ETV Bharat / bharat

ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳೆಗೆ ಗಲ್ಲು.. ಯಾರು ಈ ಶಬ್ನಮ್​!? ಏನು ಆಕೆ ಎಸಗಿದ ಅಪರಾದ!?

ಲವರ್​ ಜತೆ ಸೇರಿ ತನ್ನ ಕುಟುಂಬದ ಏಳು ಮಂದಿಯ ಕೊಲೆ ಮಾಡಿದ್ದ ಮಹಿಳೆಯೊಬ್ಬಳಿಗೆ ಗಲ್ಲಿಗೇರಿಸಲು ಎಲ್ಲ ರೀತಿಯ ತಯಾರಿ ನಡೆಸಲಾಗಿದ್ದು, ಸ್ವತಂತ್ರ ಭಾರತದ ಇತಿಹಾಸದಲ್ಲಿ ನಡೆಯುತ್ತಿರುವ ಮೊದಲ ಮಹಿಳಾ ಗಲ್ಲುಶಿಕ್ಷೆ ಇದಾಗಿದೆ.

shabnam
shabnam
author img

By

Published : Feb 17, 2021, 3:12 PM IST

ನವದೆಹಲಿ: ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬಳನ್ನು ಗಲ್ಲಿಗೇರಿಸಲಾಗುತ್ತಿದ್ದು, ಉತ್ತರಪ್ರದೇಶ ಅಮರೋಹಿ ಜಿಲ್ಲೆಯ ಶಬ್ನಮ್​ ಮರಣ ದಂಡನೆಗೆ ಗುರಿಯಾಗಿರುವ ಆರೋಪಿಯಾಗಿದ್ದಾರೆ.

ಅಮರೋಹಿ ಜಿಲ್ಲೆಯ ಬಾಬನ್​ಕೊಡಿ ಗ್ರಾಮದಲ್ಲಿ 2018ರ ಏಪ್ರಿಲ್​​ 14-15ರ ರಾತ್ರಿ ತನ್ನ ಲವರ್ ಸಲೀಂ​ನೊಂದಿಗೆ ಸೇರಿ ಶಬ್ನಮ್​ ತನ್ನ ಕುಟುಂಬದ ಏಳು ಸದಸ್ಯರ ಹತ್ಯೆ ಮಾಡಿದ್ದಳು. ಕೃತ್ಯದಲ್ಲಿ ಭಾಗಿಯಾಗಿದ್ದ ಮಹಿಳೆ ಹಾಗೂ ಆಕೆಯ ಲವರ್​ ಸಲೀಂಗೆ ಮರಣದಂಡನೆ ವಿಧಿಸಿ ಸುಪ್ರೀಂಕೋರ್ಟ್ ಮಹತ್ವದ ಆದೇಶ ನೀಡಿತ್ತು. ಇದಕ್ಕೆ ರಾಷ್ಟ್ರಪತಿ ಅಂಕಿತ ಕೂಡ ಹಾಕಿದ್ದರು. ಇದನ್ನ ಪ್ರಶ್ನೆ ಮಾಡಿ ಕ್ಯುರೇಟಿವ್ ಅರ್ಜಿ ಸಲ್ಲಿಕೆ ಮಾಡಿದ್ದರಿಂದ ಪ್ರಕರಣವನ್ನ ಮತ್ತೊಮ್ಮೆ ವಿಚಾರಣೆ ನಡೆಸಲಾಗಿತ್ತು. ಆದರೆ ಅದು ವಜಾಗೊಂಡಿತ್ತು.

ಓದಿ: ನಾಯಿಗೆ ನರಕಯಾತನೆ, ಯುವಕರಿಗೆ ಚೆಲ್ಲಾಟ.. ಕಲ್ಲು ಹೃದಯಕೆ ಕೇಳಲಿಲ್ಲವೇ ಶ್ವಾನದ ಕಣ್ಣೀರ ಕೂಗು..!?

ಮಥುರಾ ಜೈಲಿನಲ್ಲಿ ಮಹಿಳೆಯನ್ನ ಗಲ್ಲಿಗೇರಿಸಲಾಗುತ್ತಿದ್ದು, ಸ್ವತಂತ್ರ ಭಾರತದ ಇತಿಹಾಸದಲ್ಲಿ ನಡೆಯುತ್ತಿರುವ ಮೊದಲ ಮಹಿಳಾ ಗಲ್ಲು ಶಿಕ್ಷೆ ಇದಾಗಿದೆ. ಜೈಲಿನಲ್ಲಿ ಇದಕ್ಕಾಗಿ ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಜೈಲರ್​ ಮಾಹಿತಿ ನೀಡಿದ್ದು, ಡೆತ್​ ವಾರಂಟ್​ ತಮ್ಮ ಕೈಗೆ ಸಿಗುತ್ತಿದ್ದಂತೆ ಗಲ್ಲಿಗೇರಿಸಲಾಗುವುದು ಎಂದು ಹೇಳಿದ್ದಾರೆ.

ಲವರ್​ ಸಲೀಂ ಜತೆ ಸೇರಿ ಶಬ್ನಮ್​ ತನ್ನ ಕುಟುಂಬದ ತಂದೆ ಶಾಕುಂತ್​, ತಾಯಿ ಹಾಸ್ಮಿಂ, ಸಹೋದರರಾದ ಅನ್ಸಿ ಹಾಗೂ ರಾಶೀದ್​, ಸೋದರ ಮಾವ ಅಜುಂ ಹಾಗೂ ಸಹೋದರಿ ರಾಬಿಯನ್ನ ಕೊಲೆ ಮಾಡಿದ್ದರು. ಇದೇ ವೇಳೆ ಸೋದರಳಿಯನನ್ನು ಕೊಲೆ ಮಾಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.