ETV Bharat / bharat

JNU ಮಾಜಿ ವಿದ್ಯಾರ್ಥಿನಿ ಶೆಹ್ಲಾ ರಶೀದ್‌ ವಿರುದ್ಧ ತಂದೆಯಿಂದಲೇ ದೂರು

ಜವಾಹರಲಾಲ್ ನೆಹರು ವಿವಿಯ (ಜೆಎನ್​ಯು) ಮಾಜಿ ವಿದ್ಯಾರ್ಥಿನಿ ಶೆಹ್ಲಾ ರಶೀದ್ ಅವರ ತಂದೆ ಅಬ್ದುಲ್ ರಶೀದ್ ಶೋರಾ, ತಮ್ಮ ಮಗಳು ಶೆಹ್ಲಾಲಿಂದಲೇ ತಮಗೆ ಜೀವ ಬೆದರಿಕೆ ಇದೆ ಎಂದು ಆರೋಪಿಸಿ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಿದ್ದಾರೆ.

Shehla Rashid's father alleges threat to life from her, she rejects claims
ಮಗಳಿಂದಲೇ ಜೀವ ಬೆದರಿಕೆ ಎಂದು ಆರೋಪ
author img

By

Published : Dec 1, 2020, 2:48 PM IST

ಜಮ್ಮು -ಕಾಶ್ಮೀರ: ಜೆಎನ್​ಯು ಮಾಜಿ ವಿದ್ಯಾರ್ಥಿನಿ ಶೆಹ್ಲಾ ರಶೀದ್ ಅವರ ತಂದೆ ಅಬ್ದುಲ್ ರಶೀದ್ ಶೋರಾ ತಮ್ಮ ಮಗಳಿಂದಲೇ ತಮಗೆ ಜೀವ ಬೆದರಿಕೆ ಇದೆ ಎಂದು ಆರೋಪಿಸಿ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕರಿಗೆ ಲಿಖಿತ ದೂರು ನೀಡಿದ್ದಾರೆ.

ಮಗಳಿಂದಲೇ ಜೀವ ಬೆದರಿಕೆ ಎಂದು ಆರೋಪ

'ನನ್ನ ಮಗಳು ಶೆಹ್ಲಾ ರಶೀದ್ ನನಗೆ ನಿರಂತರ ಜೀವ ಬೆದರಿಕೆ ಹಾಕುತ್ತಿದ್ದಾಳೆ. ಇದಕ್ಕೆ ನನ್ನ ಹೆಂಡತಿ ಮತ್ತು ಅವರ ಭದ್ರತಾ ಸಿಬ್ಬಂದಿ ಸಾಕಿಬ್ ಅಹ್ಮದ್ ಅವರ ಬೆಂಬಲವಿದೆ' ಎಂದು ಶೋರಾ ಪ್ರೆಸ್ ಕ್ಲಬ್ ಜಮ್ಮುವಿನಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡುತ್ತಾ ಆರೋಪಿಸಿದರು.

'ತನ್ನ ಜೀವನದ ರಕ್ಷಣೆಗಾಗಿ ತಾನು ಜಮ್ಮುವಿಗೆ ಸ್ಥಳಾಂತರಗೊಳ್ಳಬೇಕಾಯಿತು ಎಂದು ಹೇಳಿದ ಶೋರಾ, 2017 ರಲ್ಲಿ ಶೆಹ್ಲಾ ಇದ್ದಕ್ಕಿದ್ದಂತೆ ಕಾಶ್ಮೀರ ರಾಜಕೀಯಕ್ಕೆ ಜಿಗಿದಾಗ ಜೀವ ಬೆದರಿಕೆಗಳು ಬರುವುದಕ್ಕೆ ಆರಂಭವಾಯ್ತು' ಎಂದು ತಿಳಿಸಿದ್ದಾರೆ.

Shehla Rashid's father alleges threat to life from her, she rejects claims
ದೂರು ಪ್ರತಿ

ಇನ್ನು ದೂರಿನಲ್ಲಿ ನಮ್ಮ ಮನೆಯಲ್ಲಿಯೇ ದೇಶ ವಿರೋಧಿ ಚಟುವಟಿಕೆಗಳು ನಡೆಯುತ್ತಿವೆ. ಈ ಚಟುವಟಿಕೆಯನ್ನು ನಾನು ವಿರೋಧಿಸಿದ್ದಕ್ಕೆ ನನ್ನ ಮಗಳು ಹಾಗೂ ಅವಳ ಭದ್ರತಾ ಸಿಬ್ಬಂದಿ, ಜೊತೆಗೆ ಕುಟುಂಬಸ್ಥರು ನನಗೆ ಜೀವ ಬೆದರಿಕೆ ಹಾಕಿದ್ದಾರೆ. ಹೀಗಾಗಿ ರಕ್ಷಣೆ ನೀಡುವಂತೆ ಪತ್ರದಲ್ಲಿ ರಶೀದ್‌ ಮನವಿ ಮಾಡಿದ್ದಾರೆ.

