ಭೋಪಾಲ್(ಮಧ್ಯಪ್ರದೇಶ): ನದಿಗೆ ಸ್ನಾನ ಮಾಡಲು ತೆರಳಿದ್ದ ಮಕ್ಕಳಿಗೆ ಇಲ್ಲಿನ ಪೊಲೀಸರು ವಿಚಿತ್ರ ಶಿಕ್ಷೆ ನೀಡಿದ್ದು, ಅದರ ವಿಡಿಯೋ ಇದೀಗ ವೈರಲ್ ಆಗಿದೆ. ಮಧ್ಯಪ್ರದೇಶದ ಭೋಪಾಲ್ನಲ್ಲಿ ಈ ಘಟನೆ ನಡೆದಿದೆ.
10 ಮಕ್ಕಳು ಸ್ನಾನ ಮಾಡುವ ಉದ್ದೇಶದಿಂದ ನದಿಗೆ ತೆರಳಿವೆ. ಇದರ ಬಗ್ಗೆ ಕೆಲವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿರುವ ಪೊಲೀಸರು ಮಕ್ಕಳನ್ನ ವಿಚಿತ್ರ ಶಿಕ್ಷೆಗೊಳಪಡಿಸಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ತಾಲೀಮು ತೆಗೆಸಿರುವ ಪೊಲೀಸರು ತದನಂತರ ಪೊಲೀಸ್ ಠಾಣೆಯವರೆಗೆ ಮೆರವಣಿಗೆ ಮಾಡಿಸಿದ್ದಾರೆ. ಸದ್ಯ ಇದರ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿರಿ: ಸೊಸೆ ಉಳಿಸಲು ಹೋಗಿದ್ದೇ ತಪ್ಪಾಯ್ತು.. ವಿದ್ಯುತ್ ಶಾಕ್ ತಗುಲಿ ಸಾವನ್ನಪ್ಪಿದ ಅತ್ತೆ
ಶಿಕ್ಷೆ ನೀಡಿದ್ದು ಯಾಕೆ?
ನದಿಯಲ್ಲಿ ಈಜಲು ತೆರಳುವ ಅನೇಕರು ತಮ್ಮ ಪ್ರಾಣ ಕಳೆದುಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಅಲ್ಲಿಗೆ ತೆರಳದಂತೆ ಮಕ್ಕಳಿಗೆ ನಿಷೇಧ ಹೇರಲಾಗಿದೆ. ಇಷ್ಟಾದರೂ ಕೆಲವರು ಇಲ್ಲಿಗೆ ಹೋಗಿ ಸ್ನಾನ ಮಾಡ್ತಿದ್ದು, ಅದರಿಂದ ಆಕ್ರೋಶಗೊಂಡಿರುವ ಪೊಲೀಸರು ಈ ರೀತಿಯಾಗಿ ನಡೆದುಕೊಂಡಿದ್ದಾಗಿ ತಿಳಿದು ಬಂದಿದೆ.