ETV Bharat / bharat

ಜಮ್ಮು ಕಾಶ್ಮೀರ ಪ್ರದೇಶದ ಜನರಿಗೆ ಅನ್ಯಾಯ ಮಾಡುತ್ತಿದ್ದ ಯುಗ ಕೊನೆಗೊಂಡಿದೆ: ಅಮಿತ್ ಶಾ

ಜಮ್ಮುವಿನ ಜನರನ್ನು ಬದಿಗೊತ್ತುವ ಸಮಯ ಮುಗಿದಿದೆ. ಕೆಲ ಜನರು ಇಲ್ಲಿನ ಅಭಿವೃದ್ಧಿಗೆ ಅಡ್ಡಿಪಡಿಸಲು ಯತ್ನಿಸುತ್ತಿದ್ದಾರೆ. ಆದರೆ, ಎಂದಿಗೂ ಅದು ಸಾಧ್ಯವಾಗಲು ಬಿಡುವುದಿಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ.

ಅಮಿತ್ ಶಾ
ಅಮಿತ್ ಶಾ
author img

By

Published : Oct 24, 2021, 6:52 PM IST

ಶ್ರೀನಗರ(ಜಮ್ಮುಕಾಶ್ಮೀರ): ಕಣಿವೆ ರಾಜ್ಯದ ಯುವಕರು ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕರೆ ಕೊಟ್ಟಿದ್ದಾರೆ. ಜಮ್ಮು-ಕಾಶ್ಮೀರದ ಮೂರು ದಿನದ ಪ್ರವಾಸದಲ್ಲಿರುವ ಅವರು ಇಂದು ರ್ಯಾಲಿಯನ್ನುದ್ದೇಶಿಸಿ ಮಾತನಾಡಿದರು.

ಜಮ್ಮುವಿನ ಭಗವತಿ ನಗರದಲ್ಲಿ ಮಾತನಾಡಿದ ಅವರು, ಈ ಪ್ರದೇಶದ ಜನರಿಗೆ ಅನ್ಯಾಯ ಮಾಡಲಾಗುತ್ತಿದ್ದ ಯುಗ ಕೊನೆಗೊಂಡಿದೆ. ಜಮ್ಮುವಿನ ಜನರನ್ನು ಬದಿಗೊತ್ತುವ ಸಮಯ ಮುಗಿದಿದೆ. ಕೆಲ ಜನರು ಇಲ್ಲಿನ ಅಭಿವೃದ್ಧಿಗೆ ಅಡ್ಡಿಪಡಿಸಲು ಯತ್ನಿಸುತ್ತಿದ್ದಾರೆ. ಆದರೆ, ಎಂದಿಗೂ ಅದು ಸಾಧ್ಯವಾಗಲು ಬಿಡುವುದಿಲ್ಲ. ಕಾಶ್ಮೀರ ಮತ್ತು ಜಮ್ಮು ಎರಡನ್ನೂ ಒಟ್ಟಿಗೆ ಅಭಿವೃದ್ಧಿಪಡಿಸಲಾಗುವುದು ಎಂದು ಶಾ ಭರವಸೆ ನೀಡಿದರು.

ಯುವಕರು ಅಭಿವೃದ್ಧಿ ಪ್ರಕ್ರಿಯೆಯಲ್ಲಿ ತೊಡಗಿಕೊಂಡರೆ ಭಯೋತ್ಪಾದಕರನ್ನು ಮಟ್ಟಹಾಕಬಹುದು. ಈ ಹಿಂದೆ ಕೆಲವರು(ವಿಪಕ್ಷಗಳು) ಜಮ್ಮು-ಕಾಶ್ಮೀರದಲ್ಲಿ ಹೂಡಿಕೆ ತರುವ ಪರಿಕಲ್ಪನೆಯನ್ನು ಅಪಹಾಸ್ಯ ಮಾಡಿದರು. ನಾವು ಹೊಸ ಕೈಗಾರಿಕಾ ನೀತಿಯನ್ನು ಪರಿಚಯಿಸಿದಾಗ ಎಲ್ಲರೂ ಅಣಕಿಸಿದರು. ಆದರೆ, ಪ್ರಧಾನಿ ಮೋದಿಯವರ ಸಾಧನೆಯಿಂದಾಗಿ ಈಗಾಗಲೇ 12 ಸಾವಿರ ಕೋಟಿ ರೂ. ಹೂಡಿಕೆಯಾಗಿದೆ. 2022 ರ ವೇಳೆಗೆ 51 ಸಾವಿರ ಕೋಟಿ ರೂ.ಹೂಡಿಕೆಯಾಗುವ ಸಾಧ್ಯತೆಯಿದೆ ಎಂದರು.

ಹಿಂಸಾಚಾರದಲ್ಲಿ ಯಾವುದೇ ನಾಗರಿಕರು ಸಾಯಬಾರದು. ಜಮ್ಮುಕಾಶ್ಮೀರದಲ್ಲಿ ಭಯೋತ್ಪಾದನೆ ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಶ್ರಮಿಸುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ: ಶಾರುಖ್ ಖಾನ್ ಬಿಜೆಪಿ ಸೇರಿದರೆ ಡ್ರಗ್ಸ್‌ ಸಕ್ಕರೆ ಪುಡಿಯಾಗಿ ಬದಲಾಗುತ್ತದೆ: ಮಹಾರಾಷ್ಟ್ರ ಸಚಿವ ವ್ಯಂಗ್ಯ

ಆರ್ಟಿಕಲ್ 370 ರ ಅಡಿ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ಮತ್ತು ರಾಜ್ಯವನ್ನು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ನಂತರ ಅಮಿತ್ ಶಾ ಅವರ ಮೊದಲ ಭೇಟಿ ಇದಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.