ಪಾಟ್ನಾ: ನಿರಂತರ ಮಳೆಯ ಮಧ್ಯೆ ಬಿಹಾರದ ಹಲವು ನದಿಗಳ ನೀರಿನ ಮಟ್ಟವು ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ ಎಂದು ವರದಿಯಾಗಿದೆ. ಉತ್ತರ ಬಿಹಾರ ಮತ್ತು ಸೀಮಾಂಚಲ್ ಪ್ರದೇಶದಲ್ಲಿ ಗಂಡಕ್, ಬುರ್ಹಿ ಗಂಡಕ್, ಕಮಲಾ ಬಾಲನ್, ಕೋಸಿ, ಮಹಾನಂದ, ಪರ್ಮನ್ ನದಿಗಳು ಅಪಾಯದ ಮಟ್ಟ ಮೀರು ಹರಿಯುತ್ತಿವೆ.
ಗಂಗಾ ನದಿಯ ನೀರಿನ ಮಟ್ಟ ಕಳೆದ 24 ಗಂಟೆಗಳಲ್ಲಿ ಅಪಾಯದ ಮಟ್ಟಕ್ಕಿಂತ ಹೆಚ್ಚಿದ್ದು, 2.67 ಮೀಟರ್ಗೆ ಏರಿದೆ. ಪಾಟ್ನಾ ಜಿಲ್ಲೆಯಲ್ಲಿ ಕನಿಷ್ಠ 45 ಮಿ.ಮೀ ಮಳೆಯಾಗಿದ್ದರೆ, ಕಳೆದ 24 ಗಂಟೆಗಳಲ್ಲಿ ಬಿಹಾರದ 11 ಜಿಲ್ಲೆಗಳಲ್ಲಿ ಸರಾಸರಿ 25 ಮಿ.ಮೀ ಮಳೆಯಾಗಿದೆ.
ಗಂಗಾ ನದಿಯ ನೀರಿನ ಮಟ್ಟವು ಭಾಗಲ್ಪುರ್ ಜಿಲ್ಲೆಯ ಬಕ್ಸಾರ್‌ನಿಂದ ಕಹಲ್‌ಗಾಂವ್‌ವರೆಗೆ ಹೆಚ್ಚಾಗಿದೆ ಎಂದು ತಿಳಿದು ಬಂದಿದೆ. ಪಾಟ್ನಾದ ಹೊರತಾಗಿ ಮುಂಗರ್ನಲ್ಲಿ ನೀರಿನ ಮಟ್ಟವು ಅಪಾಯದ ಗುರುತುಗಿಂತ 1.16 ಮೀಟರ್ ಮತ್ತು ಭಾಗಲ್ಪುರದಲ್ಲಿ 1.10 ಮೀಟರ್ ಹೆಚ್ಚಾಗಿದೆ. ಪಾಟ್ನಾದ ದಿಘಾ ಘಾಟ್‌ನಲ್ಲಿ ನೀರಿನ ಮಟ್ಟವು ಅಪಾಯದ ಮಟ್ಟಕ್ಕಿಂತ ಕೇವಲ 86 ಸೆಂ.ಮೀಗಿಂತ ಕಡಿಮೆಯಾಗಿದೆ.
ಗಂಗಾ ನದಿಯಲ್ಲದೇ ಗೋಪಾಲಗಂಜ್, ಮುಜಾಫರ್ಪುರ್ ಮತ್ತು ವೈಶಾಲಿ ಜಿಲ್ಲೆಗಳಲ್ಲಿ ಗಂಡಕ್ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ವೀರ್ಪುರ್ ಮತ್ತು ಸಹರ್ಸಾದ ಕೋಸಿ ನದಿಯ ನೀರಿನ ಮಟ್ಟವು ಕ್ರಮವಾಗಿ 43 ಮತ್ತು 9 ಸೆಂಟಿಮೀಟರ್ ಆಗಿದ್ದು, ಅಪಾಯದ ಮಟ್ಟಕ್ಕಿಂತ ಹೆಚ್ಚಾಗಿದೆ. ಸೀಮಾಂಚಲ್ ಪ್ರದೇಶದ ಪೂರ್ಣಿಯಾ ಮತ್ತು ಕಟಿಹಾರ್ ಜಿಲ್ಲೆಗಳಲ್ಲಿನ ಮಹಾನಂದ ನದಿ ಮತ್ತು ಕಮಲಾ ಬಾಲನ್ ಅರೇರಿಯಾ ಜಿಲ್ಲೆಯ ಜೈನಗರ ಮತ್ತು ಪರ್ಮನ್ ನದಿಯಲ್ಲಿಯೂ ಅಪಾಯದ ಮಟ್ಟಕ್ಕಿಂತ ಹೆಚ್ಚಾಗಿದೆ.
ರಾಜ್ಯ ವಿಪತ್ತು ನಿರ್ವಹಣಾ ನಿಧಿ (ಎಸ್‌ಡಿಆರ್‌ಎಫ್) ಅಧಿಕಾರಿಯೊಬ್ಬರು ಈ ಬಗ್ಗೆ ಮಾಹಿತಿ ನೀಡಿದ್ದು, ತಗ್ಗು ಪ್ರದೇಶಗಳಲ್ಲಿ ವಾಸಿಸುತ್ತಿದ್ದ ಜನರು ಪ್ರವಾಹ ಭೀತಿಯಿಂದ ಮನೆಗಳನ್ನು ತೊರೆದು ರಸ್ತೆಬದಿಯಲ್ಲಿ ಆಶ್ರಯ ಪಡೆದಿದ್ದಾರೆ ಎಂದಿದ್ದಾರೆ.
ಪಶ್ಚಿಮ ಚಂಪಾರಣ್ ಜಿಲ್ಲೆಯಲ್ಲಿ 13 ಬ್ಲಾಕ್ಗಳ ಸುಮಾರು 1.5 ಲಕ್ಷ ಜನರ ಮೇಲೆ ಪ್ರವಾಹ ಪರಿಣಾಮ ಬೀರಿದೆ. ಗೋಪಾಲ್‌ಗಂಜ್‌ನ 6 ಬ್ಲಾಕ್‌ಗಳು ಮತ್ತು ಸರನ್ ಜಿಲ್ಲೆಯ 3 ಬ್ಲಾಕ್‌ಗಳಲ್ಲಿ ವಸತಿ ಪ್ರದೇಶಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿಯುಂಟಾಗಿದೆ.
ಪಾಟ್ನಾ, ಗಯಾ, ನಳಂದ, ಮುಜಫರ್ಪುರ್, ಪಶ್ಚಿಮ ಚಂಪಾರಣ್, ಪೂರ್ವ ಚಂಪಾರಣ್ ಮತ್ತು ಸರನ್ ಜಿಲ್ಲೆಗಳು ಸೇರಿದಂತೆ 27 ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಮಳೆಯಾಗುವ ಸಾಧ್ಯತೆಯಿದೆ. ಇನ್ನು ಗುಡುಗು ಮಿಂಚಿನೊಂದಿಗೆ ಗಾಳಿಯ ವೇಗವು ಗಂಟೆಗೆ 30 ರಿಂದ 40 ಕಿ.ಮೀ ವೇಗದಲ್ಲಿ ಬೀಸುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.