ಪಲಾಮು(ಜಾರ್ಖಂಡ್): ಕೇವಲ 10 ರೂಪಾಯಿಗೋಸ್ಕರ ಚೈನ್‌ಪುರ ಶೂಟೌಟ್ ನಡೆದಿದ್ದು ಇಬ್ಬರ ಸ್ಥಿತಿ ಚಿಂತಾಜನಕವಾಗಿರುವ ಘಟನೆ ಜಾರ್ಖಂಡ್ನ ಪಲಾಮು ಎಂಬಲ್ಲಿ ನಡೆದಿದೆ. ಶುಕ್ರವಾರ ಸಂಜೆ ಚೈನ್‌ಪುರ ಮಾರುಕಟ್ಟೆಯಲ್ಲಿರುವ ಮದ್ಯದಂಗಡಿಯಲ್ಲಿ ಪರಸ್ಪರ ವಾಗ್ವಾದದಲ್ಲಿ ಗುಂಡಿನ ದಾಳಿ ನಡೆದಿದೆ. ಈ ಗುಂಡಿನ ದಾಳಿಯಲ್ಲಿ ರಾಜು ಆರ್ಯ ಎಂಬುವವರಿಗೆ ತಲೆಗೆ ಗುಂಡು ತಗಲಿದೆ. ಇವರ ಜೊತೆ ಸಂಬಂಧಿ ರಂಜಿತ್ ಆರ್ಯ ಎಂಬುವವರಿಗೂ ಕೂಡ ಹೊಟ್ಟೆಗೆ ಎರಡು ಗುಂಡುಗಳು ತಗುಲಿವೆ. ಈ ಪ್ರಕರಣಕ್ಕೆ ಜಾರ್ಖಂಡ್ ಪೊಲೀಸರು ವಿಚಾರಣೆ ನಡೆಸಿದ್ದು, ವಿಚಾರಣೆ ವೇಳೆ ಪೊಲೀಸರಿಗೆ ಹಲವು ಮಹತ್ವದ ಮಾಹಿತಿ ಸಿಕ್ಕಿದೆ. ಈ ಬಗ್ಗೆ ಚೈನ್‌ಪುರ ಪೊಲೀಸ್ ಠಾಣೆ ಪ್ರಭಾರಿ ಉದಯ್ ಕುಮಾರ್ ಗುಪ್ತಾ ಮಾತನಾಡಿ, ಪ್ರಕರಣದ ಆರೋಪಿಗಳನ್ನು ಬಂಧಿಸಲು ಪೊಲೀಸರು ಹಲವು ಪ್ರದೇಶಗಳಲ್ಲಿ ಹುಡುಕಾಟ ನಡೆಸಿದ್ದೇವೆ ಎಂದಿದ್ದಾರೆ.
ಮುದ್ರಣ ದರಕ್ಕಿಂತ 10 ರೂಪಾಯಿ ಹೆಚ್ಚಿಗೆ ಬೇಡಿಕೆ ಇಟ್ಟಿದ್ದಕ್ಕೆ ಶುರುವಾದ ವಿವಾದ: ಇಡೀ ಘಟನೆ ನಡೆದಿರುವುದು ಕೇವಲ 10 ರೂಪಾಯಿಗಾಗಿ, ಸೋನು ಎಂಬ ಯುವಕ ಚೈನ್‌ಪುರ ಮಾರುಕಟ್ಟೆಗೆ ಮದ್ಯ ಖರೀದಿಸಲು ತೆರಳಿದ್ದ, ಸೋನು ಮತ್ತು ಆತನ ಸ್ನೇಹಿತರು ಖರೀದಿಸಿದ್ದ ಮದ್ಯದ ಪ್ರಿಂಟ್ ದರ 170 ರೂ. ಆದರೆ, ಮಧ್ಯದ ಅಂಗಡಿಯ ಸೇಲ್ಸ್ ಮ್ಯಾನ್ 180 ರೂಗೆ ಮಾರಾಟ ಮಾಡಿದ್ದ, ಸೋನು ಅವರು ಸೇಲ್ಸ್ ಮ್ಯಾನ್ ಜೊತೆ ಪ್ರಿಂಟ್ ರೇಟ್ ವಿಚಾರವಾಗಿ ಜಗಳ ಮಾಡಿಕೊಂಡಿದ್ದರು.