ಇದರ ಜೊತೆಗೆ ಶೆಹ್ಲಾ ರಶೀದ್‌, ಈಗಾಗಲೇ ಯುಎಪಿಎ ಅಡಿ ಬಂಧನವಾಗಿರುವ ಉದ್ಯಮಿ ಜಹೂರ್‌ ವಟಾಲಿ ಹಾಗೂ ಮಾಜಿ ಶಾಸಕ ರಶೀದ್‌ನಿಂದ ಜಮ್ಮು-ಕಾಶ್ಮೀರದ ರಾಜಕೀಯಕ್ಕೆ ಕಾಲಿಡಲು 3 ಕೋಟಿ ರೂ ಹಣ ಪಡೆದಿದ್ದಾಳೆ ಎಂದು ಉಲ್ಲೇಖಿಸಿದ್ದಾರೆ.

ಅಲ್ಲದೇ ಶೆಹ್ಲಾ, ಆಕೆಯ ತಾಯಿ, ಕುಟುಂಬಸ್ಥರು ಎಲ್ಲರೂ ಅಕ್ರಮ ಹಣ ಹೂಡಿಕೆಗಳಲ್ಲಿ ಈಗಾಗಲೇ ಬಂಧನವಾಗಿರುವ ವಟಾಲಿ ಹಾಗೂ ರಶೀದ್‌ ಜೊತೆ ನಂಟು ನಡೆಸಿದ್ದಾರೆ. ಈ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು. ಅವರ ಇ-ಮೇಲ್‌, ಬ್ಯಾಂಕ್‌ ಡಿಟೇಲ್ಸ್‌ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ. ನನ್ನ ವಿರುದ್ಧ ಪತ್ನಿ ಕೌಟುಂಬಿಕ ಹಿಂಸಾಚಾರದಿಂದ ಮಹಿಳೆಯರ ರಕ್ಷಣೆ ಕಾಯ್ದೆಯ ಅಡಿ ಕೇಸ್‌ ಹಾಕಿದ್ದಾಳೆ. ಪ್ಲಾನ್​​ ಮಾಡಿ ನನ್ನನ್ನು ಮನೆಯಿಂದ ಹೊರ ಹಾಕಿದ್ದಾಳೆ. ಸದ್ಯ ನಾನು ಕೂಡ ಕೋರ್ಟ್‌ನಲ್ಲಿ ಕೇಸ್​ ಹಾಕಿದ್ದೇನೆ. ಸತ್ಯಾಂಶ ಹೊರಬರಲಿದೆ ಎಂದು ಶೆಹ್ಲಾ ತಂದೆ ಅಬ್ದುಲ್‌ ರಷೀದ್‌ ಹೇಳಿದ್ದಾರೆ.

ತಂದೆ ತಮ್ಮ ವಿರುದ್ಧ ನೀಡಿರುವ ದೂರಿನ ಕುರಿತು ಪ್ರತಿಕ್ರಿಯೆ ನೀಡಿರುವ ಶೆಹ್ಲಾ‌, ನನ್ನ ತಂದೆಯು ತಾಯಿ ಮತ್ತು ಸಹೋದರಿ ಹಾಗು ನನ್ನ ಮೇಲೆ ಸಂಪೂರ್ಣವಾಗಿ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ. ಇದು ಕೌಟುಂಬಿಕ ವಿಚಾರವಾಗಿದ್ದು, ಸುಳ್ಳು ಹೇಳುತ್ತಿರುವ ತಂದೆ ರಶೀದ್ ಅವರನ್ನು ನಂಬಬೇಡಿ ಎಂದು ಟ್ವೀಟ್‌ ಮಾಡಿದ್ದಾರೆ.

  • 1) Many of you must have come across a video of my biological father making wild allegations against me and my mum & sis. To keep it short and straight, he's a wife-beater and an abusive, depraved man. We finally decided to act against him, and this stunt is a reaction to that. pic.twitter.com/SuIn450mo2

    — Shehla Rashid (@Shehla_Rashid) November 30, 2020 " class="align-text-top noRightClick twitterSection" data=" ">

ETV Bharat Logo

Copyright © 2024 Ushodaya Enterprises Pvt. Ltd., All Rights Reserved.