಾರಿನ ಕೆಳಗೆ ಎಳೆದೊಯ್ದಿಲು ಯತ್ನಿಸಿರುವ ಘಟನೆ ನಡೆದಿದೆ. ಬ್ಲಬಗ್ರಾಹ್​ ಜಿಲ್ಲೆಯ ಟಿಗೋನ್​ ಗ್ರಾಮದಲ್ಲಿ ಕಾಲೇಜಿನಿಂದ ಮನೆ ಮರಳುತ್ತಿದ್ದ ಯುವತಿಯನ್ನು ಕಿಡ್ನಾಪ್​ ಮಾಡುವ ಪ್ಲಾನ್​ ಮಾಡಲಾಗಿತ್ತು . ಈ ದೃಶ್ಯಗಳು ಸಿಸಿಟಿವಿಯಲ್ಲೂ ಕೂಡ ದಾಖಲಾಗಿದೆ. ಪ್ರಕರಣ ಸಂಬಂಧ ಟೈಗೊನ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಜವಾಲಿ ಗ್ರಾಮದ ನಿವಾಸಿ ವಿದ್ಯಾರ್ಥಿ ಮೇಲೆ ಈ ದೌರ್ಜನ್ಯ ನಡೆಸಲಾಗಿದೆ. ಈಕೆ ಅದೇ ಪ್ರದೇಶದ ಸರ್ಕಾರಿ ಕಾಲೇಜಿನಲ್ಲಿ ಎಂಎ ಅಂತಿಮ ವರ್ಷ ಅಧ್ಯಯನ ಮಾಡುತ್ತಿದ್ದರು.

ಇದನ್ನೂ ಓದಿ: 'ದರ್ಶನ್​​​ಗೆ​ ಭಯಪಡಿಸಲು ನಾನು ಕಾರು ಚಲಾಯಿಸಿದೆ..' ಪೊಲೀಸರಿಗೆ ಪ್ರಿಯಾಂಕಾ ಹೇಳಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.