ವಿವಾದದ ಮಧ್ಯೆ ರಾಜು ಆರ್ಯ ಮತ್ತು ರಂಜಿತ್ ಆರ್ಯ ಸೋನುಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ನಂತರ ಸೋನು ಮನೆಗೆ ಹೋಗಿ ತನ್ನ ಸ್ನೇಹಿತರೊಂದಿಗೆ ಗನ್ ತರಲು ತೆರಳಿದ್ದಾನೆ. ವಾಪಸ್ ಬಂದ ಸೋನು, ರಾಜು ಆರ್ಯ ಮತ್ತು ರಂಜಿತ್ ಆರ್ಯ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದಾನೆ. ಈ ಗುಂಡಿನ ದಾಳಿಯಲ್ಲಿ ರಾಜು ಆರ್ಯ ಅವರ ತಲೆಗೆ ಗುಂಡು ತಗುಲಿದೆ. ರಂಜಿತಾ ಆರ್ಯ ಅವರ ಹೊಟ್ಟೆಗೆ ಗುಂಡು ಹೊಕ್ಕಿದೆ. ಇಬ್ಬರಿಗೂ ಗುಂಡು ಹಾರಿಸಿ ಸೋನು ಮತ್ತು ಅವರ ಸ್ನೇಹಿತರು ಗಾಳಿಯಲ್ಲಿ ಗುಂಡು ಹಾರಿಸಿ ಬಾರ್ನಿಂದ ಪರಾರಿಯಾದರು.
ಗೋಲಿಬಾರ್ ವಿರೋಧಿಸಿ ಮಾರುಕಟ್ಟೆ ಬಂದ್ ಮಾಡಿದ ವ್ಯಾಪಾರಸ್ಥರು: ಪಲಾಮುವಿನ ಚೈನ್ ಪುರ ಫೈರಿಂಗ್ ವಿರೋಧಿಸಿ ವ್ಯಾಪಾರಸ್ಥರು ಮಾರುಕಟ್ಟೆ ಬಂದ್ ಮಾಡಿದ್ದಾರೆ. ಗುಂಡು ಹಾರಿಸಿದ ಆರೋಪಿಗಳನ್ನು ಬಂಧಿಸುವಂತೆ ಅಂಗಡಿಯ ಮಾಲೀಕರು ಆಗ್ರಹಿಸಿದ್ದಾರೆ. ಅದೇ ಸಮಯದಲ್ಲಿ, ಶೂಟೌಟ್‌ನಲ್ಲಿ ಗಾಯಗೊಂಡ ಇಬ್ಬರು ಯುವಕರ ಸ್ಥಿತಿ ಚಿಂತಾಜನಕವಾಗಿದ್ದು, ಗಾಯಗೊಂಡ ಯುವಕ ರಾಜು ಆರ್ಯ ಅವರ ತಲೆಗೆ ಗುಂಡು ಹಾರಿಸಲಾಗಿದ್ದು, ಪಲಾಮುವಿನ ಖಾಸಗಿ ನರ್ಸಿಂಗ್ ಹೋಮ್‌ನಲ್ಲಿ ಬುಲೆಟ್ ಹೊರತೆಗೆದು ಅವರನ್ನು ನಿಗಾ ಘಟಕದಲ್ಲಿ ಇರಿಸಲಾಗಿದೆ. ಗಾಯಗೊಂಡಿರುವ ರಂಜಿತ್ ಅವರನ್ನು ಚಿಕಿತ್ಸೆಗಾಗಿ ರಿಮ್ಸ್ ಆಸ್ಪತ್ರೆಗೆ ಕಳುಹಿಸಲಾಗಿದೆ.
ಶೂಟೌಟ್‌ನ ಆರೋಪಿ ಸೋನು ಸೋನಿ ಪಲಮುದಲ್ಲಿ ಹಲವಾರು ಅಪರಾಧ ಘಟನೆಗಳಲ್ಲಿ ಭಾಗಿಯಾಗಿದ್ದಾನೆ. ಸೋನು ಅವರು ಜಾರ್ಖಂಡ್ ಮತ್ತು ಬಿಹಾರದಲ್ಲಿ ರಾಜ್ಯದಲ್ಲಿ ಆಭರಣ ದರೋಡೆ ಘಟನೆಗಳ ಆರೋಪಿಯಾಗಿದ್ದು, ಕೆಲವೇ ತಿಂಗಳ ಹಿಂದೆ ಜೈಲಿನಿಂದ ಹೊರಬಂದಿದ್ದಾನೆ ಎಂದು ಪೊಲೀಸ್ ವಿಚಾರಣೆಯಲ್ಲಿ ತಿಳಿದು ಬಂದಿದೆ.
ಇದನ್ನೂ ಓದಿ: ಆರ್ಥಿಕ ದಿವಾಳಿ ಸನಿಹದಲ್ಲಿ ನೆರೆಯ ಪಾಕಿಸ್ತಾನ.. ಶ್ರೀಲಂಕಾಗೆ ಬಂದ ಪರಿಸ್ಥಿತಿ ಪಾಕಿಸ್ತಾನಕ್ಕೂ ಬರಬಹುದು ವಿಶ್ಲೇಷಕರ ಸುಳಿವು..