ETV Bharat / bharat

ನೋಯ್ಡಾದಲ್ಲಿ ದೇಗುಲಕ್ಕೆ ನುಗ್ಗಿ ಶಿವಲಿಂಗ ವಿರೂಪ: ದುಷ್ಕರ್ಮಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ

author img

By

Published : Mar 21, 2022, 8:12 PM IST

ಗ್ರಾಮದ ಜನರ ಮಧ್ಯೆ ದ್ವೇಷ ಭಾವನೆ ಹುಟ್ಟಿಸುವ ಉದ್ದೇಶದಿಂದ ಶಿವನ ದೇವಸ್ಥಾನಕ್ಕೆ ತೀವ್ರ ಸ್ವರೂಪದಲ್ಲಿ ಹಾನಿ ಉಂಟು ಮಾಡಿರುವ ದುಷ್ಕರ್ಮಿಗಳು, ಶಿವಲಿಂಗವನ್ನು ವಿರೂಪಗೊಳಿಸಿದ್ದಾರೆ.

Noida temple vandalized in Noida
Noida temple vandalized in Noida

ನೋಯ್ಡಾ(ಉತ್ತರ ಪ್ರದೇಶ): ಗ್ರಾಮಸ್ಥರಲ್ಲಿ ದ್ವೇಷ ಭಾವನೆ ಹುಟ್ಟಿಸುವ ಉದ್ದೇಶದಿಂದ ದುಷ್ಕರ್ಮಿಗಳು ಶಿವನ ದೇವಸ್ಥಾನಕ್ಕೆ ಹಾನಿ ಮಾಡಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ.

ನೋಯ್ಡಾದ ಸೆಕ್ಟರ್​​ 63ರ ಬರಹಂಪುರ ಗ್ರಾಮದಲ್ಲಿ ಕಳೆದ ರಾತ್ರಿ ದೇವಸ್ಥಾನದ ಒಳನುಗ್ಗಿ ಶಿವನ ವಿಗ್ರಹ ಹಾಗೂ ಶಿವಲಿಂಗ ವಿರೂಪಗೊಳಿಸಿದ್ದಾರೆ. ಬೆಳಗ್ಗೆ ದೇವಸ್ಥಾನಕ್ಕೆ ಗ್ರಾಮಸ್ಥರು ಭೇಟಿ ನೀಡಿದಾಗ ಘಟನೆ ಬೆಳಕಿಗೆ ಬಂದಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: 'ಪದ್ಮಶ್ರೀ' ಪಡೆದು ರಾಷ್ಟ್ರಪತಿ, ಪ್ರಧಾನಿ ಪಾದಗಳಿಗೆ ವಂದಿಸಿದ 125 ವರ್ಷದ ಸ್ವಾಮಿ ಶಿವಾನಂದರು!: ವಿಡಿಯೋ

ದೇವಸ್ಥಾನದೊಳಗೆ ರಕ್ತದ ಕಲೆ ಸಹ ಪತ್ತೆಯಾಗಿದ್ದು, ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿರುವ ಪೊಲೀಸರು ಸ್ಥಳೀಯ ಸಿಸಿಟಿವಿ ದೃಶ್ಯಾವಳಿ ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳಿಗೆ ಶೋಧಕಾರ್ಯ ಮುಂದುವರೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.